ರಕ್ತ ಹೀನತೆಗೆ ಮನೆಯಲ್ಲೇ ಉಪಚಾರ

blood loss vijayaprabha blood loss vijayaprabha

ರಕ್ತ ಹೀನತೆಗೆ ಮನೆಯಲ್ಲೇ ಉಪಚಾರ: 

1. ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತ ಹೀನತೆಗೆ ಆಹಾರದಲ್ಲಿ ಸೊಪ್ಪುಗಳನ್ನು ಹೆಚ್ಚು ಬಳಸಬೇಕು, ಚಕ್ರಮುನಿ, ಪಾಲಕ್, ಮೆಂತ್ಯ, ಹರಿವೆ, ದಂಟುಹರಿವೆ, ಕೊತ್ತಂಬರಿ, ಕರಿಬೇವು ಮುಂತಾದ ಸೊಪ್ಪುಗಳನ್ನು ಹೆಚ್ಚಾಗಿ ಬಳಸಬೇಕು. ಎಲ್ಲ ಸೊಪ್ಪುಗಳಿಗಿಂತ ಹೆಚ್ಚು ಕಬ್ಬಿಣಾಂಠ ಚಕ್ರಮುನಿ ಸೊಪ್ಪಿನಲ್ಲಿರುವುದರಿಂದ ಅದನ್ನು ಪದೇ ಪದೇ ಬಳಸಬೇಕು. ಕೊತ್ತಂಬರಿ ಸೊಪ್ಪಿನ ರಸ ತೆಗೆದು ಹಾಗೇ ಕುಡಿಯಬಹುದು.

2. ಮಕ್ಕಳಿಗೆ ಕೊತ್ತಂಬರಿ ರಸದೊಂದಿಗೆ ಜೇನು ತುಪ್ಪ ಬೆರೆಸಿ ಕುಡಿಸಬಹುದು. ಮೆಂತ್ಯೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಉಪ್ಪು, ಲಿಂಬೇ ರಸ ಬೆರೆಸಿ ಸಲಾಡ್ ಮಾಡಿ ರೊಟ್ಟಿ, ಚಪಾತಿಯೊಂದಿಗೆ ತಿನ್ನಬಹುದು. ಮೆಂತ್ಯೆ, ಕೊತ್ತಂಬರಿ ಸೊಪ್ಪನ್ನು ಚಪಾತಿ ರೊಟ್ಟಿಯೊಂದಿಗೆ ಬೆರೆಸಿ ತಯಾರಿಸಬಹುದು. ಪುದೀನಾ ಚಟ್ಟಿ, ಶರಬತ್, ಚಿತ್ರಾನ್ನಗಳನ್ನು ತಯಾರಿಸಬಹುದು. ಗೋಧಿ ಹಾಗೂ ಸಜ್ಜೆಯನ್ನು ಹುರಿದು ಪಾಕ ತಯಾರಿಸಿ, ತುಪ್ಪ ಬೆರಸಿ ಉಂಡೆ ಕಟ್ಟಬಹುದು. ಗೋಧಿ, ರಾಗಿಯ ಹುರಿಯಿಟ್ಟು ಮಾಡಿ ತಿನ್ನಬಹುದು.

Advertisement

ಕರಿ ಎಳ್ಳನ್ನು ನೆನೆಸಿ ಅರೆದು ಹಾಲು, ಬೆಲ್ಲ ಸೇರಿಸಿ ಕುಡಿಯಬಹುದು. ಇಲ್ಲವೆ ಎಳ್ಳು ಹುರಿದು. ಪುಡಿ ಮಾಡಿ ಹೆಲ್ಲ ಪಾಕದಿಂದ ಉಂಡೆ ಕಟ್ಟಿ ತಿನ್ನಬಹುದು. ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದಲ್ಲಿ ಅದರಲ್ಲಿರುವ ಕಬ್ಬಿಣಾಂಶ ದೇಹಕ್ಕೆ ಲಭ್ಯವಾಗುತ್ತದೆ. ಜೀವಸತ್ವ ಹೆಚ್ಚಾಗಿರುವ ಮೊಳಕೆ ಕಾಳುಗಳು, ಕಿತ್ತಲೆ, ಮೂಸುಂಬೆ, ಲಿಂಬೆ ಹೆಚ್ಚು ಸೇವಿಸಬೇಕು.

3. ಆಶ್ವಗಂಧದ ಬೇರನ್ನು ಕುಟ್ಟಿ ಪುಡಿ ಮಾಡಿ ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಇಲ್ಲವೇ ಜೇನು ತುಪ್ಪದಲ್ಲಿ ಬೆರೆಸಿ ಕುಡಿಯಬೇಕು.

4. ಆಡುಸೋಗೆ ರಸಕ್ಕೆ ಜೇನು ತುಪ್ಪ ಬೆರೆಸಿ ಕುಡಿಯಬೇಕು.

5. ಚಕ್ರಮುನಿ ಸೊಪ್ಪಿನ ಪಲ್ಯ, ತೊವ್ವ, ಸಾರು, ಇಡ್ಲಿ, ದೋಸೆ, ರೊಟ್ಟಿ ಮುಂತಾದವುಗಳನ್ನು ತಯಾರಿಸಬಹುದು. ಚಟ್ಟಿ, ತಂಬುಳಿ, ವಡೆ ಕೂಡಾ ಸಿದ್ದ ಪಡಿಸಬಹುದು.

6. ನುಗ್ಗೆ ಸೊಪ್ಪು ಕಬ್ಬಿಣಾಂಶದ ಆಗರ. ಎಳೆಯ ಎಲೆ ಮತ್ತು ಹೂವಿಗೆ ಉಪ್ಪು ಬೆರೆಸಿ ಬೇಯಿಸಿ ಕುಡಿಯಬೇಕು.

7. ಪುಂಡಿ ಸೊಪ್ಪಿನ ಪಲ್ಯ, ಚಟ್ಟಿ ತಯಾರಿಸಬಹುದು.

8. ಬಸಳೆ ದೋಸೆ, ದಂಟಿನ ಸಾಂಬಾರ್, ಸೊಪ್ಪಿನ ಕೂಟು, ಇಡ್ಲಿ, ಉಮರು ಪಲ್ಯ, ಬೇಳೆಯೊಂದಿಗೆ ಬೆರೆಸಿ ಪಲ್ಯ ತಯಾರಿಸಬಹುದು. ಉದ್ದಿನ ಬೇಳೆ ಬದಲು ಬಸಳೆ ಬೆರೆಸಿ
ರುಬ್ಬಿಕೊಂಡು ಇಡ್ಲಿ ತಯಾರಿಸಬಹುದು.

10.ತರಕಾರಿಗಳಲ್ಲಿ ಬೀಟ್ ರೂಟ್, ಕ್ಯಾರೆಟ್, ಬದನೇ ಕಾಯಿ, ನುಗ್ಗೆ ಕಾಯಿ, ಗೋರಿಕಾಯಿ, ಈರುಳ್ಳಿ ಮೂಲಂಗಿಗಳಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಹಣ್ಣುಗಳಲ್ಲಿ ಬಾಳೇ ಹಣ್ಣು, ಅಂಜೂರ, ಸೇಬು, ಸೀಬೆ, ಪಪಾಯಿ, ಮಾವಿನ ಹಣ್ಣುಗಳಲ್ಲೂ ಕಬ್ಬಿಣಾಂಶವಿರುತ್ತದೆ, ಕಲ್ಲಂಗಡಿ ಹಣ್ಣಿನಲ್ಲಿ ಅತ್ಯಧಿಕ ಕಬ್ಬಿಣಾಂಶವಿರುತ್ತದೆ.

11, ಒಣ ಹಣ್ಣುಗಳಲ್ಲಿ ಖರ್ಚೂರ, ಒಣದ್ರಾಕ್ಷಿ, ಬಾದಾಮಿ, ಅಂಜೂರಗಳಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಒಣ ಹಣ್ಣುಗಳಿಂದ ತಯಾರಿಸುವ ಈ ಉಂಡೆಯನ್ನು ಚಾಣಾಂತಿಯರಿಗೆ ತಿನ್ನಲು ಕೊಡುವುದು ರೂಢಿ.

12. ನೆಲ್ಲಿ ಕಾಯಿ ರಸ ಅಥವಾ ಪುಡಿ ಮತ್ತು ಜೇನುತುಪ್ಪ ಬೆರೆಸಿ ಪ್ರತಿದಿನ ಬೆಳಿಗ್ಗೆ ಸಂಜೆ ಸೇವಿಸಬೇಕು.

13.ಒಂದು ಲೋಟ ಕಬ್ಬಿನ ರಸದಲ್ಲಿ ಗೋಧಿ ಹಿಟ್ಟನ್ನು ಹುರಿದು ಬೆರೆಸಿ ಕುಡಿಯಬೇಕು.

14.ಕೆಂಪು ಉತ್ತರಾಣಿ ದಡಿಯ ರಸ ಮತ್ತು ಹಳೆಯ ಬೆಲ್ಲ ಎರಡನ್ನು ಸೇರಿಸಿ ಕುಡಿಯಬೇಕು.

15. ಕ್ಯಾರೆಟ್ ಜ್ಯೂಸ್ ತಯಾರಿಸಿ ಕುಡಿಯಬೇಕು.

16.ರಕ್ತ ಹೀನತೆಗೆ ಜೇನುತುಪ್ಪದಷ್ಟು ಉತ್ಕೃಷ್ಟ ಔಷಧಿ ಮತ್ತು ಆಹಾರ ಬೇರೊಂದಿಲ್ಲ, ಹಾಲಿನಲ್ಲಿ, ನೀರಿನಲ್ಲಿ ಕುಡಿಯುವುದಲ್ಲದೇ ಕಾಫಿ, ಟೀಗೂ ಬೆರೆಸಿ ಕುಡಿಯಬಹುದು.

19,ತುಪ್ಪ, ಬೆಲ್ಲ, ಬೀಟರೂಟ್, ಪಾಲಕ.

ಪಾತ್ರೆ ಬಿಸಿ ಮಾಡಿ ಒಂದು ಚಮಚ ತುಪ್ಪ ಹಾಕಿ, ಬೆಲ್ಲ ಹಾಕಬೇಕು, ಕಂದು ಬಣ್ಣ ಬಂದ ಕೂಡಲೇ ಬೀಟರೂಟ್ ಪೇಸ್ಟ್ ಮತ್ತು ಪಾಲಕ ಸೊಪ್ಪು ಸೇರಿಸಬೇಕು. ಸಿದ್ದವಾದ ಔಷಧವನ್ನು ದಿನಕ್ಕೆ 2 ಬಾರಿ ಊಟದ ನಂತರ, ಒಂದು ಚಿಕ್ಕ ಬಟ್ಟಲಿನಷ್ಟು ಸೇವಿಸಬೇಕು.

20.ಕರಿಬೇವು, ಒಣದ್ರಾಕ್ಷಿ, ಉಪ್ಪು, 1 ಲೋಟ ಮಜ್ಜಿಗೆ.

ಕರಿಬೇವು ೭-8 ಎಲೆಗಳು, 1/2 ಚಮಚ ಒಣದ್ರಾಕ್ಷಿ, ಚಿಟಿಕೆ ಉಪ್ಪು ಹಾಕಿ, ಚೆನ್ನಾಗಿ ಪೇಸ್ಟ್ ಮಾಡಿ ೧ ಲೋಟ ಮಜ್ಜಿಗೆಗೆ ಸೇರಿಸಿ ಚೆನ್ನಾಗಿ ಕರಗಿಸಿ, 1/2 ಚಮಚ ಜೇನು ಹಾಕಿ ಚೆನ್ನಾಗಿ ಕಲಕಿ ಕುಡಿಯಬೇಕು. ಊಟದ ನಂತರ ಒಂದು ಬಾರಿ ಸೇವಿಸಬೇಕು.

ಇದನ್ನು ಓದಿ: ಸಕ್ಕರೆ ಕಾಯಿಲೆ ಅಥವಾ ಸಿಹಿ ಮೂತ್ರಕ್ಕೆ ಮನೆ ಔಷದಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement