Current Bill Hike: ₹4,500 ಕೋಟಿ ನಷ್ಟದಲ್ಲಿ ಎಸ್ಕಾಂಗಳು; ಏಪ್ರಿಲ್‌ನಿಂದ ಮತ್ತೆ ಕರೆಂಟ್ ಬಿಲ್ ದುಬಾರಿ!

ಬೆಂಗಳೂರು: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ದಿನನಿತ್ಯದ ಬದುಕಿಗೆ ಅತ್ಯಾವಶ್ಯಕವಾಗಿರುವ ವಿದ್ಯುತ್ ದರ (Electricity Tariff) ಏಪ್ರಿಲ್ 1 ರಿಂದ ಮತ್ತೆ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.…

"A close-up of an electricity meter mounted on a wall. Representative image for the upcoming electricity tariff hike and power bill increase in Karnataka."

ಬೆಂಗಳೂರು: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ದಿನನಿತ್ಯದ ಬದುಕಿಗೆ ಅತ್ಯಾವಶ್ಯಕವಾಗಿರುವ ವಿದ್ಯುತ್ ದರ (Electricity Tariff) ಏಪ್ರಿಲ್ 1 ರಿಂದ ಮತ್ತೆ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಹೌದು, ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ESCOMs) ತೀವ್ರ ಆರ್ಥಿಕ ನಷ್ಟದಲ್ಲಿ ಸಿಲುಕಿದ್ದು, ಈ ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ.

"A close-up of an electricity meter mounted on a wall. Representative image for the upcoming electricity tariff hike and power bill increase in Karnataka."
“ರಾಜ್ಯದ ಎಸ್ಕಾಂಗಳು ಭಾರೀ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ನಿಮ್ಮ ಮನೆಯ ವಿದ್ಯುತ್ ದರ (ಕರೆಂಟ್ ಬಿಲ್) ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ (ಸಾಂಕೇತಿಕ ಚಿತ್ರ).”

ಎಸ್ಕಾಂಗಳ ನಷ್ಟದ ಅಸಲಿ ಲೆಕ್ಕಾಚಾರವೆಷ್ಟು?

ವಿದ್ಯುತ್ ದರ ಏರಿಕೆಗೆ ಎಸ್ಕಾಂಗಳು ಪಟ್ಟು ಹಿಡಿಯಲು ಮುಖ್ಯ ಕಾರಣ ಅವುಗಳ ಆರ್ಥಿಕ ಮುಗ್ಗಟ್ಟು.

Vijayaprabha Mobile App free

ಒಟ್ಟು ನಷ್ಟ: ರಾಜ್ಯದ ಎಲ್ಲಾ ಎಸ್ಕಾಂಗಳು ಸೇರಿ ಅಂದಾಜು ₹4,500 ಕೋಟಿಗಳಷ್ಟು ಭಾರಿ ನಷ್ಟದಲ್ಲಿವೆ.

ಬೆಸ್ಕಾಂ ಪಾಲು: ಕೇವಲ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಒಂದರಲ್ಲೇ 2024-25ನೇ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ ₹2,800 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.

ಇದನ್ನೂ ಓದಿ: ರೈತರಿಗೆ ಭರ್ಜರಿ ಗುಡ್ ನ್ಯೂಸ್: ಸೌರ ಪಂಪ್‌ಸೆಟ್ ಅಳವಡಿಕೆಗೆ ಸರ್ಕಾರದಿಂದ ಶೇ.80ರಷ್ಟು ಬಂಪರ್ ಸಬ್ಸಿಡಿ!

ಸಾರ್ವಜನಿಕರ ಅಭಿಪ್ರಾಯಕ್ಕೆ KERC ಮುಕ್ತ ಅವಕಾಶ

ದರ ಏರಿಕೆಯು ಸಾಮಾನ್ಯ ಜನರ ಜೇಬಿಗೆ ನೇರ ಕತ್ತರಿ ಹಾಕುವುದರಿಂದ, KERC ಏಕಾಏಕಿ ದರ ಹೆಚ್ಚಿಸುವ ಬದಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದು,ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂಗಳು ಸಲ್ಲಿಸಿರುವ ದರ ಏರಿಕೆ ಪ್ರಸ್ತಾವನೆಯ ಕುರಿತು ಫೆಬ್ರವರಿ 16 ರಿಂದ ಫೆಬ್ರವರಿ 27 ರವರೆಗೆ ರಾಜ್ಯಾದ್ಯಂತ ಸಾರ್ವಜನಿಕ ವಿಚಾರಣಾ ಸಭೆಗಳನ್ನು ನಡೆಸಲಾಗುತ್ತಿದೆ.

ಈ ಸಭೆಗಳಲ್ಲಿ ಗ್ರಾಹಕರು, ರೈತ ಮುಖಂಡರು ಹಾಗೂ ಸಂಘಟನೆಗಳು ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ನೇರವಾಗಿ ಮಂಡಿಸಬಹುದಾಗಿದೆ.

ಏಪ್ರಿಲ್ 1 ರಿಂದಲೇ ಹೊಸ ದರ ಜಾರಿ?

ಇನ್ನು ವಾಸ್ತವವಾಗಿ, 2025 ರಿಂದ 2028ರ ವರೆಗಿನ ಆರ್ಥಿಕ ವರ್ಷಗಳಿಗೆ ಈಗಾಗಲೇ ವಿದ್ಯುತ್ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ಪ್ರಸ್ತುತ ಎದುರಾಗಿರುವ ಬೃಹತ್ ನಷ್ಟವನ್ನು ಬ್ಯಾಲೆನ್ಸ್ ಮಾಡಲು ‘ಹೆಚ್ಚುವರಿ ದರ ಏರಿಕೆ’ಗೆ KERC ಗಂಭೀರ ಚಿಂತನೆ ನಡೆಸಿದ್ದು, ಸಾರ್ವಜನಿಕ ವಿಚಾರಣೆ ಮುಕ್ತಾಯಗೊಂಡ ಬಳಿಕ, ಪರಿಷ್ಕೃತ ನೂತನ ವಿದ್ಯುತ್ ದರಗಳು ಏಪ್ರಿಲ್ 1 ರಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಉದ್ಯೋಗ: ₹46,675 ಸಂಬಳ, ಕೂಡಲೇ ಅರ್ಜಿ ಸಲ್ಲಿಸಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply