ಕೃಷಿ ಯೋಜನೆ (Agriculture): ರಾಜ್ಯದ ರೈತರು ಎದುರಿಸುತ್ತಿರುವ ವಿದ್ಯುತ್ ಕಡಿತ ಹಾಗೂ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಮಹತ್ವದ ಹೆಜ್ಜೆಯಿಟ್ಟಿದ್ದು, ‘ಪಿಎಂ-ಕುಸುಮ್’ (PM-KUSUM) ಯೋಜನೆಯಡಿ ರೈತರಿಗೆ ತಮ್ಮ ಜಮೀನಿನಲ್ಲಿ ಸೌರ ಚಾಲಿತ ಪಂಪ್ಸೆಟ್ (Solar Pump) ಅಳವಡಿಸಿಕೊಳ್ಳಲು ಬರೋಬ್ಬರಿ ಶೇ.80ರಷ್ಟು ಬಂಪರ್ ಸಹಾಯಧನ (ಸಬ್ಸಿಡಿ) ನೀಡಲಾಗುತ್ತಿದೆ.
ಇದನ್ನೂ ಓದಿ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಉದ್ಯೋಗ: ₹46,675 ಸಂಬಳ, ಕೂಡಲೇ ಅರ್ಜಿ ಸಲ್ಲಿಸಿ!
ಹೌದು, ಇದೊಂದು ಅದ್ಭುತ ಅವಕಾಶವಾಗಿದ್ದು, ರೈತರು ಕೇವಲ 20% ವೆಚ್ಚವನ್ನು ಮಾತ್ರ ಭರಿಸಿದರೆ ಸಾಕು, ಉಳಿದ 80% ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಪಿಎಂ-ಕುಸುಮ್ ಯೋಜನೆಯ ಪ್ರಮುಖ ಲಾಭಗಳು:

- ಉಚಿತ ವಿದ್ಯುತ್: ಕರೆಂಟ್ ಬಿಲ್ ಕಟ್ಟುವ ಚಿಂತೆ ಇರುವುದಿಲ್ಲ, ಸೂರ್ಯನ ಬೆಳಕಿನಿಂದ ಉಚಿತ ವಿದ್ಯುತ್ ಉತ್ಪಾದನೆಯಾಗುತ್ತದೆ.
- ಹಗಲಿನಲ್ಲಿ ನಿರಂತರ ನೀರು: ರಾತ್ರಿ ವೇಳೆ ಹೊಲಕ್ಕೆ ನೀರು ಹಾಯಿಸುವ ಕಷ್ಟ ತಪ್ಪಲಿದ್ದು, ಹಗಲು ಹೊತ್ತಿನಲ್ಲೇ ನಿರಂತರವಾಗಿ ಕೃಷಿಗೆ ನೀರು ಒದಗಿಸಬಹುದು.
- ಹೆಚ್ಚುವರಿ ಆದಾಯ: ಪಂಪ್ಸೆಟ್ ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಮಾರಿ ರೈತರು ಆದಾಯ ಕೂಡ ಗಳಿಸಬಹುದು.
- ಪರಿಸರ ಸ್ನೇಹಿ: ಇದು ಸಂಪೂರ್ಣವಾಗಿ ಪರಿಸರ ಸ್ನೇಹಿ ಕೃಷಿ ವಿಧಾನವಾಗಿದೆ.
ಇದನ್ನು ಓದಿ: RBI Recruitment 2026: ಡಿಗ್ರಿ ಆಗಿದ್ರೂ ಸಾಕು, ಆರ್ಬಿಐ (RBI) ನಲ್ಲಿ ಭರ್ಜರಿ ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
ಯೋಜನೆಯ ಲಾಭ ಪಡೆಯಲು ರೈತರು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:
- ರೈತರ ಆಧಾರ್ ಕಾರ್ಡ್ (Aadhaar Card)
- ಜಮೀನಿನ ಪಹಣಿ / ಆರ್ಟಿಸಿ (RTC)
- ಬ್ಯಾಂಕ್ ಪಾಸ್ಬುಕ್ ಪ್ರತಿ (Bank Passbook)
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಈ ನಿಯಮ ನೆನಪಿರಲಿ:
ಈಗಾಗಲೇ ಸರ್ಕಾರದಿಂದ ಯಾವುದೇ ಸೌರ ಪಂಪ್ಸೆಟ್ ಸಬ್ಸಿಡಿ ಯೋಜನೆಯ ಲಾಭ ಪಡೆದ ರೈತರಿಗೆ ಈ ಬಾರಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ (ಷರತ್ತು ಅನ್ವಯ).
ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (KREDL) ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.




