Post Office RD Scheme: ಭವಿಷ್ಯಕ್ಕಾಗಿ ಒಂದೇ ಸಲ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಲು ಸಾಧ್ಯವಾಗದ ಜನರಿಗೆ, ಪೋಸ್ಟ್ ಆಫೀಸ್‌ನಲ್ಲಿರುವ ಬೆಸ್ಟ್ ಪ್ಲಾನ್ ಎಂದರೆ ‘ರೆಕರಿಂಗ್ ಡೆಪಾಸಿಟ್’ (Post Office RD Scheme).
ಹೌದು, ಇಲ್ಲಿ ನೀವು ಪ್ರತಿದಿನ ಸ್ವಲ್ಪ ಸ್ವಲ್ಪ ಹಣ ಕೂಡಿಟ್ಟರೆ, ಮುಂದೊಂದು ದಿನ ಅದೇ ಹಣ ನಿಮಗೆ ಲಕ್ಷ ಲಕ್ಷ ರಿಟರ್ನ್ಸ್ ನೀಡುತ್ತದೆ. ಷೇರುಪೇಟೆಯ ರಿಸ್ಕ್ ಇಲ್ಲದೆ, ಸರ್ಕಾರದ 100% ಗ್ಯಾರಂಟಿಯೊಂದಿಗೆ ಹಣ ಬೆಳೆಸಲು ಇದು ಹೇಳಿ ಮಾಡಿಸಿದ ಸ್ಕೀಮ್.
ಇದನ್ನೂ ಓದಿ: RBI Recruitment 2026: ಡಿಗ್ರಿ ಆಗಿದ್ರೂ ಸಾಕು, ಆರ್‌ಬಿಐ (RBI) ನಲ್ಲಿ ಭರ್ಜರಿ ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ
17 ಲಕ್ಷ ರೂ. ಪಡೆಯುವ ಲೆಕ್ಕಾಚಾರ ಹೇಗೆ?

ನೀವು ಪ್ರತಿದಿನ ಕೇವಲ ₹333 ರಂತೆ ಉಳಿತಾಯ ಮಾಡಿದರೆ, ತಿಂಗಳಿಗೆ ₹10,000 ಆಗುತ್ತದೆ. ಈ ಹಣವನ್ನು ಪೋಸ್ಟ್ ಆಫೀಸ್ RD ಖಾತೆಯಲ್ಲಿ ಜಮಾ ಮಾಡುತ್ತಾ ಬಂದರೆ, 5 ವರ್ಷಕ್ಕೆ ನಿಮಗೆ ಅಂದಾಜು ₹7.13 ಲಕ್ಷ ಕೈ ಸೇರುತ್ತದೆ. 10 ವರ್ಷಕ್ಕೆ ಅದೇ ಯೋಜನೆಯನ್ನು ಮುಂದುವರಿಸಿದರೆ ಬಡ್ಡಿ ಸೇರಿ ಬರೋಬ್ಬರಿ ₹17.08 ಲಕ್ಷ ನಿಮ್ಮದಾಗುತ್ತದೆ!. (ಪ್ರಸ್ತುತ ಪೋಸ್ಟ್ ಆಫೀಸ್ RD ಗೆ ವಾರ್ಷಿಕ 6.7% ಬಡ್ಡಿ ನೀಡಲಾಗುತ್ತಿದೆ.)
ಇದನ್ನೂ ಓದಿ: School Admission 2026: LKG, UKG ಮತ್ತು 1ನೇ ಕ್ಲಾಸ್‌ಗೆ ಅಡ್ಮಿಷನ್ ರೂಲ್ಸ್ ಚೇಂಜ್! ವಯೋಮಿತಿ ಫಿಕ್ಸ್ ಮಾಡಿದ ಸರ್ಕಾರ
ಪೋಸ್ಟ್ ಆಫೀಸ್ RD ಯೋಜನೆಯ ಪ್ರಮುಖ ಲಾಭಗಳು:
- ಬಡವರ ಫ್ರೆಂಡ್ಲಿ: ಈ ಅಕೌಂಟ್ ತೆರೆಯಲು ಸಾವಿರಾರು ರೂಪಾಯಿ ಬೇಕಿಲ್ಲ, ಕೇವಲ ₹100 ಇದ್ದರೆ ಸಾಕು!
- ಸುರಕ್ಷತೆ (Safe Investment): ಇದು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆ ಇರುತ್ತದೆ.
- ಸಾಲ ಸೌಲಭ್ಯ (Loan Facility): ಮಧ್ಯದಲ್ಲಿ ತುರ್ತು ಹಣದ ಅಗತ್ಯ ಬಂದರೆ, ನಿಮ್ಮ ಠೇವಣಿಯ ಆಧಾರದ ಮೇಲೆ ಸಾಲವನ್ನೂ ಪಡೆಯಬಹುದು.
- ಫ್ಲೆಕ್ಸಿಬಲ್: ಪ್ರತಿ ತಿಂಗಳು ನಿಮ್ಮ ಕೈಲಾದಷ್ಟು ಕನಿಷ್ಠ ಮೊತ್ತವನ್ನು ಆರಾಮಾಗಿ ಜಮಾ ಮಾಡಬಹುದು.
ನಿಮ್ಮ ಹತ್ತಿರದ ಯಾವುದೇ ಅಂಚೆ ಕಚೇರಿಗೆ (Post Office) ಭೇಟಿ ನೀಡಿ, ಇಂದೇ ಒಂದು RD ಅಕೌಂಟ್ ಓಪನ್ ಮಾಡಿ, ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ.
ಇದನ್ನೂ ಓದಿ: PM RAHAT Scheme: ಇನ್ಮುಂದೆ ರಸ್ತೆ ಅಪಘಾತವಾದರೆ 1 ರೂಪಾಯಿ ಖರ್ಚಿಲ್ಲ! 1.5 ಲಕ್ಷದವರೆಗೂ ಉಚಿತ ಚಿಕಿತ್ಸೆ




