ಬೆಂಗಳೂರು: ತಿಂಗಳಾಂತ್ಯದಲ್ಲಿ ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದೀರಾ? ಅಥವಾ ಅರ್ಜೆಂಟ್ ಆಗಿ ಸಣ್ಣ ಮೊತ್ತದ ಹಣ ಬೇಕಾಗಿದೆಯಾ? ಚಿಂತೆ ಬೇಡಬೇಡಿ ನಿಮ್ಮ ಜೇಬಿನಲ್ಲಿರುವ ಆಧಾರ್ ಕಾರ್ಡ್ ಬಳಸಿಕೊಂಡು ನೀವು ಮನೆಯಲ್ಲೇ ಕುಳಿತು 2,000 ರೂಪಾಯಿವರೆಗೆ ತ್ವರಿತ ಸಾಲ (Instant Loan) ಪಡೆಯಬಹುದು.
ಹೌದು, ಇತ್ತೀಚೆಗೆ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕೇವಲ ಆಧಾರ್ ಆಧಾರಿತವಾಗಿ “ಮೈಕ್ರೋ ಲೋನ್” (ಸಣ್ಣ ಸಾಲ) ನೀಡುತ್ತಿವೆ. ಅದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ದಾಖಲೆಗಳೇನೂ ಬೇಡ! (No Paperwork)
- ಹಿಂದಿನಂತೆ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ.
- ನಿಮ್ಮ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಸಾಕು.
- ಆನ್‌ಲೈನ್ ಆಪ್‌ಗಳಲ್ಲಿ ಇ-ಕೆವೈಸಿ (e-KYC) ಮಾಡಿ, ಬರುವ OTP ಹಾಕಿದರೆ ಸಾಕು.
- ನಿಮ್ಮ ದಾಖಲೆ ಸರಿಯಿದ್ದರೆ, ಕೇವಲ 10 ನಿಮಿಷದಲ್ಲಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.
ಎಚ್ಚರ! ಫೇಕ್ ಆಪ್‌ಗಳ ಹಾವಳಿ (Beware of Scams)
- ಸಾಲ ಸಿಗುತ್ತೆ ಅಂತ ಕಂಡ ಕಂಡ ಲಿಂಕ್ ಕ್ಲಿಕ್ ಮಾಡಬೇಡಿ.
- RBI ಮಾನ್ಯತೆ ಇದೆಯಾ?: ನೀವು ಲೋನ್ ಪಡೆಯುವ ಆಪ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದ ಅನುಮತಿ ಪಡೆದಿದೆಯಾ ಎಂದು ಚೆಕ್ ಮಾಡಿ.
- Play Store Only: ವಾಟ್ಸಾಪ್ ಅಥವಾ ಫೇಸ್‌ಬುಕ್‌ನಲ್ಲಿ ಬರುವ ಲಿಂಕ್ ನಂಬಬೇಡಿ. ಕೇವಲ Google Play Store ನಲ್ಲಿರುವ ಅಧಿಕೃತ ಆಪ್‌ಗಳನ್ನು ಮಾತ್ರ ಬಳಸಿ.
- ಅನುಮತಿ ನೀಡಬೇಡಿ: ಲೋನ್ ಆಪ್‌ನವರು ನಿಮ್ಮ ಫೋನ್‌ನ Gallery (ಫೋಟೋ) ಅಥವಾ Contact List (ಸಂಪರ್ಕ) ಆಕ್ಸೆಸ್ ಕೇಳಿದರೆ ಖಂಡಿತ ಕೊಡಬೇಡಿ. ಅವರು ಫ್ರಾಡ್ ಆಗಿರಬಹುದು.
ಬಡ್ಡಿ ಮತ್ತು ಮರುಪಾವತಿ (Interest & Repayment)
2,000 ರೂ. ಸಾಲ ಚಿಕ್ಕದಾದರೂ, ಅದಕ್ಕೆ ಪ್ರೊಸೆಸಿಂಗ್ ಫೀಸ್ (Processing Fee) ಮತ್ತು ಬಡ್ಡಿ ಇರುತ್ತದೆ. ಸಾಲ ಪಡೆಯುವ ಮುನ್ನವೇ ಅದನ್ನು ಓದಿಕೊಳ್ಳಿ. ಮರುಪಾವತಿ ಮಾಡುವಾಗ ಕಂಪನಿಯ ಅಧಿಕೃತ ಖಾತೆಗೆ ಹಣ ಹಾಕಿ, ಯಾವುದೇ ಏಜೆಂಟ್‌ನ ಪರ್ಸನಲ್ ನಂಬರ್‌ಗೆ ಹಣ ಹಾಕಬೇಡಿ.
ಸಿಬಿಲ್ ಸ್ಕೋರ್ ಮುಖ್ಯ
ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ಸಾಲ ಪಡೆಯಿರಿ. ಮತ್ತು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿರುತ್ತದೆ ಮತ್ತು ಭವಿಷ್ಯದಲ್ಲಿ ದೊಡ್ಡ ಸಾಲ ಸಿಗಲು ಸಹಾಯವಾಗುತ್ತದೆ.




