BREAKING: ಮತ್ತೆ 43 ಆಪ್ಸ್ ನಿಷೇಧ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ : ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ ಮತ್ತೆ 43 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಮಂಗಳವಾರ ಆದೇಶ ಹೊರಡಿಸಿದೆ. ಈ ಆಪ್ ಗಳು ದೇಶದ ಸಾರ್ವಭೌಮತ್ವ,…

ನವದೆಹಲಿ : ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ ಮತ್ತೆ 43 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಈ ಆಪ್ ಗಳು ದೇಶದ ಸಾರ್ವಭೌಮತ್ವ, ಭದ್ರತೆಗೆ ಮಾರಕವಾಗಿವೆ ಎಂಬ ಕಾರಣದಿಂದ ಕೇಂದ್ರ ಸರ್ಕಾರದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಅಲಿ ಸಪ್ಲಾಯರ್ಸ್, ಅಲಿಬಾಬಾ ವರ್ಕ್ ಬೆಂಚ್, ಅಲಿ ಎಕ್ಸ್ ಪ್ರೆಸ್, ಅಲಿಪೇ ಕ್ಯಾಶಿಯರ್, ಸ್ನಾಕ್ ವಿಡಿಯೋ, ಫ್ರೀ ಡೇಟಿಂಗ್ ಆಪ್, ಎಂ ಜಿ ಟಿವಿ, ಮ್ಯಾಂಗೋ ಟಿವಿ ಸೇರಿದಂತೆ 43 ಆಪ್ ‌ಗಳನ್ನು ನಿಷೇಧಿಸಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಜೂನ್ 29, 2020 ರಂದು 59 ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ಸೆಪ್ಟೆಂಬರ್ 2, 2020 ರಂದು ಪಬ್ ಜಿ ಸೇರಿ 118 ಚೀನಿ ಆಪ್ ಗಳನ್ನು ನಿಷೇಧಿಸಲಾಗಿತ್ತು.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.