ಆಘಾತಕಾರಿ ಸುದ್ದಿ: ನಾಸ್ಟ್ರಾಡಾಮಸ್ ಭವಿಷ್ಯ ನಿಜವಾಗಲಿದೆಯಾ? 2026ಕ್ಕೆ ಚಿನ್ನದ ಬೆಲೆ 4.5 ಲಕ್ಷಕ್ಕೆ ಏರಿಕೆ!

Gold Rate Prediction 2026 | ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್‌ (nostradamus) ಅವರ ಶತಮಾನಗಳಷ್ಟು ಹಳೆಯ ಭವಿಷ್ಯವಾಣಿಗಳು ಇಂದಿನ ಆರ್ಥಿಕ ಪರಿಸ್ಥಿತಿಯೊಂದಿಗೆ ಭಯಾನಕ ಸಾಮ್ಯತೆ ಹೊಂದಿವೆ. ಅವರು ನೇರವಾಗಿ ಚಿನ್ನದ ಬೆಲೆಯ ಬಗ್ಗೆ ಹೇಳದಿದ್ದರೂ,…

"Vijayaprabha News Nostradamus Prediction 2026 Gold Price to Reach 4.5 Lakhs - Future of Gold Investment Analysis Thumbnail"

Gold Rate Prediction 2026 | ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್‌ (nostradamus) ಅವರ ಶತಮಾನಗಳಷ್ಟು ಹಳೆಯ ಭವಿಷ್ಯವಾಣಿಗಳು ಇಂದಿನ ಆರ್ಥಿಕ ಪರಿಸ್ಥಿತಿಯೊಂದಿಗೆ ಭಯಾನಕ ಸಾಮ್ಯತೆ ಹೊಂದಿವೆ. ಅವರು ನೇರವಾಗಿ ಚಿನ್ನದ ಬೆಲೆಯ ಬಗ್ಗೆ ಹೇಳದಿದ್ದರೂ, ಅವರು ಉಲ್ಲೇಖಿಸಿದ ‘ಜಾಗತಿಕ ಅನಿಶ್ಚಿತತೆ, ಹಣದ ಮೌಲ್ಯ ಕುಸಿತ ಮತ್ತು ಸಾಮಾಜಿಕ ಅಶಾಂತಿ’ಯ ಮಾತುಗಳು ಪ್ರಸ್ತುತ ಆರ್ಥಿಕ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿವೆ. ಈ ಭವಿಷ್ಯವಾಣಿಗಳು ಆರ್ಥಿಕ ಸ್ಥಿರತೆಯ ಬಗ್ಗೆ ಕಳವಳ ಮೂಡಿಸಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪರೀಕ್ಷೆ ಇಲ್ಲ, ಶುಲ್ಕವಿಲ್ಲ: ಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ! ಇಂದೇ ಅರ್ಜಿ ಹಾಕಿ

ಚಿನ್ನದ ಬೆಲೆ ₹4.5 ಲಕ್ಷಕ್ಕೆ ಏರಿಕೆ?

Gold price today

Vijayaprabha Mobile App free

ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳನ್ನು ಆಧರಿಸಿ, ಗೋಲ್ಡ್‌ಮನ್ ಸ್ಯಾಕ್ಸ್ ಮತ್ತು ಜೆ.ಪಿ. ಮೋರ್ಗನ್‌ನಂತಹ ಮಾರುಕಟ್ಟೆ ತಜ್ಞರು 2026ರಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $5,400 ತಲುಪುವ ಸಾಧ್ಯತೆಯಿದೆ ಎ೦ದು ವಿಶ್ಲೇಷಿಸಿದ್ದಾರೆ. ಪ್ರಸ್ತುತ ಜಾಗತಿಕ ಯುದ್ಧಗಳು ಮತ್ತು ಆರ್ಥಿಕ ಸಂಕಷ್ಟಗಳ ಹಿನ್ನೆಲೆಯಲ್ಲಿ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ₹3.9 ಲಕ್ಷದಿಂದ ₹4.5 ಲಕ್ಷದವರೆಗೆ ತಲುಪಬಹುದು. ಇದು ಸಾಮಾನ್ಯ ಜನರಿಗೆ ಚಿನ್ನವನ್ನು ಕೊಳ್ಳಲು ಕಷ್ಟವಾಗುವ ಸೂಚನೆ ನೀಡುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ 22ನೇ ಕಂತು | ರೈತರ ಕಾಯುವಿಕೆಗೆ ಇಳಿಯಿತು ತೆರೆ? ಹಣ ಬಿಡುಗಡೆ ಯಾವಾಗ? ಇಲ್ಲಿದೆ ಡೇಟ್

ಬೆಳ್ಳಿ, ತಾಮ್ರದ ಮೇಲೂ ಪ್ರಭಾವ

ಕೇವಲ ಚಿನ್ನವಲ್ಲ, ಕೈಗಾರಿಕಾ ಬಳಕೆಗೆ ಅನಿವಾರ್ಯವಾಗಿರುವ ಬೆಳ್ಳಿ ಮತ್ತು ತಾಮ್ರದ ಮೇಲೂ ನಾಸ್ಟ್ರಾಡಾಮಸ್‌ ಪ್ರಭಾವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲೆಕ್ಟಿಕ್ ವಾಹನಗಳು ಮತ್ತು ಸೋಲಾ‌ರ್ ಪ್ಯಾನೆಲ್‌ಗಳ ಬೇಡಿಕೆ ಹೆಚ್ಚುತ್ತಿರುವುದರಿಂದ, ಬೆಳ್ಳಿಯ ಬೆಲೆ 10 ಗ್ರಾಂಗೆ ₹10,000 ದಾಟಿದರೂ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ.

2026ರ ಸಂಭಾವ್ಯ ಮಾರುಕಟ್ಟೆಭವಿಷ್ಯ

ಮಾರುಕಟ್ಟೆ ತಜ್ಞರ ಪ್ರಕಾರ, 2026ರ ವೇಳೆಗೆ ಚಿನ್ನ, ಬೆಳ್ಳಿ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 5,400 ಡಾಲರ್ ಪ್ರತಿ ಔನ್ಸ್‌ಗೆ ತಲುಪುವ ಅ೦ದಾಜಿದ್ದು, ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 3.9 ರಿಂದ 4.5 ಲಕ್ಷ ರೂಪಾಯಿ ತಲುಪಬಹುದು. ಬೆಳ್ಳಿಯ ಬೆಲೆ 120 ಡಾಲರ್ ಪ್ರತಿ ಔನ್ಸ್‌ಗೆ ಏರಿಕೆಯಾಗಿ, ಭಾರತದಲ್ಲಿ 10 ಗ್ರಾಂಗೆ 10,000 ರೂಪಾಯಿಗೂ ಅಧಿಕವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಾಕಿ ಭಾಯ್: ವಿದೇಶದಲ್ಲಿ ಟಾಕ್ಸಿಕ್ ಹವಾ! ಕೆಜಿಎಫ್ ಮೀರಿಸುವ ಬ್ಯುಸಿನೆಸ್ ಮಾಡುತ್ತಾ ಯಶ್ ಸಿನಿಮಾ?

ಚಿನ್ನ ಭವಿಷ್ಯದ ಅಗತ್ಯ ವಸ್ತು

ನಾಸ್ಟ್ರಾಡಾಮಸ್ ಭವಿಷ್ಯ ನಿಜವಾಗುತ್ತದೋ ಇಲ್ಲವೋ ಎ೦ಬುದು ಖಚಿತವಿಲ್ಲ. ಆದರೆ, ಜಾಗತಿಕ ಮಾರುಕಟ್ಟೆಯ ಪ್ರಸ್ತುತ ಟ್ರೆಂಡ್ ಅನ್ನು ಗಮನಿಸಿದರೆ, ಚಿನ್ನವು ಭವಿಷ್ಯದಲ್ಲಿ ಕೇವಲ ಆಸ್ತಿಯಾಗಿ ಉಳಿಯದೆ, ಅತ್ಯಗತ್ಯ ವಸ್ತುವಾಗಿ ಮಾರ್ಪಡಲಿದೆ. ಇದು ದೀರ್ಘಕಾಲೀನ ಹೂಡಿಕೆದಾರರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply