Nipah virus : ದೇಶದ ಹಲವು ರಾಜ್ಯಗಳಲ್ಲಿ ಮಾರಣಾಂತಿಕ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಹೌದು, ಬಾವಲಿಗಳು, ಹಂದಿಗಳು ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುವ ಈ ವೈರಸ್ನಿಂದ ಮರಣ ಪ್ರಮಾಣ ಹೆಚ್ಚಿರುವ ಕಾರಣ ರಾಜ್ಯ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದ್ದು, ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Nipah virus : ಮಾರಣಾಂತಿಕ ನಿಫಾ ವೈರಸ್ನ ಲಕ್ಷಣಗಳೇನು?

ಮಾರಣಾಂತಿಕ ವೈರಸ್ ದೇಶದ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ವೈರಸ್ನ ರೋಗ ಲಕ್ಷಣಗಲು ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರುತ್ತದೆ.
ನಿಫಾ ವೈರಸ್ ಸೋಂಕಿನ ಲಕ್ಷಣಗಳು..
- ಜ್ವರ
- ಮೈ ಕೈ ನೋವು
- ಸುಸ್ತು
- ಲೆನೋವು
- ಶೀತ
- ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
- ತಲೆನೋವು
- ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ. ಈ ಲಕ್ಷಣಗಳು ಕಾಣಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.




