PM Kisan Yojana : PM-KISANನ 21ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದ್ದು, ಈ ತಿಂಗಳ 19 ರಂದು ಪ್ರಧಾನಿ ಮೋದಿ ದೇಶಾದ್ಯಂತ 11 ಕೋಟಿ ರೈತರ ಖಾತೆಗಳಿಗೆ ₹2,000 ಜಮಾ ಮಾಡಲಿದ್ದಾರೆ.
ಹೌದು, ಫೆ.-24, 2019 ರಂದು PM-KISAN ಯೋಜನೆ ಆರಂಭಿಸಲಾಯಿತು.ಈ ಯೋಜನೆಯಡಿ ಪ್ರತಿ ಫಲಾನುಭವಿ ರೈತರಿಗೆ ವಾರ್ಷಿಕ 6,000 ರೂ.ಗಳನ್ನು ನೀಡಲಾಗುತ್ತದೆ, ಇದನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಇದುವರೆಗೆ 20 ಕಂತುಗಳಲ್ಲಿ ರೈತರ ಖಾತೆಗಳಿಗೆ 3.70 ಲಕ್ಷ ಕೋಟಿಗೂ ಹೆಚ್ಚು ಜಮೆ ಮಾಡಲಾಗಿದೆ. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟ ಮತ್ತು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡಿದ ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ.
PM Kisan Yojana : ರೈತರಿಗೆ 2,000 ಬದಲು 4,000 ರೂ ಸಿಗುತ್ತಾ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಸುಮಾರು 10 ಕೋಟಿ ರೈತರು 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಕಳೆದ ಬಾರಿ ಕೆವೈಸಿ ಸಮಸ್ಯೆಗಳಿಂದ ಕೆಲ ಅರ್ಹ ರೈತರಿಗೂ 20ನೇ ಕಂತಿನ ಹಣ ಬಂದಿರಲಿಲ್ಲ. ಕೆವೈಸಿ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಅಂದರೆ, ಫಲಾನುಭವಿಗಳು ತಮ್ಮ ನಾಡಕಚೇರಿಗೆ ಮುಖತಃ ಭೇಟಿ ನೀಡಿ ಕೆವೈಸಿ ದಾಖಲೆಗಳನ್ನು ಕೊಡಬೇಕಾಗುತ್ತದೆ.
ಈ ದಾಖಲೆಗಳು ಸರಿಯಾಗಿದ್ದರೆ, ಅಂಥ ರೈತರಿಗೆ ಕಳೆದ ಬಾರಿ ತಪ್ಪಿ ಹೋಗಿದ್ದ ಕಂತಿನ ಹಣ ಅಂದರೆ, 4,000 ರೂ ಹಣವು ಈ ರೈತರ ಅಕೌಂಟ್ಗೆ ಕ್ರೆಡಿಟ್ ಆಗಬಹುದು. ಇನ್ನು, ಇ-ಕೆವೈಸಿ, ಆಧಾರ್-ಬ್ಯಾಂಕ್ ಖಾತೆ ಲಿಂಕ್, ಭೂ ದಾಖಲೆ ಪರಿಶೀಲನೆ ಕಡ್ಡಾಯವಾಗಿದ್ದು, ಇವು ಪೂರೈಸದಿದ್ದರೆ ಹಣ ಕೈ ಸೇರುವುದಿಲ್ಲ.
ಇವರಿಗೆ ಬರಲ್ಲ ಪಿಎಂ ಕಿಸಾನ್ ಯೋಜನೆ ಹಣ
ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡಲು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ, ರೈತರಿಗೆ ವರ್ಷಕ್ಕೆ 6,000 ರೂ.ಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಸಚಿವರು, ಸಂಸದರು, ಶಾಸಕರು, ಮೇಯರ್ಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸರ್ಕಾರಿ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು ಈ ಯೋಜನೆಯಿಂದ ಹೊರಗುಳಿಯುತ್ತಾರೆ.




