ಅಟಲ್ ಪಿಂಚಣಿ ಯೋಜನೆ | ಹಿರಿಯ ನಾಗರಿಕರಿಗೆ ₹5,000 ಪಿಂಚಣಿ ಭರವಸೆ

ಅಟಲ್ ಪಿಂಚಣಿ ಯೋಜನೆ : ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ (APY) ಅಸಂಘಟಿತ ಕ್ಷೇತ್ರದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಕೃಷಿಕರು ಮತ್ತು ಕಡಿಮೆ ಆದಾಯ ಹೊಂದಿರುವವರಿಗೆ 60 ವರ್ಷದ ನಂತರ ಪ್ರತಿ ತಿಂಗಳು…

Atal Pension Yojana

ಅಟಲ್ ಪಿಂಚಣಿ ಯೋಜನೆ : ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ (APY) ಅಸಂಘಟಿತ ಕ್ಷೇತ್ರದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಕೃಷಿಕರು ಮತ್ತು ಕಡಿಮೆ ಆದಾಯ ಹೊಂದಿರುವವರಿಗೆ 60 ವರ್ಷದ ನಂತರ ಪ್ರತಿ ತಿಂಗಳು ₹5,000 ವರೆಗೆ ಖಾತರಿ ಪಿಂಚಣಿ ನೀಡುವ ಮೂಲಕ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುತ್ತದೆ. ಕೇಂದ್ರ ಸರ್ಕಾರದ ಭರವಸೆಯಡಿ ಕಾರ್ಯನಿರ್ವಹಿಸುವ ಈ ಯೋಜನೆಯಲ್ಲಿ ಆಟೋ ಡೆಬಿಟ್ ಸೌಲಭ್ಯದೊಂದಿಗೆ ಸುಲಭವಾಗಿ ಸೇರ್ಪಡೆಗೊಳ್ಳಬಹುದು.

ಅಟಲ್ ಪಿಂಚಣಿ ಯೋಜನೆ (Atal Pension Yojana)

Atal Pension Yojana

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ (APY) 2015ರಲ್ಲಿ ಪ್ರಾರಂಭವಾಯಿತು. PFRDA ನಿರ್ವಹಿಸುವ ಈ ಯೋಜನೆಯು ಅಸಂಘಟಿತ ಕ್ಷೇತ್ರದ ಜನರಿಗೆ 60 ವರ್ಷ ವಯಸ್ಸಿನ ನಂತರ ₹1,000ದಿಂದ *5,000ದವರೆಗೆ ನಿಶ್ಚಿತ ಮಾಸಿಕ ಪಿಂಚಣಿ ಒದಗಿಸುವ ಗುರಿ ಹೊಂದಿದೆ. ಇದು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಸಾಮಾಜಿಕ ಸುರಕ್ಷಾ ಕಾರ್ಯಕ್ರಮವಾಗಿದೆ. ಖಾತೆದಾರನ ಮರಣದ ನಂತರ ಪಿಂಚಣಿ ಕುಟು೦ಬಕ್ಕೆ ವರ್ಗಾಯಿಸಲಾಗುತ್ತದೆ.

Vijayaprabha Mobile App free

ಅಟಲ್ ಪಿಂಚಣಿ ಯೋಜನೆಯ ಅರ್ಹತೆಯ ಮಾನದಂಡ

ಅಟಲ್ ಪಿಂಚಣಿ ಯೋಜನೆಗೆ ಸೇರಲು 18 ರಿಂದ 40 ವರ್ಷ ವಯಸ್ಸಿನವರು, ಅಸಂಘಟಿತ ವಲಯದ ಕಾರ್ಮಿಕರು, ಆದಾಯ ತೆರಿಗೆ ಪಾವತಿಸದವರು, ಬ್ಯಾಂಕ್ ಖಾತೆ ಹೊಂದಿರುವವರು ಮತ್ತು ಇತರ ಯಾವುದೇ ಪಿಂಚಣಿ ಯೋಜನೆಯಲ್ಲಿ ಸದಸ್ಯರಲ್ಲದವರು ಅರ್ಹರಾಗಿರುತ್ತಾರೆ. ಗೃಹ ಕಾರ್ಮಿಕರು, ಚಹಾ ಅಂಗಡಿ ಮಾಲೀಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳು ಈ ಯೋಜನೆಯ ಲಾಭಪಡೆಯಬಹುದು

ಈ ರೀತಿ ನೋಂದಾಯಿಸಬಹುದು

ಆಫ್‌ಲೈನ್‌ನಲ್ಲಿ, ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ, ಆಟೋ ಡೆಬಿಟ್ ಅನುಮೋದನೆ ನೀಡಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ, ನೆಟ್‌ ಬ್ಯಾಂಕಿಂಗ್ ಅಥವಾ ಮೊಬೈಲ್‌ ಬ್ಯಾಂಕಿಂಗ್ ಮೂಲಕ ಲಾಗಿನ್ ಆಗಿ, APY ಸೇವೆ ಆಯ್ಕೆ ಮಾಡಿ, ಪಿಂಚಣಿ ಮೊತ್ತ ಮತ್ತು ನಾಮಿನಿ ವಿವರ ನಮೂದಿಸಿ, ಆಟೋ ಡೆಬಿಟ್ ಅನುಮೋದಿಸಿ, OTP ಮೂಲಕ ದೃಢೀಕರಣ ಪಡೆದರೆ ನೋಂದಣಿ ಯಶಸ್ವಿಯಾಗುತ್ತದೆ

ಅಟಲ್ ಪಿಂಚಣಿ ಯೋಜನೆಯ ನಿಯಮಗಳು

ಈ ಯೋಜನೆಯ ಪ್ರಮುಖ ನಿಯಮಗಳ ಪ್ರಕಾರ, ಪ್ರೀಮಿಯಂ ಬಾಕಿ ಉಳಿಸಿಕೊಂಡರೆ ತಿಂಗಳಿಗೆ ₹1 ರಿಂದ ₹10 ದಂಡ ಬೀಳಲಿದೆ. ಆರು ತಿಂಗಳು ಪ್ರೀಮಿಯಂ ಪಾವತಿಸದಿದ್ದರೆ ಖಾತೆ ಸ್ಥಗಿತಗೊಳಿಸಲಾಗುವುದು. 60 ವರ್ಷಕ್ಕಿಂತ ಮೊದಲು ಖಾತೆ ಮುಚ್ಚಲು ಅನುಮತಿ ಇಲ್ಲ, ಆದರೆ ತೀವ್ರ ಅನಾರೋಗ್ಯ ಅಥವಾ ಮರಣ ಸಂದರ್ಭದಲ್ಲಿ ವಿನಾಯಿತಿ ನೀಡಲಾಗಿದೆ. 80C ಅಡಿಯಲ್ಲಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.