Silk Smitha | 36ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಖ್ಯಾತ ನಟಿ..!

Actress Silk Smitha met a tragic end | ಭಾರತೀಯ ಸಿನಿಮಾರಂಗದಲ್ಲಿ ನಟನೆ ಮಾತ್ರವಲ್ಲ ತಮ್ಮ ಆಕರ್ಷಕ ಉಡುಗೆ, ನೃತ್ಯದ ಮೂಲಕವೂ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯಬಹುದು ಎಂದು ತೋರಿಸಿಕೊಟ್ಟಿದ್ದ ಮೋಹಕ ನಟಿ. ಒಂದು…

Actress Silk Smitha met a tragic end

Actress Silk Smitha met a tragic end | ಭಾರತೀಯ ಸಿನಿಮಾರಂಗದಲ್ಲಿ ನಟನೆ ಮಾತ್ರವಲ್ಲ ತಮ್ಮ ಆಕರ್ಷಕ ಉಡುಗೆ, ನೃತ್ಯದ ಮೂಲಕವೂ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯಬಹುದು ಎಂದು ತೋರಿಸಿಕೊಟ್ಟಿದ್ದ ಮೋಹಕ ನಟಿ. ಒಂದು ಕಾಲದಲ್ಲಿ ಐಟಂ ಡ್ಯಾನ್ಸ್ ಮೂಲಕವೇ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಸುಂದರಿಯೇ ನಟಿ ಸಿಲ್ಕ್ ಸ್ಮಿತಾ.

Silk smitha vijayaprabha

ಡಿಸೆಂಬರ್ 2, 1960 ರಂದು ಆಂಧ್ರಪ್ರದೇಶದ ಎಲ್ಲೂರಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ಅವರದ್ದು ಚಿಕ್ಕಂದಿನಿಂದಲೂ ಕಷ್ಟಕರ ಜೀವನವಾಗಿದ್ದು, ಕಡು ಬಡತನದಲ್ಲಿದ್ದ ಸಿಲ್ಕ್ ಸ್ಮಿತಾ ಅವರಿಗೆ 14ನೇ ವಯಸ್ಸಿನಲ್ಲೇ ಮದುವೆಯಾಯಿತು. ಆದರೆ, ನಟಿ ಸಿಲ್ಕ್ ಸ್ಮಿತಾಗೆ ಈ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು. ಒಂದೆಡೆ ಅತ್ತೆ-ಮಾವನ ಕಾಟ, ಮತ್ತೊಂದೆಡೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದ ಗಂಡನಿಂದ ಜೀವನ ಅಸಹನೀಯವಾಗಿತ್ತು. ವೈವಾಹಿಕ ಬದುಕಿನಿಂದ ಬೇಸತ್ತು ಅಲ್ಲಿಂದ ಮದ್ರಾಸ್‌ಗೆ ಓಡಿ ಹೋದ ಸಿಲ್ಕ್ ಸ್ಮಿತಾ ತಮ್ಮ ದೂರದ ಸಂಬಂಧಿಯೊಬ್ಬರ ಬಳಿ ಆಶ್ರಯ ಪಡೆದು ಬಣ್ಣದ ಬದುಕಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾದರು.

Vijayaprabha Mobile App free

Actress Silk Smitha

ಆರಂಭದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡ ಅವರಿಗೆ ಅವರ ಲುಕ್, ದೃಢತೆಯಿಂದ ನಟನಾ ಅವಕಾಶವನ್ನು ಪಡೆಯುವ ಮೂಲಕ1979ರಲ್ಲಿ ಮಲಯಾಳಂನ ‘ಇನಾಯೆ ತೇಡಿ’ ಸಿನಿಮಾ ಮೂಲಕ ನಟಿಯಾಗಿ ಪದಾರ್ಪಣೆ ಮಾಡಿದರು. ಮೊದಲಿಗೆ ನಟಿಯಾಗಿ ಸಣ್ಣಪುಟ್ಟ ಪಾತ್ರಗಳು ದೊರೆತವಾದರೂ ಸಿಲ್ಕ್ ಸ್ಮಿತಾ ಖ್ಯಾತಿ ಪಡೆದಿದ್ದು ಮಾತ್ರ ಆಕೆಯ ದಿಟ್ಟ ಪಾತ್ರಗಳು ಹಾಗೂ ಐಟಂ ಹಾಡುಗಳ ಮೂಲಕ. ಐಟಂ ಗರ್ಲ್ ಆಗಿಯೇ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದ ಈಕೆಗೆ ಎಷ್ಟು ಬೇಡಿಕೆ ಇತ್ತೆಂದರೆ ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಈಕೆ ಕಾಲ್ ಶೀಟ್’ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು.

ವಿತರಕರು ಸಹ ಒಂದು ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಅವರ ಐಟಂ ಸಾಂಗ್ ಇರಲೇಬೇಕು ಎಂದು ಬೇಡಿಕೆ ಇಡುತ್ತಿದ್ದರು. ಕೇವಲ 10 ರಿಂದ 12 ವರ್ಷಗಳ ಬಣ್ಣದ ಬದುಕಿನಲ್ಲಿ ಸಿಲ್ಕ್ ಸ್ಮಿತಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳು ಸೇರಿದಂತೆ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ವೈಯಕ್ತಿಕ ಬದುಕಿನಲ್ಲಿ ಒಬ್ಬಂಟಿಯಾಗಿದ್ದ ಸಿಲ್ಕ್ ಸ್ಮಿತಾ ಮದ್ಯದ ಚಟಕ್ಕೂ ಬಲಿಯಾಗಿ ಮಾನಸಿಕವಾಗಿ ಕುಂದಿದ್ದ ಇವರು 1996ರಲ್ಲಿ ತಮ್ಮ 36ನೇ ವಯಸ್ಸಿನಲ್ಲಿ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಂಡರು. ಸಿಲ್ಕ್ ಸ್ಮಿತಾ ಅವರ ಸಾವು ಇಂದಿಗೂ ಕೂಡ ಒಂದು ನಿಗೂಢವಾಗಿಯೇ ಉಳಿದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.