ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (BEL) 340 ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

BEL Recruitment | ಭಾರತದ ಪ್ರಮುಖ ಸರ್ಕಾರಿ ಕಂಪನಿ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (BEL) 340 ಪ್ರೊಬೇಷನರಿ ಇ೦ಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕಲ್‌ ಹಾಗೂ ಎಲೆಕ್ಟಿಕಲ್…

BEL Recruitment

BEL Recruitment | ಭಾರತದ ಪ್ರಮುಖ ಸರ್ಕಾರಿ ಕಂಪನಿ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (BEL) 340 ಪ್ರೊಬೇಷನರಿ ಇ೦ಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕಲ್‌ ಹಾಗೂ ಎಲೆಕ್ಟಿಕಲ್ ವಿಭಾಗಗಳಲ್ಲಿ ಖಾಲಿ ಹುದ್ದೆಗಳಿದ್ದು, ಸರ್ಕಾರಿ ಉದ್ಯೋಗ ಕನಸಿನತ್ತ ಪಾದಾರ್ಪಣೆ ಮಾಡಲು ಇದು ಉತ್ತಮ ಅವಕಾಶವಾಗಿದೆ.

ಕೊನೆ ದಿನಾಂಕ

ಅರ್ಜಿ ಪ್ರಕ್ರಿಯೆ ಅಕ್ಟೋಬರ್ 24ರಿಂದ ಪ್ರಾರಂಭಗೊಂಡಿದ್ದು ನವೆಂಬರ್ 14ರವರೆಗೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು BEL ಅಧಿಕೃತ ವೆಬ್‌ಸೈಟ್ bel-india.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

BEL ಈ ಬಾರಿ ಒಟ್ಟು 340 ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಿದೆ. ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್‌) -175 ಹುದ್ದೆಗಳು. ಪ್ರೊಬೇಷನರಿ ಇಂಜಿನಿಯರ್ (ಮೆಕ್ಯಾನಿಕಲ್) – 109 ಹುದ್ದೆಗಳು. ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟಿಕಲ್) – 14 ಹುದ್ದೆಗಳು. ಈ ಹುದ್ದೆಗಳು E-II ದರ್ಜೆಯಲ್ಲಿ ಇರಲಿದ್ದು, ವರ್ಗಾನುಸಾರ ಕಾಯ್ದಿರಿಸಲಾಗಿದೆ.

Vijayaprabha Mobile App free

ಅರ್ಹತಾ ಮಾನದಂಡ

  • ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಪದವಿ (B.E./B.Tech) ಪಡೆದಿರಬೇಕು.
  • ಗರಿಷ್ಠ ವಯೋಮಿತಿ: 25 ವರ್ಷ. ವಯೋಮಿತಿ ಸಡಿಲಿಕೆ: OBC ಗೆ 3 ವರ್ಷ, SC/ST ಗೆ 5 ವರ್ಷ.

ಅರ್ಜಿ ಶುಲ್ಕ

  • ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ: ₹1180
  • SC, ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಸುವ ವಿಧಾನ

BEL ಅಧಿಕೃತ ವೆಬ್‌ಸೈಟ್ bel-india.in ಗೆ ಭೇಟಿ ລ໖. ‘Career’ a ‘Recruitment’ ವಿಭಾಗಕ್ಕೆ ಹೋಗಿ. Probationary Engineer Re-cruitment 2025 ಲಿಂಕ್ ಆಯ್ಕೆ ಮಾಡಿ. ಅಧಿಸೂಚನೆ ಓದಿ, ನೋಂದಣಿ ಮಾಡಿ ಮತ್ತು ಅರ್ಜಿ ಫಾರ್ಮ್ ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಶುಲ್ಕ ಪಾವತಿಸಿ. ಪೂರ್ಣಗೊಂಡ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರತಿ ಕಾಯ್ದಿರಿಸಿ.

ಆಯ್ಕೆ ಪ್ರಕ್ರಿಯೆ

BEL ನೇಮಕಾತಿ ಪ್ರಕ್ರಿಯೆಯು CBT ಪರೀಕ್ಷೆ, ಸಂದರ್ಶನ, ಮತ್ತು ವೈದ್ಯಕೀಯ ಪರೀಕ್ಷೆ ಒಳಗೊಂಡಿರುತ್ತದೆ. CBT ಪರೀಕ್ಷೆ: 85 ಅಂಕಗಳು. ಸಂದರ್ಶನ: 15 ಅಂಕಗಳು CBT ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.