Cyclone Monta | ಮೊಂತಾ ಚಂಡಮಾರುತ ಕಾಕಿನಾಡ ಮತ್ತು ಯಾಣಂ ನಡುವಿನ ಕರಾವಳಿಗೆ ಅಪ್ಪಳಿಸಿದೆ ಎಂದು ಆಂಧ್ರದ ಎಪಿಎಸ್ಡಿಎಂಎ ತಿಳಿಸಿದ್ದು, ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದ ಪರಿಣಾಮವಾಗಿ ಭೂಕುಸಿತ ಆರಂಭವಾಗಿದೆ.
ಹೌದು, ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದ ಪರಿಣಾಮವಾಗಿ ಭೂಕುಸಿತ ಆರಂಭವಾಗಿದ್ದು, ಕಾಕಿನಾಡ ಬಳಿ ಸಮುದ್ರದ ತೀರದಲ್ಲಿ ಭಾರೀ ಅಬ್ಬರದಲೆ, ಬಿರುಗಾಳಿ ಶುರುವಾಗಿದ್ದು, ಈ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣ ನಡುವೆ, ಕಾಕಿನಾಡದ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಟುತ್ತಿದ್ದಂತೆ ಭೂಕುಸಿತ ಉಂಟಾಗಿದೆ.
ಇನ್ನು, ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣ, ದಕ್ಷಿಣ ಛತ್ತೀಸ್ಗಢ & ಒಡಿಶಾದಲ್ಲಿ ಅತಿ ಹೆಚ್ಚು ಮಳೆ & ಚಂಡಮಾರುತದ ಅಲೆಗಳು ಮುಂದುವರಿಯುವ ನಿರೀಕ್ಷೆಯಿದೆ.




