ಹೈದರಾಬಾದ್: ತೆಲುಗಿನ ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’, ‘ಕೆರಿಂಟಾ’ ಮತ್ತು ‘ಮಲ್ಲಿ ಮಲ್ಲಿ ಇಡಿ ರಾಣಿ ರೋಜು’ ಚಿತ್ರಗಳಲ್ಲಿ ನಟಿಸಿ ಹಾಗು ತೆಲುಗಿನ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಮೂಲಕ ನಟಿ ತೇಜಸ್ವಿ ಮಡಿವಾಡಾ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.
ಇತ್ತೀಚೆಗೆ ಸಿನಿಮಾದದಲ್ಲಿ ನಟಿಸದೆ ಕಣ್ಮರೆಯಾದ ತೇಜಸ್ವಿನಿ ಮತ್ತೊಮ್ಮೆ ಮತ್ತೊಮ್ಮೆ ಸಿನಿಮಾದಲ್ಲಿ ನಟಿಸುವ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾಳೆ. ಇಟ್ತಚಿಗೆ ನಟಿ ತೇಜಸ್ವಿ ಮಡಿವಾಡಾ ಚಿತ್ರದ ಟೀಸರ್ ಟ್ರೈಲರ್ ಬಿಡುಗಡೆಯಾಗಿದ್ದು, ಈ ಟೀಸರ್ ನಲ್ಲಿ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಎಲ್ಲರನ್ನು ಆಶ್ಚರ್ಯ್ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ, ನಟಿ ತೇಜಸ್ವಿ ಮಡಿವಾಡಾ ತನ್ನ ಸೌಂದರ್ಯ ಮತ್ತು ಸಂಬಂಧದ ಬಗ್ಗೆ ಧೈರ್ಯದಿಂದ ಮಾತನಾಡಿದ್ದಾರೆ.
ಸಿನಿಮಾ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸಿದ್ದೇನೆ ಹಾಗು ಈ ಹಿಂದೆ ನಾನು ನಟಿಸಿದ ಎಲ್ಲಾ ಚುಂಬನ ದೃಶ್ಯಗಳು ನಕಲಿ ಎಂದು ನಟಿ ತೇಜಸ್ವಿ ಮಡಿವಾಡಾ ಹೇಳಿದರು. ಚಿತ್ರದ ಅವಕಾಶಗಳು ಕ್ಷೀಣಿಸುತ್ತಿರುವುದರಿಂದ ಮದುವೆಯಾಗಿ ನೆಲೆಸಲು ಬಯಸಿದ್ದೇ ಎಂದು ಹೇಳಿದ್ದು, ಆದರೆ ತಮ್ಮ ಮದುವೆ ರದ್ದುಗೊಂಡಿದೆ ಎಂದು ನಟಿ ತೇಜಸ್ವಿ ಮಡಿವಾಡಾ ಅವರು ಹೇಳಿದ್ದಾರೆ. ಮತ್ತೆ ಸಿನಿಮಾದಲ್ಲಿ ಅವಕಾಶಗಳು ಬಂದಿದ್ದರಿಂದ ಮದುವೆಯನ್ನು ಬದಿಗಿಟ್ಟಿದ್ದು, ಇನ್ನು ಮುಂದೆ ಜೀವನದಲ್ಲಿ ತಮ್ಮ ಮದುವೆ ಬಗ್ಗೆ ಯೋಚಿಸದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಮದುವೆಯಾಗದಿದ್ದರೂ ಬಾಯ್ ಫ್ರೆಂಡ್ ಜೊತೆ ತಪ್ಪಲ್ಲ ಎಂದು ಹೇಳಿದ್ದು, ಪ್ರಸ್ತುತ ಒಬ್ಬ ವ್ಯಕ್ತಿಯೊಂದಿಗೆ ರಿಲೇಷನ್ ಶಿಪ್ ನಲ್ಲಿ ಇದ್ದೇನೆ ಎಂದು ನಟಿ ತೇಜಸ್ವಿ ಮಡಿವಾಡಾ ಹೇಳಿದ್ದಾರೆ.ಈ ಹಿಂದೆ ಇಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೆ, ಹತ್ತು ವರ್ಷಗಳವರೆಗೂ ಸಂಬಂಧದಲ್ಲಿದ್ದೆವು ಎಂದು ಹಾಟ್ ಬ್ಯುಟಿ ನಟಿ ತೇಜಸ್ವಿ ಮಡಿವಾಡಾ ಹೇಳಿಕೊಂಡಿದ್ದಾರೆ.