GruhaLakshmi Yojana । ಕರ್ನಾಟಕ ರಾಜ್ಯ ಸರ್ಕಾರವು ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯ ಉದ್ದೇಶವು ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂಪಾಯಿಗಳ ಆರ್ಥಿಕ ನೆರವನ್ನು ನೀಡುವುದು. ಇತ್ತೀಚಿನ ದಿನಗಳಲ್ಲಿ ಈ ಯೋಜನೆಯ ಹಣದ ವಿತರಣೆಯಲ್ಲಿ ವಿಳಂಬವಾಗಿದ್ದು, ರಾಜ್ಯದ ಮಹಿಳೆಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಫಲಾನುಭವಿಗಳ ಅಧಿಕೃತ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಚೆಕ್ ಮಾಡುವುದು ಎನ್ನುವ ಮಾಹಿತಿ ಇಲ್ಲಿದೆ.
ಮಹಿಳೆಯರ ಅಸಮಾಧಾನ
ಕಳೆದ ಕೆಲವು ತಿಂಗಳಿಂದ ಹಣವು ನಿಯಮಿತವಾಗಿ ಜಮೆಯಾಗುತ್ತಿಲ್ಲ. ಆರಂಭದಲ್ಲಿ ಪ್ರತಿ ತಿಂಗಳು ಬರುತ್ತಿದ್ದ ಹಣ ಈಗ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬರುತ್ತಿದೆ. ಕೆಲವರಿಗೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲದಿಂದ ಹಣ ಬ೦ದಿಲ್ಲ. ಇದರಿಂದಾಗಿ ದೀಪಾವಳಿ, ದಸರಾ ಹಬ್ಬಗಳ ಸಂದರ್ಭದಲ್ಲಿ ಖರ್ಚುಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ನೀಡಿದ್ದ ಭರವಸೆ ಈಡೇರದ ಕಾರಣ ಮಹಿಳೆಯರು ಬೇಸರಗೊಂಡಿದ್ದು, ಬ್ಯಾಂಕ್ ಗಳಿಗೆ ಅಲೆದಾಡಿ ನಿರಾಶೆಗೊ೦ಡಿದ್ದಾರೆ.
ಸಚಿವರ ಭರವಸೆ
ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಜುಲೈ ತಿಂಗಳಿನಿಂದ ಬಾಕಿಯಿರುವ ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜುಲೈ ತಿಂಗಳ 2000 ರೂಪಾಯಿಗಳ ಹಣವನ್ನು ಒಂದೆರಡು ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವನ್ನು ಜುಲೈ ನಂತರ ಕ್ರಮೇಣ ವಿತರಿಸಲಾಗುವುದು ಎ೦ದು ಸಚಿವರು ಭರವಸೆ ನೀಡಿದ್ದರು.
ಫಲಾನುಭವಿಗಳ ಪಟ್ಟಿ ಬಿಡುಗಡೆ
ಗೃಹ ಲಕ್ಷ್ಮಿ 2000 ರೂಪಾಯಿ ಫಲಾನುಭವಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳ ಲಿಸ್ಟ್ ಲಿಂಕ್ ಇಲ್ಲಿ ನೀಡಲಾಗಿದೆ. https://sevasindhugs.karnataka.gov.in ಇದಕ್ಕೆ ಲಾಗಿನ್ ಆಗಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಬಹುದು. ಜಿಲ್ಲಾ, ತಾಲೂಕು, ಪಂಚಾಯತಿ,ಗ್ರಾಮ ಆಯ್ಕೆ ಮಾಡಿಕೊಂಡು ನೋಡಬಹುದು.
ಶೀಘ್ರ ಹಣ ಬಿಡುಗಡೆ
ದೀಪಾವಳಿ ಹಬ್ಬದ ಸ೦ದರ್ಭದಲ್ಲಿ ಗೃಹ ಲಕ್ಷ್ಮೀ ಯೋಜನೆಯ ಬಾಕಿ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ರಾಜ್ಯದ ಮಹಿಳೆಯರು ಒತ್ತಾಯಿಸಿದ್ದಾರೆ. ಹಬ್ಬದ ಖರ್ಚು, ಮನೆ ಅಗತ್ಯ ವಸ್ತುಗಳ ಖರೀದಿಗೆ ಈ ಹಣ ಅತ್ಯಗತ್ಯ ಎಂದು ಫಲಾನುಭವಿಗಳು ಹೇಳಿದ್ದಾರೆ. ಸರ್ಕಾರ ತನ್ನ ಭರವಸೆ ಈಡೇರಿಸಿ, ತಕ್ಷಣವೇ ಹಣ ಜಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಫಲಾನುಭವಿಗಳು ತಮ್ಮ ಹೆಸರನ್ನು ಅಧಿಕೃತ ಪಟ್ಟಿಯಲ್ಲಿ ಪರಿಶೀಲಿಸಬಹುದು.




