Milk price | ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ GST ದರ ತರ್ಕಬದ್ಧಗೊಳಿಸುವಿಕೆಯ ಹಿನ್ನೆಲೆಯಲ್ಲಿ ಹಾಲಿನ ಬೆಲೆ ಇಳಿಯಬಹುದು ಎನ್ನಲಾಗಿದೆ. ಆದರೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ರಾ, ಪೌಚ್ ಮತ್ತು ಪ್ಯಾಕೆಟ್ ಹಾಲಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
UHT ಹಾಲಿಗೆ ಮಾತ್ರ ಬೆಲೆ ಇಳಿಕೆ

ಹೊಸ ಜಿಎಸ್ಟಿ ರಚನೆಯ ಪ್ರಕಾರ, ಶೇಕಡಾ 5 ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಸಲಾಗಿರುವುದರಿಂದ, ದೀರ್ಘಾವಧಿ ಶೇಖರಣೆ ಸಾಧ್ಯವಾಗುವ UHT ಹಾಲು ಮಾತ್ರ ಅಗ್ಗವಾಗಲಿದೆ. ಈ ಹಾಲು ಸೆಪ್ಟೆಂಬರ್ 22 ರಿಂದ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ತಾಜಾ ಪ್ಯಾಕೆಟ್ ಹಾಲು ಯಾವಾಗಲೂ ಶೂನ್ಯ ಶೇಕಡಾ ಜಿಎಸ್ಟಿ ಅಡಿಯಲ್ಲಿತ್ತು. ಆದ್ದರಿಂದ ಪೌಚ್ ಹಾಲಿನ ಬೆಲೆಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ.
UHT ಹಾಲು ಎಂದರೇನು?
UHT ಹಾಲು ಎಂದರೆ ಕನಿಷ್ಠ 135°C ತಾಪಮಾನದಲ್ಲಿ ಕೆಲ ಸೆಕೆಂಡುಗಳ ಕಾಲ ಹಾಲನ್ನು ಬಿಸಿ ಮಾಡುವ ಪ್ರಕ್ರಿಯೆ. ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಟೆಟ್ರಾ ಪ್ಯಾಕ್ ಅಸೆಪ್ಟಿಕ್ ಪ್ಯಾಕೇಜಿಂಗ್ನಲ್ಲಿ ಲಭ್ಯ. ಶೈತ್ರೀಕರಣವಿಲ್ಲದೆ ಹಲವಾರು ತಿಂಗಳುಗಳವರೆಗೆ ಉಳಿಯುತ್ತದೆ. ಈ ವೈಶಿಷ್ಟ್ಯದಿಂದಾಗಿ ದೀರ್ಘಾವಧಿಗೆ ಶೇಖರಣೆ ಸಾಧ್ಯವಾಗುತ್ತದೆ.
ಬೆಲೆ ಇಳಿಕೆಯ ಪರಿಣಾಮ
ಈ ಬದಲಾವಣೆ UHT ಹಾಲು ಗ್ರಾಹಕರಿಗೆ ನೇರ ಲಾಭ ನೀಡಲಿದೆ. ಕಡಿಮೆ ಬೆಲೆಗಳಿಂದಾಗಿ ಇದರ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ. ಅಮುಲ್ ಕೂಡಾ ಈ ನೀತಿಯ ಮೂಲಕ ತನ್ನ ಮಾರುಕಟ್ಟೆ ಹಂಚಿಕೆಯನ್ನು ಬಲಪಡಿಸಿಕೊಳ್ಳಲಿದೆ.
ಸರ್ಕಾರದ ನಿರ್ಧಾರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ, 56ನೇ ಜಿಎಸ್ಟಿ ಕೌನ್ಸಿಲ್ ನಿರ್ಧಾರ ಪ್ರಕಾರ: 5%, 12%, 18% & 28% ಫ್ಲ್ಯಾಬ್ಗಳನ್ನು ಬಿಟ್ಟು. ಕೇವಲ 5% ಮತ್ತು 18% ಎಂಬ ಎರಡು ಸ್ಪ್ಯಾಬ್ ಗಳಿಗೆ ತರ್ಕಬದ್ಧಗೊಳಿಸಲಾಗಿದೆ. ಈ ಕ್ರಮವು ದಿನನಿತ್ಯದ ವಸ್ತುಗಳ ಬೆಲೆಗಳನ್ನು ಕೈಗೆಟುಕುವಂತೆ ಮಾಡುವುದು ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ.




