Gram Suraksha Yojana | ಅಂಚೆ ಇಲಾಖೆ ಯೋಜನೆಗಳನ್ನು ಸುರಕ್ಷಿತ ಹೂಡಿಕೆಗಳಲ್ಲಿ ಒ೦ದೆ೦ದು ಪರಿಗಣಿಸಲಾಗುತ್ತದೆ. ಅಂಚೆ ಇಲಾಖೆಯು ಹಣ ಹೂಡಿಕೆಗೆ ಹಾಗೂ ಉಳಿತಾಯಕ್ಕೆ ಹಲವು ಅತ್ಯುತ್ತಮ ಯೋಜನೆಗಳನ್ನು ಹೊಂದಿದ್ದು, ಗ್ಯಾರಂಟಿ ರಿಟರ್ನ್ಸ್ ಕೂಡ ನೀಡುತ್ತವೆ. ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಕೇಂದ್ರ ಸರ್ಕಾರವೇ ಗ್ಯಾರೆಂಟಿ ಆಗಿರುವುದರಿಂದ ರಿಸ್ಕ್ ಕೂಡ ಕಡಿಮೆ. ಹಲವಾರು ಅಂಚೆ ಇಲಾಖೆ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆಯೂ ಒ೦ದು.
ಗ್ರಾಮ ಸುರಕ್ಷಾ ಯೋಜನೆ

ಗ್ರಾಮೀಣ ಜನರ ಅಭಿವೃದ್ಧಿಗಾಗಿ ಉತ್ತಮ ಯೋಜನೆಗಳನ್ನು ಅಂಚೆ ಇಲಾಖೆ ಜಾರಿಗೊಳಿಸುತ್ತಿದೆ. ಅವುಗಳಲ್ಲಿ ಗ್ರಾಮ ಸುರಕ್ಷಾ ಯೋಜನೆ ಎಂಬುದು ಭಾರತೀಯ ಅಂಚೆ ಇಲಾಖೆ ನೀಡುವ ವಿಶೇಷ ಜೀವ ವಿಮಾ ಯೋಜನೆಯಾಗಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಉದ್ದೇಶದಿ೦ದ ರೂಪಿಸಲಾಗಿದೆ.
ವಯೋಮಿತಿ, ವಿಮಾ ಮೊತ್ತ
ಈ ಯೋಜನೆಗೆ ಸೇರ್ಪಡೆಯಾಗಲು ಕನಿಷ್ಠ ವಯಸ್ಸು 19 ವರ್ಷ ಮತ್ತು ಗರಿಷ್ಠ ವಯಸ್ಸು 55 ವರ್ಷ ಇರಬೇಕು. ಈ ಯೋಜನೆಯಡಿ ಕನಿಷ್ಠ ವಿಮಾ ಮೊತ್ತ 10,000 ಆಗಿದ್ದು, ಗರಿಷ್ಠ ವಿಮಾ ಮೊತ್ತ ₹10 ಲಕ್ಷ ವರೆಗೆ ಪಡೆಯಬಹುದು. ಪ್ರೀಮಿಯಂ ಮೊತ್ತವನ್ನು ತಿಂಗಳವಾರು, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ನಿಮ್ಮ ಇಚ್ಚೆಯಂತೆ ಪಾವತಿಸಬಹುದು.
ಬೋನಸ್ ಸೌಲಭ್ಯ
ಈ ಯೋಜನೆಗೆ ಸೇರ್ಪಡೆಯಾದ ನಾಲ್ಕು ವರ್ಷಗಳ ನಂತರ, ಪಾಲಿಸಿಯ ಮೇಲೆ ಸಾಲ ಪಡೆಯಬಹುದು. ಪಾಲಿಸಿದಾರರು 59 ವರ್ಷದ ವಯಸ್ಸು ತಲುಪುವವರೆಗೂ ಪ್ರೀಮಿಯಂ ಪಾವತಿಸಬೇಕು. ಪ್ರತೀ ವರ್ಷ ಪಾಲಿಸಿಗೆ ಬೋನಸ್ ಮೊತ್ತವೂ ಸೇರಿಸಲಾಗುತ್ತದೆ. ಪಾಲಿಸಿ ಮೆಚುರಿಟಿ ಆದಾಗ, ಪಾಲಿಸಿದಾರರಿಗೆ ಖಚಿತವಾದ ವಿಮಾ ಮೊತ್ತ ಜೊತೆಗೆ ಸಂಚಿತ ಬೋನಸ್ ಮೊತ್ತವನ್ನೂ ನೀಡಲಾಗುತ್ತದೆ.
ಯಾರಿಗೆ ಈ ಯೋಜನೆ ಸೂಕ್ತ?
ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಆದಾಯದ ಗುಂಪುಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ, ಸುರಕ್ಷಿತ ಮತ್ತು ಗ್ಯಾರಂಟಿಯಡ್ ರಿಟರ್ನ್ ನೊಂದಿಗೆ ದೀರ್ಘಕಾಲಿಕ ಉಳಿತಾಯ ಯೋಜನೆಯನ್ನು ಬಯಸುವವರಿಗೆ ಸೂಕ್ತ. ಯೋಜನೆಯ ಲಾಭವು ಆಯ್ಕೆ ಮಾಡಿದ ಅವಧಿ ಮತ್ತು ಬೋನಸ್ ದರವನ್ನು ಅವಲಂಬಿಸಿರುತ್ತದೆ. ಹೀಗಾಗಿ, ಸೇರಿಕೊಳ್ಳುವ ಮೊದಲು ಸಂಪೂರ್ಣ ವಿವರಗಳನ್ನು ಸ್ಥಳೀಯ ಅಂಚೆ ಕಚೇರಿಯಿಂದ ಖಚಿತಪಡಿಸಿಕೊಳ್ಳಿ.



