43 ಲಕ್ಷದ ಒಡೆಯರಾಗುವ ಸುಲಭ ದಾರಿ: ರಿಸ್ಕ್ ಇಲ್ಲ, ಟ್ಯಾಕ್ಸ್ ಇಲ್ಲ – ಕೇಂದ್ರ ಸರ್ಕಾರದ ಅದ್ಭುತ ಯೋಜನೆ!

Post Office PPF Scheme | ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೇಲೆ ಹೆಚ್ಚಿನ ಆಸಕ್ತಿ ಕಾಣಿಸುತ್ತಿದೆ. ಏಕೆ೦ದರೆ ಈ ಯೋಜನೆಗಳು ಸುರಕ್ಷಿತವಾಗಿಯೂ ಇರುತ್ತವೆ. ಕಡಿಮೆ ಅವಧಿಯಲ್ಲಿ ಉತ್ತಮ ಲಾಭ…

"Post Office Public Provident Fund (PPF) Scheme 2026 - Invest Daily 411 Rupees and Earn 43 Lakhs - Money Growth and Treasure Chest Image"

Post Office PPF Scheme | ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೇಲೆ ಹೆಚ್ಚಿನ ಆಸಕ್ತಿ ಕಾಣಿಸುತ್ತಿದೆ. ಏಕೆ೦ದರೆ ಈ ಯೋಜನೆಗಳು ಸುರಕ್ಷಿತವಾಗಿಯೂ ಇರುತ್ತವೆ. ಕಡಿಮೆ ಅವಧಿಯಲ್ಲಿ ಉತ್ತಮ ಲಾಭ ನೀಡುತ್ತವೆ. ಹೀಗಾಗಿ ಹೂಡಿಕೆ ಮಾಡಲು ಹುಡುಕುತ್ತಿರುವವರಿಗೆ ಪೋಸ್ಟ್ 83 ಆಫೀಸ್ ಯೋಜನೆಗಳು ಅತ್ಯುತ್ತಮ ಎನ್ನಬಹುದು. ಇತ್ತೀಚೆಗೆ ಪೋಸ್ಟ್ ಆಫೀಸಿನಿ೦ದ ಮತ್ತೊಂದು ಅದ್ಭುತ ಯೋಜನೆ ಹೊರಬಂದಿದೆ. ಆ ಯೋಜನೆಯಾ ಕುರಿತ ಮಾಹಿತಿ ಇಲ್ಲಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್‌

ದೀರ್ಘಾವಧಿಯ ಹೂಡಿಕೆ ಹಾಗೂ ತೆರಿಗೆ ವಿನಾಯಿತಿ ಬಯಸುವವರಿಗೆ ಪೋಸ್ಟ್ ಆಫೀಸಿನಲ್ಲಿ ಅದ್ಭುತ ಯೋಜನೆ ದೊರೆಯುತ್ತದೆ. ಅದೇ ‘ಪಬ್ಲಿಕ್ ಪ್ರಾವಿಡೆಂಟ್‌ ಫಂಡ್’ (PPF) ಯೋಜನೆ. ಈ ಯೋಜನೆಯಲ್ಲಿ ದಿನಕ್ಕೆ ಕೇವಲ ರೂ.411 ಹೂಡಿದರೆ, 15 ವರ್ಷಗಳ ನಂತರ ರೂ.43.60 ಲಕ್ಷ ಮೆಕ್ಯೂರಿಟಿ ಮೊತ್ತ ಪಡೆಯಬಹುದು. ಪ್ರಸ್ತುತ ಈ ಯೋಜನೆಯಲ್ಲಿ ವರ್ಷಕ್ಕೆ 7.9% ಬಡ್ಡಿದರ ಲಭ್ಯ. ಇದು ಸುರಕ್ಷಿತ ಯೋಜನೆಗಳಲ್ಲಿ ಹೆಚ್ಚಿನ ಲಾಭ ನೀಡುವ ಯೋಜನೆ.

ರೂ.43 ಲಕ್ಷ ಹೇಗೆ ಸಿಗುತ್ತದೆ?

ನೀವು ಪಿಪಿಎಫ್ ಖಾತೆಯಲ್ಲಿ ದಿನಕ್ಕೆ ರೂ.411 ಹೂಡಿಕೆ ಮಾಡಿದರೆ, ವರ್ಷಕ್ಕೆ ರೂ.1.5 ಲಕ್ಷ ಹೂಡಿದಂತೆ ಆಗುತ್ತದೆ. ಈ ಯೋಜನೆಯ ಅವಧಿ 15 ವರ್ಷಗಳಾಗಿರುವುದರಿಂದ ನಿರಂತರವಾಗಿ ಹೂಡಿಕೆ ಮಾಡಿದರೆ, ಮೆಕ್ಯೂರಿಟಿಯ ಸಮಯದಲ್ಲಿ ಸುಮಾರು ರೂ.43.60 ಲಕ್ಷ ಸಿಗುತ್ತದೆ. ಇದರಲ್ಲಿ ರೂ.21 ಲಕ್ಷಕ್ಕೂ ಹೆಚ್ಚು ಬಡ್ಡಿಯಾಗಿ ಲಭ್ಯವಾಗುತ್ತದೆ.

Vijayaprabha Mobile App free

ತೆರಿಗೆ ವಿನಾಯಿತಿ

ಪಿಪಿಎಫ್ ಯೋಜನೆಯಲ್ಲಿ ಹೂಡಿದ ಮೊತ್ತ, ಬಡ್ಡಿ ಆದಾಯ, ಹಾಗೂ ಮೆಕ್ಯೂರಿಟಿ ಮೊತ್ತ ಕೂಡ ತೆರಿಗೆಯಿಲ್ಲದೆ ಲಭ್ಯವಾಗಲಿದೆ. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಬರುತ್ತದೆ. ಸರ್ಕಾರದಿಂದಲೇ ಭರವಸೆ ಇರುವುದರಿಂದ ಹೂಡಿಕೆ ಸಂಪೂರ್ಣ ಸುರಕ್ಷಿತ. ಇದಲ್ಲದೆ ಬ್ಯಾಂಕ್ ಫಿಕ್ಸ್‌ಡ್ ಡಿಪಾಸಿಟ್‌ಗಿಂತ ಹೆಚ್ಚಾದರೂ ಬಡ್ಡಿ ಲಭ್ಯವಿರುತ್ತದೆ.

ಬಳಕೆದಾರರ ಸೌಲಭ್ಯ

ಪಿಪಿಎಫ್ ಖಾತೆ ತೆರೆಯುವುದು ಹಾಗೂ ನಿರ್ವಹಿಸುವುದು ತು೦ಬಾ ಸುಲಭ. ಹಣವನ್ನು ಒಮ್ಮೆಗೆ, ಮಾಸಿಕವಾಗಿ, ಅಥವಾ ವಾರ್ಷಿಕವಾಗಿ ಜಮಾ ಮಾಡಬಹುದು. ಅ೦ದರೆ ಒಮ್ಮೆಲೆ ಅಥವಾ 12 ಮಾಸಿಕ ಕಂತುಗಳಲ್ಲಿ ಹಾಕಬಹುದು. ಖಾತೆ ಸಕ್ರಿಯವಾಗಿರಲು ಪ್ರತಿಯೊಂದು ಆರ್ಥಿಕ ವರ್ಷದಲ್ಲೂ ಕನಿಷ್ಠ ರೂ.500 ಜಮಾ ಮಾಡಲೇಬೇಕು. ತುರ್ತು ಪರಿಸ್ಥಿತಿಗಳಲ್ಲಿ 3ನೇ ವರ್ಷದಿಂದ 6ನೇ ವರ್ಷದವರೆಗೆ ಸಾಲ ಸೌಲಭ್ಯ ದೊರೆಯುತ್ತದೆ.

ಹೇಗೆ ಹೂಡಿಕೆ ಮಾಡಬೇಕು?

ಈ ಯೋಜನೆಯಲ್ಲಿ ಭಾಗವಹಿಸಲು, ಪೋಸ್ಟ್ ಆಫೀಸಿನಲ್ಲಿ ಪಿಪಿಎಫ್ ಖಾತೆ ತೆರೆಯಬೇಕು. ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. ಜಂಟಿ ಖಾತೆಗಳಿಗೆ ಅವಕಾಶವಿಲ್ಲ. ಆದರೆ ಇ೦ಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಥವಾ TalkPay ಆಪ್ ಮೂಲಕ ಬ್ಯಾಂಕ್ ಖಾತೆಯಿ೦ದಲೇ ಪಿಪಿಎಫ್ ಖಾತೆಗೆ ಆನ್‌ಲೈನ್ ಮೂಲಕ ಹಣ ವರ್ಗಾಯಿಸಬಹುದು. ಚಿಕ್ಕ ಮೊತ್ತಗಳಿಂದ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಬಯಸುವವರಿಗೆ ಪಿಪಿಎಫ್ ಉತ್ತಮ ಆಯ್ಕೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪೋಸ್ಟ್ ಆಫೀಸನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply