Ujjwala Yojan | ದೇಶದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎ೦ಯುವೈ) ಒ೦ದು. ದೇಶದ ಯಾವುದೇ ಗೃಹಿಣಿಯೂ ಅಡಿಗೆ ಹೊಗೆಯಿ೦ದ ಬಳಲಬಾರದೆಂಬ ಉದ್ದೇಶದಿ೦ದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಈಗಾಗಲೇ ಸುಮಾರು ಹತ್ತು ಕೋಟಿ ಕುಟು೦ಬಗಳಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಲಭ್ಯವಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Ujjwala Yojan ; ಒಂದು ಗ್ಯಾಸ್ ಸ್ಟೋವ್, ಒಂದು ಗ್ಯಾಸ್ ಸಿಲಿಂಡರ್

2016, ಮೇ 1ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ ಬಡತನ ರೇಖೆಗೆ ಕೆಳಗಿನ (ಬಿಪಿಎಲ್) ಮಹಿಳೆಯರಿಗೆ, ಅಂದರೆ ಬಡ ಕುಟುಂಬಗಳಿಗೆ ಸೇರಿದ ಮಹಿಳೆಯರಿಗೆ ಎಲ್ಪಿಜಿ ಸಂಪರ್ಕಗಳನ್ನು ನೀಡುವುದು ಸರ್ಕಾರದ ಉದ್ದೇಶ. ಅರ್ಹ ಫಲಾನುಭವಿಗಳಿಗೆ ಒಂದು ಗ್ಯಾಸ್ ಸೌವ್, ಒಂದು ಗ್ಯಾಸ್ ಸಿಲಿಂಡರ್ ಅನ್ನು ಕೇಂದ್ರವು ಉಚಿತವಾಗಿ ನೀಡುತ್ತಿದೆ. ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮೇಲೆ 12 ತಿಂಗಳ ಕಾಲ 12 ಸಿಲಿಂಡರ್ ಗಳವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ.
Ujjwala Yojan : ಅರ್ಹತೆ, ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ಮಹಿಳೆ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು, SC/ST, OBC, ಅತಿ ಹಿಂದುಳಿದ ವರ್ಗದವರು, ರೇಷನ್ ಕಾರ್ಡ್ ಕಡ್ಡಾಯ, ಈಗಾಗಲೇ LPG ಸಂಪರ್ಕ ಹೊಂದಿರುವವರು ಅರ್ಹರಲ್ಲ, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಯಾಗಿರಬೇಕು, ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇರಬಾರದು, ಪುರುಷರಿಗೆ ಈ ಯೋಜನೆಗೆ ಅರ್ಹತೆ ಇಲ್ಲ. ಆಧಾರ್ ಕಾರ್ಡ್ (ಅರ್ಜಿದಾರ & ಕುಟುಂಬದವರು), ಬ್ಯಾಂಕ್ ಖಾತೆ ವಿವರಗಳು, ಮೊಬೈಲ್ ನಂಬರ್, ಪಾಸ್ಪೋರ್ಟ್ ಗಾತ್ರದ ಫೋಟೋ, ಜಾತಿ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ ಇರಬೇಕು.
ಅರ್ಜಿ ಸಲ್ಲಿಸುವಿಕೆ: ಆಫ್ ಲೈನ್, ಆಫ್ಲೈನ್ ವಿಧಾನ
ಅಧಿಕೃತ ವೆಬ್ಸೈಟ್ www.pmuy.gov.in ಗೆ ಭೇಟಿ ನೀಡಿ “New Ujjwala Connection” ಮೇಲೆ ಕ್ಲಿಕ್ ಮಾಡಿ. 3 ಗ್ಯಾಸ್ ಏಜೆನ್ಸಿಗಳ ಹೆಸರುಗಳು ಬರುತ್ತವೆ. ಅವುಗಳಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿ. ನಂತರ ಹೊಸ ಪುಟದಲ್ಲಿ ನಿಮ್ಮ ಹೆಸರು, ಸಮೀಪದ ಗ್ಯಾಸ್ ಏಜೆನ್ಸಿ ಹೆಸರು, ಮೊಬೈಲ್ ನಂಬರ್, ಪಿನ್ ಕೋಡ್ ಮು೦ತಾದ ಮಾಹಿತಿ ತುಂಬಿ. ನಂತರ ಅಗತ್ಯ ದಾಖಲೆಗಳ ಫೋಟೋ ಕಾಪಿಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಫಾರ್ಮ್ ಸಲ್ಲಿಸಿ. ಆಫ್ಲೈನ್ ಆದರೆ ನಿಮ್ಮ ಹತ್ತಿರದ LPG ಡೀಲರ್ ಅಥವಾ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ. ಉಜ್ವಲ ಯೋಜನೆ ಅರ್ಜಿ ಫಾರ್ಮ್ ಪಡೆದು ಪಡೆದು ದಾಖಲೆಗಳೊಂದಿಗೆ ಸಲ್ಲಿಸಿ.
ಅರ್ಜಿದಾರರಿಗೆ ಸರ್ಕಾರದ ಎಚ್ಚರಿಕೆ
ಮೋಸಗಳನ್ನು ತಪ್ಪಿಸಲು, ನಕಲಿ ದಾಖಲೆಗಳನ್ನು ಬಳಸಿ ಅರ್ಜಿ ಸಲ್ಲಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸರ್ಕಾರ ಎಚ್ಚರಿಸಿದೆ.
ಹೆಚ್ಚಿನ ವಿವರಗಳಿಗೆ ಟೋಲ್ ಫ್ರೀ ನಂಬರ್:
1800-266-6696 ಕರೆ ಮಾಡಲು, ಅಧಿಕೃತ ವೆಬ್ ಸೈಟ್: pmuy.gov.in ಭೇಟಿ ಮಾಡಲು ಸೂಚಿಸಲಾಗಿದೆ.




