iPhone 17 Pro : ಐಫೋನ್ 17 ಸರಣಿಯ ಫೋನ್ಗಳು ಬಿಡುಗಡೆಯಾಗಿದ್ದು, ಖರೀದಿದಾರರು ಮೊದಲ ದಿನವೇ ಅದನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಇನ್ನು ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಇವುಗಳ ಬೆಲೆಗಳು ಕಡಿಮೆ.
ಐಫೋನ್ 17 ಪ್ರೊ ಸರಣಿಯ ಫೋನ್ಗಳು ಭಾರತದಲ್ಲಿ 1,34,900ರೂ. ಇದೆ. ಅಮೆರಿಕದಲ್ಲಿ 96,870ರೂ. ($1099), UAEಯಲ್ಲಿ 1,12,923 ರೂ. (AED 4,699) & ಜಪಾನ್ನಲ್ಲಿ 1,07,564 ರೂ.ಗೆ ಲಭ್ಯವಿದೆ. ಭಾರತದಲ್ಲಿ ತಯಾರಾಗಿದ್ದರೂ ಬೆಲೆಗಳಲ್ಲಿ ಇಷ್ಟು ವ್ಯತ್ಯಾಸ ಏಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಇವೇ ನೋಡಿ.. ಐಫೋನ್-17 ಸರಣಿಯ ಫೋನ್ಗಳು
ಆಪಲ್ ಐಫೋನ್-17 ಸರಣಿಯನ್ನು ಬಿಡುಗಡೆ ಮಾಡಿದ್ದು, ಇದು ಐಫೋನ್ ಏರ್ ಎಂಬ ತೆಳುವಾದ ಮಾದರಿ ಪರಿಚಯಿಸಲಾಗಿದ್ದು, ಇದು 6.5-ಇಂಚಿನ ಪ್ರೊ ಮೋಷನ್ ಡಿಸ್ಪ್ಲೇ ಹೊಂದಿದ್ದು, ಐಫೋನ್ 17 6.3-ಇಂಚಿನ ಡಿಸ್ಪ್ಲೇ, 120hz ರಿಫ್ರೆಶ್ ದರ & 3NM A19 ಸಿಲಿಕಾನ್ ಚಿಪ್ನ್ನು ಹೊಂದಿದೆ. ಎಲ್ಲಾ ಮಾದರಿಗಳಲ್ಲಿ ಆಂತರಿಕ ಬೇಸ್ ಸ್ಟೋರೇಜ್ 256GB ಆಗಿದೆ. 17 ಪ್ರೊ & ಪ್ರೊ ಮ್ಯಾಕ್ಸ್ 48MP ಟ್ರಿಪಲ್ ಕ್ಯಾಮೆರಾ ಹಾಗೂ A19 ಪ್ರೊ ಚಿಪ್ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
ಹೊಸ ಐಫೋನ್ಗಳ ಬೆಲೆ ಎಷ್ಟು?
- ಐಫೋನ್ 17 (256GB) : 82,900,
- ಐಫೋನ್ 17 (512GB) : 1,02,900,
- ಐಫೋನ್ ಏರ್ (256GB) : 1,19,900,
- ಐಫೋನ್ ಏರ್ (512 GB) : 1,39,900,
- ಐಫೋನ್ ಏರ್ (1TB) : 1,59,900,
- 17 ಪ್ರೊ (256GB) : 1,34,900,
- 17 ಪ್ರೊ (512GB) : 1,54,900,
- 17 ಪ್ರೊ (1TB) : 1,74,900,
- 17 ಪ್ರೊ ಮ್ಯಾಕ್ಸ್ (256GB) : 1,49,900,
- 17 ಪ್ರೊ ಮ್ಯಾಕ್ಸ್ (512GB) : 1,69,900,
- 17 ಪ್ರೊ ಮ್ಯಾಕ್ಸ್ (1TB) : 1,89,900,
- 17 ಪ್ರೊ ಮ್ಯಾಕ್ಸ್ (2TB) : 2,29,900




