Jaswinder Bhalla passes away : ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಪಂಜಾಬಿ ಹಿರಿಯ ಹಾಸ್ಯನಟ ಜಸ್ವಿಂದರ್ ಭಲ್ಲಾ (Jaswinder Bhalla) (65) ಇಂದು ಬೆಳಗ್ಗೆ ಪಂಜಾಬ್ನ ಮೊಹಾಲಿಯಲ್ಲಿ ನಿಧನರಾಗಿದ್ದಾರೆ.
ಹೌದು, ಅನಾರೋಗ್ಯದಿಂದ ಬಳಲುತ್ತಿದ್ದ ನಟ ಜಸ್ವಿಂದರ್ ಭಲ್ಲಾ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ
ತಮ್ಮ ವಿಶಿಷ್ಟ ಹಾಸ್ಯ ಶೈಲಿ, ವಿಭಿನ್ನ ಪಾತ್ರಗಳಿಂದ ಭಲ್ಲಾ, ಪಂಜಾಬಿ ಮನರಂಜನಾ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಹಿರಿಯ ನಟನ ನಿಧನದ ಸುದ್ದಿ ಪಂಜಾಬಿ ಚಲನಚಿತ್ರೋದ್ಯಮ & ಅವರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಪ್ರಾಧ್ಯಾಪಕರಾಗಿದ್ದ ಅವರು 1988 ರಲ್ಲಿ ʻಛನ್ಕಟಾ 88ʼ ಚಿತ್ರದ ಮೂಲಕ ಹಾಸ್ಯನಟರಾಗಿ ವೃತ್ತಿಜೀವನ ಆರಂಭಿಸಿದ್ದರು.
ಇನ್ನು, ಆಗಸ್ಟ್ 23ರಂದು ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




