Gruhalakshmi Yojana | 3 ತಿಂಗಳಾದ್ರೂ ಬಂದಿಲ್ಲ 2 ಸಾವಿರ ರೂ ಹಣ; ಗೃಹಲಕ್ಷ್ಮಿ ಹಣ ಜಮೆ ಆಗದಿರುವುದಕ್ಕೆ ಕಾರಣವೇನು?

Gruhalakshmi Yojana | ರಾಜ್ಯದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Yojana) ಸತತವಾಗಿ ಮೂರು ನಾಲ್ಕು ತಿಂಗಳಿಂದ ಹಣ ಬಾರದ ಕಾರಣ ಮಹಿಳೆಯರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಗೃಹಲಕ್ಷ್ಮಿ ಹಣ ಜಮೆ ಆಗದಿರುವುದಕ್ಕೆ ಕಾರಣವೇನು? ತಿಳಿದುಕೊಳ್ಳೋಣ ಹೌದು,…

Gruhalakshmi Yojana

Gruhalakshmi Yojana | ರಾಜ್ಯದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Yojana) ಸತತವಾಗಿ ಮೂರು ನಾಲ್ಕು ತಿಂಗಳಿಂದ ಹಣ ಬಾರದ ಕಾರಣ ಮಹಿಳೆಯರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಗೃಹಲಕ್ಷ್ಮಿ ಹಣ ಜಮೆ ಆಗದಿರುವುದಕ್ಕೆ ಕಾರಣವೇನು? ತಿಳಿದುಕೊಳ್ಳೋಣ

ಹೌದು, ಹಬ್ಬದ ಸಮಯದಲ್ಲೂ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿದ್ದರಿಂದ ಯೋಜನೆಯ ಫಲಾನುಭವಿ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಂತ್ರಿಕ ತೊಂದರೆ, ಕೇಂದ್ರದ ಹೊಸ ಮಾರ್ಗಸೂಚಿ ಕಾರಣದಿಂದ ತಡವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೂ ಹಣ ಯಾವಾಗ ಜಮಾ ಆಗುತ್ತೆ ಎಂಬ ನಿಖರ ಮಾಹಿತಿ ಇಲ್ಲ. ಹೀಗಾಗಿ ಮಹಿಳೆಯರು ನಿರೀಕ್ಷೆಯಲ್ಲಿದ್ದಾರೆ. ಆದರೆ, ಕೆಲವೆಡೆ ಮಹಿಳೆಯರ ಕತೆಗೆ ಹಣ ಜಮೆ ಆಗಿದೆ ಎಂಬ ಮಾಹಿತಿಯೂ ಸಿಕ್ಕಿದೆ.

What is the reason for the delay in the deposit of the Gruhalakshmi Yojana – ಗೃಹಲಕ್ಷ್ಮಿ ಹಣ ತಡವಾಗಿ ಜಮೆ.. ಕಾರಣವೇನು?

ಗೃಹಲಕ್ಷ್ಮಿ ಹಣ ತಡವಾಗಿ ಜಮೆ ಆಗುತ್ತಿರುವುದನ್ನು ಸರ್ಕಾರ ಒಪ್ಪಿಕೊಂಡಿದ್ದು, ಈ ಮೊದಲು 3 ತಿಂಗಳಿಗೊಮ್ಮೆ ಮುಂಚಿತವಾಗಿ ಹಣ ಬಿಡುಗಡೆ ಆಗುತ್ತಿತ್ತು. ಹಣ ತಡವಾಗಿ ಖಾತೆಗೆ ಜಮೆ ಆಗಲು ಕಾರಣ, ಕೇಂದ್ರ ಸರ್ಕಾರ ನಿಯಮದಂತೆ ತಾಪಂ, ಜಿಪಂ ಮೂಲಕ ಹಣ ವರ್ಗಾವಣೆ ಆಗಬೇಕು. ಈ ನಿಯಮ ಸರ್ಕಾರ ಪಾಲನೆ ಮಾಡಬೇಕು. ಇದರಿಂದ 2 ವಾರ ತಡವಾಗುತ್ತಿದೆ ಎಂದು ಸರ್ಕಾರವೇ ತಿಳಿಸಿದೆ. ಇನ್ನು, ರಾಜ್ಯ ಸರ್ಕಾರ ಕೂಡ ಸರಿಯಾದ ಸಮಯಕ್ಕೆ ಗ್ಯಾರಂಟಿ ನಿಧಿಯನ್ನು ಬಿಡುಗಡೆ ಮಾಡದಿರುವುದು ಹಣ ವರ್ಗಾವಣೆಗೆ ತಡವಾಗುತ್ತಿದೆ ಎನ್ನಲಾಗಿದೆ.

Vijayaprabha Mobile App free

Has the Gruhalakshmi money been deposited in your account – ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ? ಹೀಗೆ ಪರಿಶೀಲಿಸಿ

ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದೆಯೇ? ಪರೀಕ್ಷಿಸಲು ಎರಡು ಸುಲಭ ಮಾರ್ಗಗಳಿದ್ದು, ಮೊದಲನೆಯದಾಗಿ, ಡಿಬಿಟಿ ಕರ್ನಾಟಕ (DBT Karnataka) ಆ್ಯಪ್ ಡೌನ್‌ಲೋಡ್ ಮಾಡಿ, ನಿಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ ಸ್ಥಿತಿ ಪರಿಶೀಲಿಸಬಹುದು.

ಎರಡನೆಯದಾಗಿ, ಮಾಹಿತಿ ಕಣಜ (mahitikanaja.karnataka.gov.in) ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಡಿತರ ಚೀಟಿ ಸಂಖ್ಯೆ ನಮೂದಿಸಿ ವಿವರ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ ಸಂಖ್ಯೆ 1907 ಅಥವಾ 08022279954 ಅನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.