Khadi flag : ಆಗಸ್ಟ್ 15 – ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮಹತ್ವದ ದಿನವಾಗಿದ್ದು, ಈ ದಿನದ೦ದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೆ ಅತ್ಯಂತ ಪವಿತ್ರ. ಮಹಾತ್ಮಾ ಗಾಂಧೀಜಿ ನೇತೃತ್ವದ ಸ್ವದೇಶಿ ಚಳವಳಿಯ ಪ್ರಮುಖ ಅಂಶವೇ ಖಾದಿ. ಸ್ವಾತಂತ್ರೋತ್ಸವ ಆಚರಿಸುವಾಗ, ಪ್ಲಾಸ್ಟಿಕ್ ಧ್ವಜಗಳ ಬದಲು ಖಾದಿ ಧ್ವಜ ಯಾಕೆ ಬಳಸಬೇಕು ಈ ಲೇಖನದಲ್ಲಿ ತಿಳಿಯೋಣ.
ಸ್ವಾತಂತ್ರ್ಯ ಹೋರಾಟದ ಸಂಕೇತ
ಖಾದಿಯು ಭಾರತ ಸ್ವಾತಂತ್ರ್ಯ ಹೋರಾಟದ ಪ್ರತೀಕ. ಗಾಂಧೀಜಿ ಖಾದಿಯನ್ನು ಬ್ರಿಟಿಷ್ ವಸ್ತ್ರಗಳಿಗೆ ವಿರುದ್ಧವಾಗಿ ರಾಷ್ಟ್ರೀಯ ಸ್ವಾಭಿಮಾನದ ಪ್ರಾತಿನಿಧ್ಯವಾಗಿದ್ದರು. ಧ್ವಜವನ್ನು ಖಾದಿಯಲ್ಲಿ ತಯಾರಿಸುವುದು ದೇಶಭಕ್ತಿಯ ಪ್ರತೀಕ. ಖಾದಿ ಧ್ವಜ ಹಾರಿಸುವುದು ಸ್ವಾತಂತ್ರ್ಯ ಹೋರಾಟದ ಆದರ್ಶಗಳಿಗೆ ಗೌರವ ಸಲ್ಲಿಸುವುದಾಗಿದೆ.
ಸ್ವದೇಶಿ ಉತ್ಪನ್ನ
ಖಾದಿ ಭಾರತದ ಗ್ರಾಮೀಣ ಕೈಗಾರಿಕೆಯ ಸಜೀವ ಉದಾಹರಣೆ. ಇದನ್ನು ದೇಶದ ಗ್ರಾಮೀಣ ಕಾರ್ಮಿಕರು ಹಸ್ತಚಲಿತ ಯಂತ್ರಗಳಲ್ಲಿ ತಯಾರಿಸುತ್ತಾರೆ. ಖಾದಿ ಧ್ವಜ ಬಳಸುವುದು ಸ್ಥಳೀಯ ಉದ್ಯಮ & ಕಾರ್ಮಿಕರಿಗೆ ಬೆಂಬಲ, ಆರ್ಥಿಕ ನೆರವು ಒದಗಿಸಿದಂತೆ.
ಕಾನೂನುಬದ್ಧವಾಗಿ ಮಾನ್ಯತೆ ಪಡೆದ ಧ್ವಜ
ಭಾರತೀಯ ಧ್ವಜದ ತಯಾರಿಕೆ ಮತ್ತು ಬಳಕೆ ಕುರಿತು ಇರುವ ನಿಯಮಗಳ ಪ್ರಕಾರ, ಧ್ವಜವನ್ನು ಕೇವಲ ಖಾದಿಯಿಂದಲೇ ತಯಾರಿಸಬೇಕು ಎಂದು ಹೇಳಲಾಗಿದೆ. ಅದು ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಮಾನದಂಡಗಳಿಗೆ ಅನುಗುಣವಾಗಿರಬೇಕು. ಪ್ಲಾಸ್ಟಿಕ್ ಧ್ವಜಗಳು ಈ ನಿಯಮದ ವಿರುದ್ಧವಾಗಿವೆ.
ಪರಿಸರ ಸ್ನೇಹಿ
ಖಾದಿ ನೈಸರ್ಗಿಕ ಬಟ್ಟೆ. ಇದನ್ನು ಹಸ್ತಚಲಿತ ಯಂತ್ರಗಳಲ್ಲಿ ನೇಯಲಾಗುತ್ತದೆ. ಯಾವುದೇ ಮಾಲಿನ್ಯವಿಲ್ಲ. ಇದು ಪರಿಸರಕ್ಕೆ ಹಾನಿಕಾರಕವಲ್ಲ.
ಧ್ವಜದ ಗೌರವ ಕಾಪಾಡುವುದು ಕರ್ತವ್ಯ
ರಾಷ್ಟ್ರಧ್ವಜವು ಖಾದಿಯಲ್ಲಿ ತಯಾರಾಗುವುದೇ ಅದರ ಗೌರವ, ಶ್ರೇಷ್ಠತೆ & ಉದ್ದೇಶ ಬಿಂಬಿಸುತ್ತದೆ.
ಪ್ಲಾಸ್ಟಿಕ್ ಧ್ವಜಗಳು ಉಪಯೋಗದ ನಂತರ ರಸ್ತೆಗಳಲ್ಲಿ, ಕೊಳಕು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಖಾದಿ ಧ್ವಜವನ್ನು ಮರ್ಯಾದೆಯಿಂದ ಬಳಸಿ, ಗೌರವಪೂರ್ವಕವಾಗಿ ನಡಸಬಹುದು.




