BPL cardholders | BPL ಕಾರ್ಡುದಾರರಿಗೆ ಕಿಡ್ನಿ, ಹೃದಯ ಕಸಿಗೆ ಉಚಿತ ಪ್ಯಾಕೇಜ್

BPL cardholders : 1994ರ ಆಗಸ್ಟ್ 3 ರಂದು ಭಾರತದ ಮೊದಲ ಯಶಸ್ವಿ ಹೃದಯ ಕಸಿ ನಡೆಸಲಾಯಿತು. ಈ ಕಾರ್ಯಕ್ರಮದ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 3 ರಂದು ಭಾರತೀಯ ಅಂಗಾಂಗ ದಾನ ದಿನವನ್ನಾಗಿ…

BPL cardholders

BPL cardholders : 1994ರ ಆಗಸ್ಟ್ 3 ರಂದು ಭಾರತದ ಮೊದಲ ಯಶಸ್ವಿ ಹೃದಯ ಕಸಿ ನಡೆಸಲಾಯಿತು. ಈ ಕಾರ್ಯಕ್ರಮದ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 3 ರಂದು ಭಾರತೀಯ ಅಂಗಾಂಗ ದಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಆದರೆ BPL ಕಾರ್ಡುದಾರರು ಅಂಗಾಂಗ ದಾನಕ್ಕಾಗಿ ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಡವರಿಗೆ ಸಹಕಾರಿ

ಅಂಗಾಂಗ ಕಸಿ ಅಗ್ಗದ ಕೆಲಸವಲ್ಲ. ಅದಕ್ಕೆ ತುಂಬಾ ಖರ್ಚಾಗುತ್ತದೆ. ಅಂಗಾಂಗ ಕಸಿ ಅಗತ್ಯವಿರುವ ಬಡವರಿಗೆ ಇದು ದೂರದ ಕನಸು. ಅಂತಹವರಿಗೆ ನೆರವಾಗಲೆಂದು ಸರ್ಕಾರ ಯೋಜನೆವೊಂದನ್ನು ರೂಪಿಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್ ನಿಗದಿಪಡಿಸಿದೆ.

ಉಚಿತ ಪ್ಯಾಕೇಜ್ ದರ ವಿವರ

  • ಕಿಡ್ನಿ ಕಸಿಗಾಗಿ: ₹2 ಲಕ್ಷ+ ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ₹1 ಲಕ್ಷ = ಒಟ್ಟು ₹3 ಲಕ್ಷ ಆಗುತ್ತದೆ.
  • ಲಿವರ್ ಕಸಿ: ₹11 ಲಕ್ಷ+ ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ₹1 ಲಕ್ಷ = ಒಟ್ಟು ₹12 ಲಕ್ಷ
  • ಹೃದಯ ಕಸಿ: ₹10 ಲಕ್ಷ+ ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ₹1 ಲಕ್ಷ = ಒಟ್ಟು ₹11 ಲಕ್ಷ
  • ಶ್ವಾಸಕೋಶ ಕಸಿ: ₹15 ಲಕ್ಷ+ ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ₹1 ಲಕ್ಷ = ಒಟ್ಟು ₹16 ಲಕ್ಷ
  • ಹೃದಯ & ಶ್ವಾಸಕೋಶ ಕಸಿ: ₹22.50 ಲಕ್ಷ+ ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ₹1 ಲಕ್ಷ = ಒಟ್ಟು ₹23.50 ಲಕ್ಷ

ಯಾವ್ಯಾವ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ?

ಸರ್ಕಾರಿ ಆಸ್ಪತ್ರೆಗಳಾದ ನೆಪ್ರೋ-ಯುರಾಲಜಿ ಸಂಸ್ಥೆ, ಬೆಂಗಳೂರು ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ ಕಿಮ್ಸ್‌ ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ, ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ಕಸಿ ಮತ್ತು IGOT ನಲ್ಲಿ ಲಿವರ್ ಕಸಿ ಮಾಡಲಾಗುತ್ತದೆ.

Vijayaprabha Mobile App free

ನೋಂದಾಯಿತ ಆಸ್ಪತ್ರೆಗಳ ಸಂಖ್ಯೆ: 82

  • ಬೆಂಗಳೂರು ವಲಯ: 51
  • ಮಂಗಳೂರು: 12
  • ಹುಬ್ಬಳ್ಳಿ/ಧಾರವಾಡ: 07
  • ಕಲಬುರಗಿ: 04
  • ಮೈಸೂರು: 08
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.