Gram Suraksha Yojana | ದಿನಕ್ಕೆ ₹50 ಹೂಡಿಕೆ ಮಾಡಿದ್ರೆ ₹35 ಲಕ್ಷ

Gram Suraksha Yojana : ಸಣ್ಣ ಮೊತ್ತವನ್ನು ಹೂಡಿಕೆ ಮಾಡಿ ದೊಡ್ಡ ಮೊತ್ತ ಪಡೆಯಲು ಬಯಸುವವರಿಗೆ ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ಅತ್ಯುತ್ತಮ ಆಯ್ಕೆಯಾಗಿದ್ದು, ಈ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ…

Gram suraksha yojana

Gram Suraksha Yojana : ಸಣ್ಣ ಮೊತ್ತವನ್ನು ಹೂಡಿಕೆ ಮಾಡಿ ದೊಡ್ಡ ಮೊತ್ತ ಪಡೆಯಲು ಬಯಸುವವರಿಗೆ ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ಅತ್ಯುತ್ತಮ ಆಯ್ಕೆಯಾಗಿದ್ದು, ಈ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ನೀಡುತ್ತಿದ್ದು, ಇದು ಜೀವ ವಿಮಾ ಯೋಜನೆಯಾಗಿದೆ. ಕಡಿಮೆ ಪ್ರೀಮಿಯಂನೊ೦ದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ ಕೇವಲ ರೂ 50 ಹೂಡಿಕೆ ಮಾಡಿದರೆ, ದೀರ್ಘಾವಧಿಯಲ್ಲಿ ₹35 ಲಕ್ಷ ಲಾಭ ಪಡೆಯಬಹುದು.

ಯಾರು ಅರ್ಹರು?

19 ರಿಂದ 55 ವರ್ಷದೊಳಗಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಕನಿಷ್ಠ ವಿಮಾ ಮೊತ್ತ ₹10,000 & ಗರಿಷ್ಠ ವಿಮಾ ಮೊತ್ತ ₹10 ಲಕ್ಷ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಪ್ರೀಮಿಯಂ ಪಾವತಿಸಬಹುದು.

ಇದನ್ನೂ ಓದಿ: SSLC ಪಾಸ್ ಆದವರಿಗೆ 4,987 ಉದ್ಯೋಗಗಳು 69 ಸಾವಿರ ಸಂಬಳ!

Vijayaprabha Mobile App free

ಲಾಭ ಹೇಗಿರುತ್ತದೆ?

ಈ ಪಾಲಿಸಿಯ ಪ್ರಕಾರ 80 ನೇ ವಯಸ್ಸಿನಲ್ಲಿ ನೀವು ₹35 ಲಕ್ಷದವರೆಗೆ ಲಾಭ ಪಡೆಯಬಹುದು. ವಿವಿಧ ವಯಸ್ಸಿನಲ್ಲಿ ಮುಕ್ತಾಯ ಮೌಲ್ಯಗಳು ಈ ಕೆಳಗಿನಂತಿವೆ. ಪಾಲಿಸಿದಾರರು ಅದಕ್ಕೂ ಮೊದಲು ಮರಣಹೊಂದಿದರೆ, ನಾಮಿನಿಗೆ ಬೋನಸ್ ಜೊತೆಗೆ ಸಂಪೂರ್ಣ ಪ್ರಯೋಜನ ಸಿಗುತ್ತದೆ.

ಬೋನಸ್ & ಸಾಲ ಸೌಲಭ್ಯ

  • 5 ವರ್ಷಗಳ ನಂತರ ಪಾಲಿಸಿಯ ಮೇಲೆ ವಾರ್ಷಿಕ ಬೋನಸ್ ಅನ್ವಯಿಸುತ್ತದೆ.
  • 4 ವರ್ಷಗಳ ನಂತರ, ಪಾಲಿಸಿ ಮೌಲ್ಯದ ಮೇಲೆ ಸಾಲವನ್ನು ತೆಗೆದುಕೊಳ್ಳುವ ಆಯ್ಕೆ ಸಹ ಇದೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ; ಮಹಿಳೆಯರ ಖಾತೆಗೆ 2000 ರೂ…!

ಪ್ರಯೋಜನಗಳೇನು?

ಹೂಡಿಕೆಯು ತುಂಬಾ ಸುರಕ್ಷಿತವಾಗಿದ್ದು, ಇದು ಅಂಚೆ ಕಚೇರಿಯ ಮೇಲ್ವಿಚಾರಣೆಯಲ್ಲಿದೆ. ಅಲ್ಲದೆ, ಇದು ಕೇಂದ್ರ ಸರ್ಕಾರಿ ಸಂಸ್ಥೆಯಾಗಿರುವುದರಿ೦ದ, ನಿಮ್ಮ ಹಣವನ್ನು ಮೋಸ ಮಾಡಲಾಗುವುದಿಲ್ಲ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಇದೊ೦ದು ಉತ್ತಮ ಆಯ್ಕೆಯಾಗಿದೆ. ಸೆಕ್ಷನ್ 80C ಅಡಿಯಲ್ಲಿ ಆದಾಯ ಕಡಿತ ಲಭ್ಯವಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.