Gruhalakshmi Yojana : ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ಆಗಸ್ಟ್ 2ರಿಂದ ಹಂತ ಹಂತವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಸರ್ಕಾರ ಆರಂಭಿಸಿದ್ದು, ಹಲವಾರು ಫಲಾನುಭವಿಗಳಿಗೆ ಈಗಾಗಲೇ ಹಣ ಜಮಾ ಆಗಿದೆ ಎನ್ನಲಾಗಿದೆ.
ಹೌದು, ಹಲವಾರು ಫಲಾನುಭವಿಗಳಿಗೆ ಈಗಾಗಲೇ ಹಣ ಜಮಾ ಆಗಿದ್ದು, ಕೆಲವರ ಪಾವತಿಯಲ್ಲಿ ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾಗಿದೆ. ಆದರೂ, ಈ ಹಣ ಎಲ್ಲರ ಖಾತೆಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಉಳಿದ ಮಹಿಳೆಯರಿಗೂ ಹಣ ಜಮಾ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಜಮೆ?- DBT ಅಪ್ಲಿಕೇಶನ್ ಮೂಲಕ ಚೆಕ್ ಮಾಡಿ
ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಬಾಕಿ 2 ಕಂತುಗಳು ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಇಲ್ಲಿಯವರೆಗೆ ಒಟ್ಟು 20ನೇ ಕಂತು ರಿಲೀಸ್ ಆಗಿದೆ. ಸದ್ಯ 21, 22ನೇ ಕಂತುಗಳಿಗೆ ಮಹಿಳೆಯರು ಕಾಯುತ್ತಿದ್ದಾರೆ.
ಯೋಜನೆಯ ಅನುಷ್ಠಾನವನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಮೂಲಕ ಮಾಡಲಾಗುತ್ತಿದೆ ಎಂಬುದು ಹೊಸ ನಿಯಮವಾಗಿದೆ. ಹಣ ಜಮೆಯ ಮಾಹಿತಿಯನ್ನು ಪ್ಲೇ ಸ್ಟೋರ್ ಮೂಲಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ. ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆಯನ್ನು ಬಳಸಿ ನೋಂದಾಯಿಸಿ ಪರಿಶೀಲಿಸಿ.




