ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ

Vastu Shastra | ವಾಸ್ತು ಪುರುಷನು ರಾಜಯೋಗದಲ್ಲಿರುವಾಗ, ಆತನು ಮಲಗಿಕೊಂಡು ನೋಡುವ ದಿಕ್ಕಿಗೆ ಮುಖ ಮಾಡಿ ಶುಭ ಮುಹೂರ್ತದಲ್ಲಿ ಸಿಂಹದ್ವಾರವನ್ನು ಸ್ಥಾಪಿಸಬೇಕು. ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ…

Vastu Shastra

Vastu Shastra | ವಾಸ್ತು ಪುರುಷನು ರಾಜಯೋಗದಲ್ಲಿರುವಾಗ, ಆತನು ಮಲಗಿಕೊಂಡು ನೋಡುವ ದಿಕ್ಕಿಗೆ ಮುಖ ಮಾಡಿ ಶುಭ ಮುಹೂರ್ತದಲ್ಲಿ ಸಿಂಹದ್ವಾರವನ್ನು ಸ್ಥಾಪಿಸಬೇಕು.

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ಬಾಗಿಲು ಚೌಕಟ್ಟನ್ನು ಸ್ಥಾಪಿಸುವ ದಿವಸ ಉದಯ ಕಾಲಕ್ಕೆ ಮನೆಯ ಸದಸ್ಯರೆಲ್ಲರೂ ಶುಚಿರ್ಭೂತರಾಗಿರಬೇಕು. ಮನೆಯ ಯಜಮಾನ ಮನೆ ದೇವರುಗಳ ಪೂಜೆ ಇತ್ಯಾದಿಗಳನ್ನು ಮಾಡಿ ಮುಗಿಸಬೇಕು. ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅರಿಶಿಣ ಕುಂಕುಮ ನೀಡಿ, ಕಂಕಣ ಕಟ್ಟಿ ಹಂಗ ನೂಲು ಹಾಕಿ ಉಡಿ ತುಂಬಿಸಬೇಕು. ಸಿಂಹದ್ವಾರದ ನೈವೇದ್ಯಕ್ಕಾಗಿ ಹೊಸ ಪಾತ್ರೆಯಲ್ಲಿ ಐದು ಸೇರು ಅಕ್ಕಿಯನ್ನು ಮುತ್ತೈದೆಯರಿಂದ ಮಡಿ ನೀರಿನಲ್ಲಿ ತೊಳೆಯಿಸಿ ಹಾಕಿ, ಆಕಳ ಹಾಲಿನಿಂದ ಅನ್ನವನ್ನು ಪಾಯಸದಂತೆ ಮಾಡಿಸಬೇಕು. ಈ ಪಾಯಸಕ್ಕೆ ಬಾಳೆಹಣ್ಣು, ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ಮಧುರವಾಗಿ ಮಾಡಿಸಬೇಕು. ಮನೆ ಯಜಮಾನ, ಪುರೋಹಿತರು, ಗುರು ಹಿರಿಯರು, ಕುಟುಂಬದವರು, ಬಂಧುಗಳು ಮತ್ತು ಮಿತ್ರರೆಲ್ಲ ಸೇರಿಕೊಂಡು, ಪೂಜಾ ಸಾಮಗ್ರಿಗಳನ್ನು, ನೈವೇದ್ಯಕ್ಕೆ ಸಿದ್ಧಪಡಿಸಿದ ಪಾಯಸದ ಪಾತ್ರೆಯನ್ನು ತೆಗೆದುಕೊಂಡು ಮುತ್ತೈದೆಯ ರೊಂದಿಗೆ ಮಂಗಳವಾದ್ಯ ಮುಳುಗಿಸುತ್ತಾ ದ್ವಾರವನ್ನು ಸ್ಥಾಪಿಸುವ ಸ್ಥಳಕ್ಕೆ ಬರಬೇಕು. ಸಿಂಹದ್ವಾರವನ್ನು ತಳಿರು,ತೋರಣ, ಹೂಮಾಲೆಗಳಿಂದ ಅಲಂಕರಿಸಬೇಕು. ಸುಧೋದಕ ಮತ್ತು ಗೋಮೂತ್ರವನ್ನು ಎಲ್ಲಾ ಕಡೆಗೆ ಪ್ರರೋಕ್ಷಿಸಿ, ಪವಿತ್ರ ಗೊಳಿಸಬೇಕು. ಬಾಗಿಲ ಹೊಸ್ತಿಲದ ಅಡಿಯಲ್ಲಿ ಮುತ್ತು, ಹವಳ, ಬಂಗಾರ,ತಾಮ್ರ, ಬೆಳ್ಳಿ, ಅರಿಶಿಣ ಕೊಂಬು, ಅಕ್ಷತೆಗಳನ್ನು ಇರಿಸಬೇಕು. ಬಾಗಿಲ ಚೌಕಟ್ಟನ್ನು ಹೊಸ ವಸ್ತ್ರವನ್ನು ಹೋದಿಸಬೇಕು. ಉಲುಪಿ ಅಥವಾ ಛಾಜ ವನ್ನು ಇಟ್ಟು ಕಂಕಣ ಕಟ್ಟಿ,ಹಂಗ ನೂಲು ಹಾಕಬೇಕು. ಪುರೋಹಿತರು ಮಂತ್ರ ಹೇಳುತ್ತಾ ಶಾಸ್ತ್ರೋಕ್ತವಾಗಿ ಷೋಡಶೋಪಚಾರಗಳಿಂದ ಪೂಜೆಯನ್ನು ಮಾಡಿಸುತ್ತಾರೆ.

Vijayaprabha Mobile App free

ಬಾಗಿಲಿಗೆ ಒಡೆದ ತೆಂಗಿನಕಾಯಿಯ ನೀರನ್ನು ನೈವೇದ್ಯದ ಪಾಯಸಕ್ಕೆ ಹಾಕಬೇಕು. ಒಂದು ಹೊಸ ಸಣ್ಣ ಕುಡಿಕೆಯಲ್ಲಿ ಸ್ವಲ್ಪ ನೈವೇದ್ಯದ ಪಾಯಸವನ್ನು ಹಾಕಿ, ಬಾಯಿಯನ್ನು ಶುಭರ ಬಟ್ಟೆಯಿಂದ ಕಟ್ಟಿ ಪೂಜಿಸಬೇಕು. ಈ ಕುಡಿಕೆಯನ್ನು ಹೊಸ್ಥಿರ ಕೆಳಭಾಗದಲ್ಲಿ ಇಲ್ಲವೇ ಮುಂದೆ ಹುಗಿಯಬೇಕು. ಉಳಿದ ಪಾಯಸವನ್ನು ಮನೆಯ ಸುತ್ತಲೂ ಜಯ ಜಯ ಎಂದು ಅನ್ನುತ್ತಾ ಪ್ರದಕ್ಷಿಣ ಪಥದಲ್ಲಿ ಚರಗ ಚೆಲ್ಲಬೇಕು. ನಂತರ ಎಲ್ಲರೂ ಸೇರಿ ಅಕ್ಷತಾರೋಪಣವನ್ನು ಮಾಡಬೇಕು. ಮುತ್ತೈದೆಯರು ಆರತಿ ಮಾಡಬೇಕು. ಮನೆ ಯಜಮಾನನು ಪುರೋಹಿತರಿಗೆ ಗುರುಗಳಿಗೆ ಮಹೇಶ್ವರರುಗಳಿಗೆ ದಕ್ಷಿಣ ತಾಂಬೂಲುಗಳನ್ನು ನೀಡಬೇಕು. ಬಡಿಗ ಮತ್ತು ಮನೆಯ ಕಟ್ಟುವ ಕೆಲಸಗಾರರು ಉಲುಪಿ ಮತ್ತು ದಕ್ಷಣೆಯನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ಖುಷಿ ಕೊಡಬೇಕು. ನೆರೆದ ಜನರೆಲ್ಲರಿಗೂ ಫಲತಾಂಬೂಲ ನೀಡಬೇಕು. ಬಾಗಿಲ ಚೌಕಟ್ಟಿಗೆ ದೃಷ್ಟಿ ನಿರ್ವಹಣಾತ್ಮಕವಾಗಿ ಉಣ್ಣೆ ಅಥವಾ ರೇಷ್ಮೆ ದಾರದಲ್ಲಿ ಒಂದೊಂದಾಗಿ ಲಿಂಬೆಹಣ್ಣು, ಬಜ್ಜಿ, ಕೆರುಬೀಜ, ( ಗೇರುಬೀಜ ), ಕವಡೆ, ಕೊಬ್ಬರಿಬೆಟ್ಟಲು, ಬೆಟ್ಟಡಿಕೆ, ಮೆಣಸಿನಕಾಯಿಗಳನ್ನು ಕಟ್ಟಿ ಇಳಿಬಿಡಬೇಕು. ಎಲ್ಲಾ ಕಾರ್ಯಕ್ರಮಗಳನ್ನು ಸೂರ್ಯೋದಯದಿಂದ 6 ತಾಸಿನ ಒಳಗಾಗಿ ಪೂರೈಸಿ ಎಲ್ಲರಿಗೂ ಮೃಷ್ಟಾನ್ನ ಭೋಜನ ಮಾಡಿಸಿ ಸಂತೋಷಪಡಿಸಬೇಕು.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.