ಮಾಲ್ಡೀವ್ಸ್: ಕನ್ನಡದ ಚಿತ್ರರಂಗದ ಜೊತೆ ತಮಿಳು, ತೆಲುಗು & ಹಿಂದಿ ಸಿನಿರಂಗದಲ್ಲೂ ಖ್ಯಾತಿಗಳಿಸಿರುವ ನಟಿ ಪ್ರಣಿತಾ ಸುಭಾಷ್ ಇತ್ತೀಚಿಗಷ್ಟೆ ಸಿನಿಮಾದ ಚಿತ್ರೀಕರಣ ಮುಗಿಸಿ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ.
ಮಾಲ್ಡೀವ್ಸ್ ಪ್ರವಾಸವನ್ನು ಸಖತ್ ಎಂಜಾಯ್ ಮಾಡುತ್ತಿರುವ ಪ್ರಣಿತಾ ಅಂಡರ್ ವಾಟರ್ ಸ್ಕೂಟರ್ ಡೈವಿಂಗ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಇದು ಮಾಲ್ಡೀವ್ಸ್‌ನಲ್ಲಿ ನನ್ನ ಮೊದಲ ಸಾಗರದ ಸ್ಕೂಟರ್ ಡೈವಿಂಗ್ ಅನುಭವ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.
ನಟಿ ಪ್ರಣೀತಾ ಅವರು ಇತ್ತೀಚಿಗೆ ರಾಜ್ಯದಲ್ಲಿ ಭಾರಿ ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದ ರಾಜ್ಯದ ಜನರಿಗೆ ಪ್ರಣೀತಾ ಫೌಂಡೇಶನ್ ನಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು.
My first sea bob experience at maldives.. the sea plane and dark clouds add so much to@this vid.. what do you think ? pic.twitter.com/CYA3j3tKBn
— Pranitha Subhash (@pranitasubhash) November 17, 2020