RCB Vs Gujarat Titans : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಹೈ-ವೋಲ್ವೇಜ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇ೦ದು ನಡೆಯಲಿದೆ. ಆರ್‌ಸಿಬಿ ಈಗಾಗಲೇ ಎರಡು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ, ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ.
ಹೆಡ್-ಟು-ಹೆಡ್
ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಹೆಚ್ಚು ಬಾರಿ ಗೆದ್ದ ದಾಖಲೆಯನ್ನು ಆರ್‌ಸಿಬಿ ಹೊಂದಿದೆ. ಬೆಂಗಳೂರು ಮತ್ತು ಗುಜರಾತ್ ತಂಡಗಳು ಐಪಿಎಲ್‌ನಲ್ಲಿ ಈವರೆಗೂ ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ ತಂಡ 3 ಬಾರಿ ಗೆದ್ದರೆ ಗುಜರಾತ್ ತಂಡವು 2 ಬಾರಿ ಗೆಲುವು ಸಾಧಿಸಿದೆ.
ಗೆಲುವು
ಐಪಿಎಲ್ 2022 ರಲ್ಲಿ ಜಿಟಿ ಆರ್‌ಸಿಬಿಯನ್ನು ಆರು ವಿಕೆಟ್ ಗಳಿಂದ ಸೋಲಿಸುವ ಮೂಲಕ ಪೈಪೋಟಿ ಪ್ರಾರ೦ಭವಾಯಿತು. ಎರಡನೇ ಮುಖಾಮುಖಿಯಲ್ಲಿ ಆರ್‌ಸಿಬಿ ಎಂಟು ವಿಕೆಟ್ ಗಳ ಗೆಲುವು ಸಾಧಿಸಿತು. 2023 ರಲ್ಲಿ ಜಿಟಿ ಮತ್ತೊಮ್ಮೆ ಆರ್‌ಸಿಬಿ ವಿರುದ್ಧ ಜಯಗಳಿಸಿತು. 2024 ರಲ್ಲಿ ಆರ್‌ಸಿಬಿ ಎರಡೂ ಮುಖಾಮುಖಿಗಳಲ್ಲಿ ಗೆಲುವು ಸಾಧಿಸಿತು.
ಅತಿ ಹೆಚ್ಚು ಸ್ಕೋರ್
ಗುಜರಾತ್ ವಿರುದ್ಧ ಆರ್‌ಸಿಬಿ ಗಳಿಸಿರುವ ಅತ್ಯಧಿಕ ಸ್ಕೋರ್ 206 ಆಗಿದೆ. ಆರ್‌ಸಿಬಿ ವಿರುದ್ಧ ಗುಜರಾತ್ ಬಾರಿಸಿದ ಅತ್ಯಧಿಕ ರನ್ 200 ರನ್. ಅದೇ ರೀತಿ ಕಡಿಮೆ ಸ್ಕೋರ್ ಎಂದರೆ ಆರ್‌ಸಿಬಿ ಒಮ್ಮೆ 170 ರನ್ ಬಾರಿಸಿದೆ. ಗುಜರಾತ್ 147 ರನ್‌ಗಳಿಸಿತ್ತು. ಈ ಬಾರಿ ಯಾವ ತಂಡ ಮೇಲುಗೈ ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಹೆಚ್ಚು ರನ್ ಗಳಿಸಿದವರು
ಆರ್‌ಸಿಬಿ Vs ಗುಜರಾತ್ ಟೈಟಾನ್ಸ್ ಐಪಿಎಲ್ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದವರು, ವಿರಾಟ್ ಕೊಹ್ಲಿ (ಆರ್‌ಸಿಬಿ) 5 ರ ಸರಾಸರಿಯಲ್ಲಿ 344, ಪಾಫ್ ಡು ಪ್ಲೇಸಿಸ್ (ಆರ್‌ಸಿಬಿ) 5ರ ಸರಾಸರಿಯಲ್ಲಿ 160, ಶುಭಮನ್ ಗಿಲ್ (ಗುಜರಾತ್ ಟೈಟಾನ್ಸ್) 5 ರ ಸರಾಸರಿಯಲ್ಲಿ 154.
ಅತಿ ಹೆಚ್ಚು ವಿಕೆಟ್
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಆರ್‌ಸಿಬಿ Vs ಗುಜರಾತ್ ಟೈಟಾನ್ಸ್ ತ೦ಡದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು, ಮೊಹಮ್ಮದ್ ಸಿರಾಜ್ (ಆರ್‌ಸಿಬಿ) 4 ಪಂದ್ಯ 5 ವಿಕೆಟ್, ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್) 3 ಪಂದ್ಯ 4 ವಿಕೆಟ್, ರಶೀದ್ ಖಾನ್ (ಗುಜರಾತ್ ಟೈಟಾನ್ಸ್) 5 ಪಂದ್ಯ 4 ವಿಕೆಟ್.