ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ, ಜನರು ತಮಾಷೆ ಮಾಡುವ, ಸುಳ್ಳುಗಳನ್ನು ಹರಡುವ ಮತ್ತು ಮೋಜಿಗಾಗಿ ಪರಸ್ಪರ ಮೋಸಮಾಡಲು ಪ್ರಯತ್ನಿಸುವ ದಿನ. ಇದು ನಗುವಿನ ದಿನ, ಅಲ್ಲಿ ನೀವು ಜಾಗರೂಕರಾಗಿರಬೇಕು ಏಕೆಂದರೆ ಯಾರಾದರೂ ನಿಮ್ಮನ್ನು ಮೋಸ ಮಾಡಲು ಪ್ರಯತ್ನಿಸಬಹುದು ಎಂದು ನಿಮಗೆ ತಿಳಿದಿರುವುದಿಲ್ಲ.
ಸ್ನೇಹಿತರ ನಡುವಿನ ಸಣ್ಣ ತಮಾಷೆಯಾಗಿರಲಿ ಅಥವಾ ದೊಡ್ಡ ಕಂಪನಿಗಳು ಅಥವಾ ಮಾಧ್ಯಮಗಳು ಮಾಡುವ ವಿಸ್ತಾರವಾದ ಸುದ್ದಿಗಳಲ್ಲಿ ಮೋಸಗೊಳಿಸಿ, ನಿಮ್ಮನ್ನು ಈ ತಂತ್ರಕ್ಕೆ ಬಲಿಯಾಗುವಂತೆ ಮಾಡಿ ನಂತರ “ಏಪ್ರಿಲ್ ಫೂಲ್!” ಎಂದು ಕರೆಯುವುದನ್ನು ಮೊದಲಿನಿಂದಲು ಗುರಿಯಾಗಿಸಿಕೊಂಡಿದ್ದಾರೆ.
ಏಪ್ರಿಲ್ ಮೂರ್ಖರ ದಿನ ಹೇಗೆ ಪ್ರಾರಂಭವಾಯಿತು ಎಂದು ಯಾರಿಗೂ ಖಚಿತವಾಗಿ ತಿಳಿದಿಲ್ಲ, 1582 ರಲ್ಲಿ, ಫ್ರಾನ್ಸ್ ತನ್ನ ಕ್ಯಾಲೆಂಡರ್ ಅನ್ನು ಜೂಲಿಯನ್ ವ್ಯವಸ್ಥೆಯಿಂದ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಬದಲಾಯಿಸಿತು, ಆದರೆ ಬದಲಾವಣೆಗೂ ಮೊದಲು, ಹೊಸ ವರ್ಷವನ್ನು ಏಪ್ರಿಲ್ 1 ರಂದು ಆಚರಿಸಲಾಗುತ್ತಿತ್ತು.
ಆದರೆ ಕ್ಯಾಲೆಂಡರ್ ಬದಲಾದಾಗ ಮತ್ತು ಹೊಸ ವರ್ಷ ಜನವರಿ 1 ಕ್ಕೆ ಬದಲಾಗಿರುವುದು, ಯಾರಿಗೂ ಸುದ್ದಿ ತಿಳಿದಿರಲಿಲ್ಲ. ಕೆಲವರು ಏಪ್ರಿಲ್‌ನಲ್ಲೇ ಆಚರಿಸುತ್ತಿದ್ದರು, ಮತ್ತು ಇತರರು ಅವರನ್ನು ನೋಡಿ “ಏಪ್ರಿಲ್ ಮೂರ್ಖರು” ಎಂದು ಕರೆದು ತಮಾಷೆ ಮಾಡುವ ಮೂಲಕ ಅಪಹಾಸ್ಯ ಮಾಡಿದರು. ಈ ಕೀಟಲೆ ನಿಧಾನವಾಗಿ ಏಪ್ರಿಲ್ 1 ರಂದು ಫೂಲ್ ಮಾಡುವ ಸಂಪ್ರದಾಯವಾಗಿ ಬದಲಾಯಿತು.
ಇನ್ನೂ ಏಪ್ರಿಲ್ ಮೂರ್ಖರ ದಿನವನ್ನು ಪ್ರಾಚೀನ ರೋಮನ್ ಹಬ್ಬಗಳಾದ ಹಿಲೇರಿಯಾಕ್ಕೆ ಸೇರುತ್ತದೆ, ಅಲ್ಲಿಯ ಜನರು ವೇಷಗಳನ್ನು ಧರಿಸಿ ಪರಸ್ಪರ ಗೇಲಿ ಮಾಡುವುದು ಅಲ್ಲಿಯ ಜನರ ವಿಶೇಷ ಪದ್ಧತಿಯಾಗಿದೆ.
ಕಾಲಾನಂತರದಲ್ಲಿ, ಈ ಸಂಪ್ರದಾಯವು ಪ್ರಪಂಚದಾದ್ಯಂತ ಹರಡಿ ಮತ್ತು ವಿವಿಧ ದೇಶಗಳಲ್ಲಿ ತಮ್ಮದೇ ಆದ ಆಚರಣೆಯ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಂಡವು. ಫ್ರಾನ್ಸ್ ಮತ್ತು ಇಟಲಿಯಲ್ಲಿ, ಜನರು ತಮಾಷೆಯಾಗಿ ಕಾಗದದ ಮೀನುಗಳನ್ನು ಗೊತ್ತಿರದ ಹಾಗೆ ಅಂಟಿಸಿಕೊಂಡ, ಬಲಿಪಶುವನ್ನು “ಏಪ್ರಿಲ್ ಮೀನು” ಎಂದು ಕರೆಯುತ್ತಾರೆ.
ಸ್ಕಾಟ್ಲೆಂಡ್‌ನಲ್ಲಿ, ಏಪ್ರಿಲ್ ಮೂರ್ಖರ ದಿನವು ಎರಡು ದಿನಗಳ ಕಾಲ ನಡೆಯುತ್ತದೆ, ಜನರು ಹಾಸ್ಯಾಸ್ಪದ ಕೆಲಸಗಳನ್ನು ಮಾಡುವುದು. ಯು ಕೆ ಮತ್ತು ಐರ್ಲೆಂಡ್‌ನಲ್ಲಿ, ತಮಾಷೆಗಳನ್ನು ಮಧ್ಯಾಹ್ನದವರೆಗೆ ಮಾತ್ರ ಮಾಡಲಾಗುತ್ತದೆ. ಅದರ ನಂತರ, ನೀವು ಯಾರನ್ನಾದರೂ ಮೂರ್ಖನನ್ನಾಗಿ ಮಾಡಲು ಪ್ರಯತ್ನಿಸಿದರೆ, ನೀವೇ ಮೂರ್ಖರು ಎಂದು ಪರಿಗಣಿಸುವುದು ಸಂಪ್ರದಾಯ.
ಏಪ್ರಿಲ್ ಮೂರ್ಖರ ದಿನ ಎಂದರೆ ಚೆನ್ನಾಗಿ ನಕ್ಕು ನಗಿಸುವುದು, ಆದರೆ ಜೋಕ್‌ಗಳನ್ನು ಹಗುರವಾಗಿ ತೆಗೆದುಕೊಳ್ಳುವುದು ಮುಖ್ಯವಾದ ಸಂಗತಿ,
ದಿನದ ಕೊನೆಯಲ್ಲಿ, ಯಾರನ್ನೂ ಅಸಮಾಧಾನಗೊಳಿಸುವುದು ಇದರ ಉದ್ದೇಶವಲ್ಲ, ಬದಲಾಗಿ ಸ್ವಲ್ಪ ಮೋಜನ್ನು ಹರಡುವುದು.
ಆದ್ದರಿಂದ ಏಪ್ರಿಲ್ 1 ರಂದು ನೀವು ನಂಬಲಾಗದ ಏನನ್ನಾದರೂ ಕೇಳಿದರೆ, ಅದನ್ನು ನಂಬುವ ಮೊದಲು ಎರಡು ಬಾರಿ ಯೋಚಿಸಿ – ಇಲ್ಲದಿದ್ದರೆ ನೀವು ಮುಂದಿನ “ಏಪ್ರಿಲ್ ಮೂರ್ಖ”ರಾಗಬಹುದು.