Crop Insurance Scheme | ರೈತರಿಗಾಗಿ ಬೆಳೆ ವಿಮೆ ಯೋಜನೆ; ಪ್ರಯೋಜನ, ಮಾನದಂಡಗಳು, ಅರ್ಜಿ ಸಲ್ಲಿಕೆ

Crop Insurance Scheme : ಭಾರತದಲ್ಲಿ ಸುಮಾರು ಶೇಕಡಾ 60 ರಷ್ಟು ಕುಟುಂಬಗಳು  ಕೃಷಿಯನ್ನೇ ನಂಬಿ ಬದುಕುತ್ತಿವೆ. ಆದರೆ ಪ್ರಕೃತಿ ವಿಕೋಪಗಳಾದಾಗ  ರೈತರ ಬದುಕು ತುಂಬಾ ದುಸ್ತರವಾಗುತ್ತದೆ. ಸಾಲ ಮಾಡಿ ಬೆಳೆದ ಬೆಳೆ ಪ್ರಕೃತಿ…

Crop Insurance Scheme

Crop Insurance Scheme : ಭಾರತದಲ್ಲಿ ಸುಮಾರು ಶೇಕಡಾ 60 ರಷ್ಟು ಕುಟುಂಬಗಳು  ಕೃಷಿಯನ್ನೇ ನಂಬಿ ಬದುಕುತ್ತಿವೆ. ಆದರೆ ಪ್ರಕೃತಿ ವಿಕೋಪಗಳಾದಾಗ  ರೈತರ ಬದುಕು ತುಂಬಾ ದುಸ್ತರವಾಗುತ್ತದೆ. ಸಾಲ ಮಾಡಿ ಬೆಳೆದ ಬೆಳೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಮರು ಕ್ಷಣವೇ ಎಷ್ಟೊ ರೈತ ಕುಟುಂಬಗಳು ಸಾಲದ ಹೊರೆ ತಾಳದೆ ಬೀದಿಗೆ ಬೀಳುತ್ತವೆ. ಇಂತಹ ಸಂದರ್ಭದಲ್ಲಿ ರೈತರಿಗೆ ಆರ್ಥಿಕವಾಗಿ ಧನ ಸಹಾಯ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಕರ್ನಾಟಕ ರೈತ ಸುರಕ್ಷಾ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿವೆ.

Crop Insurance Scheme ಹೇಗೆ ಕೆಲಸ ಮಾಡುತ್ತದೆ?

ಬೆಳೆ ವಿಮೆ ಯೋಜನೆಯಡಿಯಲ್ಲಿ (Crop Insurance Scheme) ಬೀಜ ಬಿತ್ತನೆ ಕಾರ್ಯ (Seed Sowing Work) ಪ್ರಾರಂಭದ ಮೊದಲೇ ರೈತರು ವಿಮೆ ಖರೀದಿಸಿ ನಿಗದಿತ ಪ್ರೀಮಿಯಂ ಕಟ್ಟಬೇಕಾಗಿದ್ದು, ವಿಮೆ ಖರೀದಿಯ ನಂತರ ತಮ್ಮ ಹೊಲ ಗದ್ದೆಗಳಲ್ಲಿ ಎಂದಿನಂತೆ ಕೆಲಸ ಮುಂದುವರಿಸಬಹುದು.

ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲಿ ಅಥವಾ ತಮ್ಮ ಕೈಮೀರಿದ ಯಾವುದೇ ಘಟನೆಗಳಿಂದಾಗಲಿ ಬೆಳೆ ಹಾನಿ ಸಂಭವಿಸಿದರೆ ರೈತನು ವಿಮೆ ಮಾಡಿದ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯಿಂದ ಪಡೆಯಬಹುದಾಗಿದ್ದು, ಜೊತೆಗೆ ಈ ಮೊತ್ತವನ್ನು ತಮ್ಮ ಸಾಲ ತೀರಿಸಲು ಸಹ ಬಳಸಬಹುದು. ಇದು ರೈತರ ಸಂಸಾರದ ಉಳಿವಿಗೂ ಕಾರಣವಾಗುತ್ತದೆ.

Vijayaprabha Mobile App free

ಇದನ್ನೂ ಓದಿ: PM-AASHA | ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಪಿಎಂ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ; ಉದ್ದೇಶ, ಉಪಯೋಗಗಳು, ಅರ್ಜಿ ಸಲ್ಲಿಕೆ

Crop Insurance Scheme ಬೇಕಾಗಿರುವ ಅರ್ಹತಾ ಮಾನದಂಡಗಳು

ರೈತನು ಭಾರತೀಯ ನಿವಾಸಿಯಾಗಿದ್ದು ಮುಂಗಾರು ಬೆಳೆ ಅಥವಾ ಇನ್ನಿತರ ವಾಣಿಜ್ಯ ಬೆಳೆ, ತೋಟಗಾರಿಕಾ ಬೆಳೆ ಹೊಂದಿರಬೇಕಾಗಿದ್ದು, ಸರ್ಕಾರದ ಕೃಷಿ ಸಾಲದ ಖಾತೆ ಹೊಂದಿರುವಂತಹ ರೈತರು ಯಾವುದೇ ಪರಿಶೀಲನೆಯಿಲ್ಲದೆ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ರೈತನು ಆಯಾ ಪ್ರಾಂತ್ಯದ ಕೃಷಿ ಸಚಿವಾಲಯ ಸೂಚಿಸಿರುವ ಬೆಳೆಗಳನ್ನು ಬೆಳೆಸಬೇಕಾಗಿದ್ದು, ಆಯಾ ಪ್ರದೇಶದ ಭೂಮಿ ಹಾಗೂ ಹವಾಮಾನ ಆಧರಿಸಿ ಬೆಳೆಗಳನ್ನು ಸೂಚಿಸಿರಲಾಗುತ್ತದೆ. ಇದರಿಂದ ಬೆಳೆ ಹಾನಿ ಸಂಭವ ಕಡಿಮೆಯಿರುತ್ತದೆ. ಪ್ರಾಕೃತಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: Airavata scheme | ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ಐರಾವತ ಯೋಜನೆ; ವಾಹನ ಖರೀದಿಸಲು 5 ಲಕ್ಷ ಸಹಾಯಧನ

ಬೆಳೆ ವಿಮೆ ಯೋಜನೆಯಿಂದ ರೈತರಿಗಾಗುವ ಪ್ರಯೋಜನಗಳೇನು?

ಬೆಳೆ ವಿಮೆ ಯೋಜನೆಯಿಂದ ರೈತರು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯು ಬೇರೆ ವಿಮಾ ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ಪ್ರೀಮಿಯಂ ದರದಲ್ಲಿ ವಿಮಾ ಸೌಲಭ್ಯ ಒದಗಿಸುತ್ತದೆ. ಬೆಳೆ ಕೊಯ್ಲು ಮಾಡಿದ ನಂತರ ಬೆಳೆಗಳಿಗೆ ಹಾನಿಯುಂಟಾದರೆ ಪರಿಹಾರ ಒದಗಿಸುತ್ತದೆ.

ಕೃಷಿ ವಲಯದಲ್ಲಿ ಹಣದ ಹರಿವನ್ನು ಒದಗಿಸುವ ಭರವಸೆ ನೀಡುವುದಲ್ಲದೆ, ಯೋಜನೆಯು ಲಾಭದ ವರ್ಗಾವಣೆಯನ್ನು ಸಾರ್ವಜನಿಕರಿಗೆ ನೇರವಾಗಿ ತಲುಪಿಸುವ ಭರವಸೆ ನೀಡಿರುವುದರಿಂದ ದಾಖಲೆ ಪತ್ರಗಳ ವ್ಯವಹಾರ ಮತ್ತು ಭ್ರಷ್ಟಾಚಾರದ ಮಟ್ಟ ತುಂಬಾ ಕಡಿಮೆಯಿರುತ್ತದೆ.

ಇದನ್ನೂ ಓದಿ: Saving money | ಪ್ರತಿ ತಿಂಗಳು ಹಣ ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ ಉತ್ತಮ ಸಲಹೆಗಳು

Crop Insurance Scheme ಆನ್ ಲೈನ್ ನಲ್ಲಿ ಅರ್ಜಿ ಹೇಗೆ ಸಲ್ಲಿಸಬಹುದು?

ಬೆಳೆ ಸಾಲ ಪಡೆಯುವ ರೈತರಿಗೆ ಬ್ಯಾಂಕ್‌ನಿಂದಲೇ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲಾಗುತ್ತಿದ್ದು, ರೈತರು ಅರ್ಜಿಯೊಂದಿಗೆ ಆರ್‌ಟಿಸಿ, ಕಂದಾಯ ರಶೀದಿ, ಖಾತಾ ಪುಸ್ತಕ, ಪಾಸ್‌ಬುಕ್‌, ಆಧಾರ್‌ ಕಾರ್ಡ್‌ ಪ್ರತಿಯನ್ನು ನೀಡಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು. ವಿಮೆ ಮಾಡಿಸುವಾಗ ಯಾವ ಕಂಪನಿಗೆ ಬೆಳೆ ವಿಮೆ ಕಟ್ಟುತ್ತಾರೆಂಬುದನ್ನು ತಿಳಿದುಕೊಳ್ಳಬೇಕು. ಆನ್ ಲೈನ್ ನಲ್ಲಿ ಅರ್ಜಿ ಹೇಗೆ ಸಲ್ಲಿಸಬಹುದು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: NSK TECH NEWS KANNADA

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.