ರಕ್ತ ಭೇದಿ, ಭೇದಿ ನಿಲ್ಲುವುದಕ್ಕೆ ಮನೆ ಔಷಧಿ
1. ಒಂದು ಟೀ ಚಮಚ ಮೆಂತ್ಯ ಪುಡಿಯನ್ನು ಗಟ್ಟಿ ಮೊಸರಿನಲ್ಲಿ ಕಲಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಅಥವಾ ರಕ್ತ ಭೇದಿ ಕಡಿಮೆಯಾಗುವುದು.
2. ಮೆಂತ್ಯವನ್ನು ಹುರಿದು ಕುಟ್ಟಿ ಪುಡಿ ಮಾಡಿ ಒಂದು ಟೀ ಚಮಚದಷ್ಟು ಪುಡಿಯನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿದರೆ ಆಮಶಂಕೆ ಕಡಿಮೆಯಾಗುವುದು.
3. ಉಪ್ಪನ್ನು ಹಾಕಿಕೊಂಡು ನಿಂಬೆ ಹಣ್ಣಿನ ಪಾನಕ ತಯಾರಿಸಿ ಕುಡಿಯುವುದರಿಂದ ಆಮಶಂಕೆಯಲ್ಲಿ ಉಂಟಾಗುವ ರಕ್ತಸ್ರಾವ ಕಡಿಮೆ ಆಗುವುದು.
4. ಬಾಳೆ ದಿಂಡಿನ ಪಲ್ಯ ಮಾಡಿ ತಿನ್ನುವುದರಿಂದ ರಕ್ತಾತಿಸಾರದಲ್ಲಿ ಗುಣ ಕಂಡು ಬರುತ್ತದೆ.
5. ಮಾವಿನ ವಾಟೆಯಲ್ಲಿರುವ ಬೀಜವನ್ನು ಅರೆದು ಮಜ್ಜಿಗೆಯೊಂದಿಗೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಆಮಶಂಕೆಯು ಗುಣವಾಗುತ್ತದೆ.
6. ಅಜೀರ್ಣದ ದೆಸೆಯಿಂದ ತಲೆದೋರುವ ಭೇದಿ ನಿಲ್ಲಲು ಒಂದು ಚಿಟಕೆ ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಭೇದಿ ನಿಲ್ಲುವುದು.
ಇದನ್ನು ಓದಿ: ಗರಿಕೆ ಪೂಜೆಗೆ ಅಷ್ಟೇ ಅಲ್ಲ; ಆರೋಗ್ಯಕ್ಕೂ ಹತ್ತಾರು ಲಾಭವುಂಟು!




