ಮುಂಬೈ : ಬಾಲಿವುಡ್ ಸ್ಟಾರ್ ನಾಯಕಿ ಪ್ರಿಯಾಂಕಾ ಚೋಪ್ರಾ ಹೊಸ ಹಾಲಿವುಡ್ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. 2016 ರ ಜರ್ಮನ್ ಭಾಷೆಯ ಚಿತ್ರ ಎಸ್‌ಎಂಎಸ್ ಫೋರ್ ಡಿಚ್ ನ ರಿಮೇಕ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ನಟಿಸುವ ಅವಕಾಶ ಸಿಕ್ಕಿದೆ.
ಟೆಕ್ಸ್ಟ್ ಫಾರ್ ಯು ಎಂಬ ಶೀರ್ಷಿಕೆಯ ಮುಂಬರುವ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಲಿದ್ದಾರೆ. ಈ ವಿಷವನ್ನು ಪ್ರಿಯಾಂಕಾ ಚೋಪ್ರಾ ಸ್ವತಃ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದ್ಭುತ ಜನರೊಂದಿಗೆ, ಅದ್ಭುತ ಚಿತ್ರವೊಂದರಲ್ಲಿ ನಟಿಸುತ್ತಿರುವುದು ತುಂಬಾ ಸಂತೋಷವಾಗಿದೆ, ಇದು ನನಗೆ ದೊಡ್ಡ ಗೌರವವಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಇದಕ್ಕಾಗಿ ಪ್ರಿಯಾಂಕಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬರಿತ್ತಿದ್ದು, ಅವರ ಪತಿ ನಿಕ್ ಜೊನಾಸ್ ಅವರು ಸಹ ಎಮೋಜಿ ಸಹಿತ ಪೋಸ್ಟ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸೆಲೀನ್ ಡಿಯೋನ್, ಖ್ಯಾತ ನಟ ಸ್ಯಾಮ್ ಹುಘನ್ ಅವರೊಂದಿಗೆ ಪ್ರಿಯಾಂಕ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಗ್ರೇಸ್ ಈಸ್ ಗಾನ್, ಪೀಪಲ್ಸ್ ಥಿಂಗ್ಸ್, ಮತ್ತು ದಿ ಇನ್‌ಕ್ರೆಡಿಬಲ್ ಜೆಸ್ಸಿಕಾ ಜೇಮ್ಸ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಜಿಮ್ ಸ್ಟ್ರಾಸ್ ನಿರ್ದೇಶಿಸಿಸುತ್ತಿದ್ದಾರೆ.