Rashi Prediction 2025 : ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology), ಪ್ರಕಾರ ಮಿಥುನ ರಾಶಿ, ಧನು ರಾಶಿ ಸೇರಿದಂತೆ ಈ ರಾಶಿಯವರಿಗೆ 2025ರಲ್ಲಿ ಎದುರಾಗಲಿದೆ ಕಂಟಕ ಎದುರಾಗಲಿದೆ.
ಮಿಥುನ ರಾಶಿ (Rashi Prediction 2025 Gemini)

ಗುರುವಿನ ವೇಗದ ಚಲನೆಯಿಂದಾಗಿ ಹೊಸ ವರ್ಷದಲ್ಲಿ ಮಿಥುನ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಎದುರಾಗಲಿದೆ. ನೀವು ತೆಗೆದುಕೊಳ್ಳುವಂತಹ ತಪ್ಪಾದ ನಿರ್ಧಾರಗಳು ಮತ್ತು ಅತಿಯಾದ ಆತ್ಮವಿಶ್ವಾಸವು ನಷ್ಟದಾಯಕವಾಗಿರಲಿದೆ. ವಿವಾದಗಳಿಂದ ದೂರ ಇರಿ ಮತ್ತು ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 02 ಜನವರಿ 2025 ಗುರುವಾರ
ಧನು ರಾಶಿ (Rashi Prediction 2025 Sagittarius)

ಹೊಸ ವರ್ಷದಲ್ಲಿ ಧನು ರಾಶಿಯವರು ತಾವು ಕೆಲಸ ಮಾಡುವಂತಹ ಸ್ಥಳದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಭಿನ್ನಾಭಿಪ್ರಾಯಗಳು ಹೆಚ್ಚು ಕಾಡಲಿವೆ. ಹಣ ಹೂಡಿಕೆ ಮಾಡುವ ಯೋಚನೆ ಇದ್ದರೆ ಎಕ್ಸ್ ಪರ್ಟ್ ಗಳ ಬಳಿ ಸಲಹೆಯನ್ನು ಪಡೆದುಕೊ೦ಡು ಹಣವನ್ನು ಹೂಡಿಕೆ ಮಾಡಿ ಇಲ್ಲವಾದಲ್ಲಿ ನಷ್ಟ ಎದುರಿಸಬೇಕಾಗುತ್ತದೆ.
ಮಕರ ರಾಶಿ (Rashi Prediction 2025 Capricorn)

ಮಕರ ರಾಶಿಯವರು ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷವನ್ನು ತೋರಬಾರದು. ಅನೈತಿಕ ಕೆಲಸಗಳಿಂದ ದೂರ ಇರಬೇಕು. ವ್ಯಾಪಾರಸ್ಥರು ಹಣ ಹೂಡಿಕೆಯನ್ನು ಕೊಂಚ ಕಡಿಮೆ ಮಾಡಿ. ನೀವು ಹೊಸ ಕೆಲಸ ಹುಡುಕುತ್ತಿದ್ದರೆ ಅಥವಾ ಕೆಲಸ ಬದಲಾಯಿಸುವಂತಹ ಯೋಜನೆಯಲ್ಲಿದ್ದರೆ ಇದು ಅದಕ್ಕೆ ಸೂಕ್ತ ಸಮಯವಾಗಿರುವುದಿಲ್ಲ.
ಇದನ್ನೂ ಓದಿ: Rashi bhavishya 2025 | 2025ರಲ್ಲಿ ಈ ರಾಶಿಗಳಿಗೆ ಇದೆ ಮದುವೆ ಯೋಗ
ಮೀನ ರಾಶಿ (Rashi Prediction 2025 Pisces)

ಗುರುವಿನ ಚಲನೆ ಮೀನ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆಯನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ಪ್ರಾಪರ್ಟಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವ೦ತಹ ವಿಚಾರದಲ್ಲಿ ಜಾಗೃತರಾಗಿರಿ. ಉದ್ಯೋಗದ ಒತ್ತಡದಿಂದಾಗಿ ಮಾನಸಿಕ ಪರಿಸ್ಥಿತಿ ಏರುಪೇರು ಆಗಲಿದೆ. ಹೊಸ ವರ್ಷದಲ್ಲಿ ಸಾಧಿಸಬೇಕು ಎ೦ದುಕೊ೦ಡ ಗುರಿ ಸಾಧಿಸಲು ಸಾಕಷ್ಟು ಅಡೆತಡೆಗಳು ಕಾಡಲಿವೆ.




