ನವದೆಹಲಿ : ಕೇಂದ್ರ ಗೃಹ ಸಚಿವಾಲಯ ನವೆಂಬರ್ ಅಂತ್ಯದವರೆಗೆ ಅನ್ ಲಾಕ್ 5.0 ವಿಸ್ತರಣೆ ಮಾಡಿದ್ದು, ನವೆಂಬರ್ 30 ರವರೆಗೆ ಕಡ್ಡಾಯವಾಗಿ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಹಿಂದೆ ಸೆಪ್ಟೆಂಬರ್ 30ರಂದು ಹೊರಡಿಸಲಾದ ಮಾರ್ಗಸೂಚಿ ಅಕ್ಟೋಬರ್ 31ರವರೆಗೆ ಜಾರಿಯಲ್ಲಿತ್ತು. ಈ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸುವಂತೆ ಇಂದು ಗೃಹ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ.
ಇದು ಹಬ್ಬದ ಕಾಲವಾಗಿರುವುದರಿಂದ ಹೆಚ್ಚಿನ ಸಡಿಲಿಕೆ ನೀಡದಿರಲು ನಿರ್ಧರಿಸಿದೆ ತಿಳಿದು ಬಂದಿದ್ದು, ಕೇಂದ್ರ ಗೃಹ ಸಚಿವಾಲಯ ಮಂಗಳವಾರ (ಅಕ್ಟೋಬರ್ 27) ನೀಡಿದ ಹೇಳಿಕೆಯಲ್ಲಿ ಅಕ್ಟೋಬರ್ಗೆ ಘೋಷಿಸಲಾದ ನಿಯಮಗಳು ನವೆಂಬರ್ ಅಂತ್ಯದವರೆಗೆ ಜಾರಿಯಲ್ಲಿರುತ್ತವೆ ಎಂದು ತಿಳಿಸಿದೆ. ಜನರನ್ನು ಒಟ್ಟುಗೂಡಿಸಲು ಸಂಬಂಧಿಸಿದ ಕೆಲವು ಚಟುವಟಿಕೆಗಳನ್ನು ಕೆಲವು ನಿರ್ಬಂಧಗಳು ಮತ್ತು ಪ್ರಮಾಣಿತ ನಿಯಮಗಳೊಂದಿಗೆ ಮಾತ್ರ ಅನುಮತಿಸಲಾಗಿದೆ ಎಂದು ತಿಳಿಸಿದೆ.
ಈ ಕಾರಣಕ್ಕಾಗಿ, ರೆಸ್ಟೋರೆಂಟ್ಗಳು, ಹೋಟೆಲ್ಗಳು, ಮೆಟ್ರೋ ರೈಲುಗಳು, ಶಾಪಿಂಗ್ ಮಾಲ್ಗಳು, ಧಾರ್ಮಿಕ ಕೇಂದ್ರಗಳು, ಯೋಗ ತರಬೇತಿ ಕೇಂದ್ರಗಳು, ಜಿಮ್ಗಳು, ಉದ್ಯಾನವನಗಳು ಮತ್ತು ಸಿನೆಮಾ ಹಾಲ್ಗಳನ್ನು ತೆರೆಯಲಾಗಿದೆ.




