HD Kumaraswamy birthday : ಮಾಜಿ ಮುಖ್ಯಮಂತ್ರಿ, ಚಲನಚಿತ್ರ ನಿರ್ಮಾಪಕ ಹಾಗು ಹಾಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (HD Kumaraswamy) (ಜನನ 16 ಡಿಸೆಂಬರ್ 1959) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
HD Kumaraswamy birthday : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜೀವನ
ಮಾಜಿ ಮುಖ್ಯಮ೦ತ್ರಿ & ಚಿತ್ರ ನಿರ್ಮಾಪಕ ಹೆಚ್.ಡಿ.ಕುಮಾರಸ್ವಾಮಿ ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು.ನ್ಯಾಷನಲ್ ಕಾಲೇಜ್ ನಲ್ಲಿ ಬಿಎಸ್ಸಿ ಪದವಿಯನ್ನು ಪಡೆದುಕೊಂಡಿರುವ ಇವರು ಮಾರ್ಚ್ 13 1986 ರಲ್ಲಿ ಅನಿತಾ ಅವರನ್ನು ಮದುವೆಯಾದರು. ಚಿತ್ರನಟ ನಿಖಿಲ್ ಗೌಡ ಇವರ ಪುತ್ರ. ಇನ್ನು, ಹೆಚ್.ಡಿ.ಕುಮಾರಸ್ವಾಮಿ ತಂದೆ ಹೆಚ್ ಡಿ ದೇವೇಗೌಡ ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪ್ರಧಾನ ಮಂತ್ರಿಗಳಾಗಿದ್ದಾರೆ.
ಇದನ್ನೂ ಓದಿ: ನಾನು ಹಣಕ್ಕಾಗಿ ಚೆಸ್ ಆಡುವುದಿಲ್ಲ: ವಿಶ್ವ ಚಾಂಪಿಯನ್ ಗುಕೇಶ್ ಹೊಸ ಕೋಟ್ಯಧಿಪತಿ
ಹೆಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ಪ್ರವೇಶ (HD Kumaraswamy Political Entry)
1996 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಕುಮಾರಸ್ವಾಮಿ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದರು. 1998ರ ಚುನಾವಣೆಯಲ್ಲಿ ಸೋತ ನಂತರ 2004 ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2006 ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿ ಮೈತ್ರಿ ಸರ್ಕಾರದ ಮುಖ್ಯಮ೦ತ್ರಿಯಾದರು.
ಮೇ 23, 2018 ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್‌ಡಿಕೆ ಮುಖ್ಯಮ೦ತ್ರಿಯಾದರು. 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದರಿಂದ ಬಹುಮತ ಕಳೆದುಕೊಂಡು ಹೆಚ್‌ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾಯಿತು.
ಇದನ್ನೂ ಓದಿ: Agricultural loan | RBIನಿಂದ ಭರ್ಜರಿ ಗುಡ್ ನ್ಯೂಸ್; ₹2 ಲಕ್ಷ ಕೃಷಿ ಸಾಲ
ಹೆಚ್ ಡಿ ಕುಮಾರಸ್ವಾಮಿ ಅವರ ಸಾಧನೆಗಳು (HD Kumaraswamy Achievements)
- 2004, 2008, 2013 & 2018 ថ ថ ವಿಧಾನ ಸಭಾ ಕ್ಷೇತ್ರದಿಂದ ಶಾಸಕರು,
- ಎರಡು ಅವಧಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕಾರ್ಯ.
- ರೈತರ ಸಾಲಮನ್ನಾ ಘೋಷಣೆ.
- ಜನತಾ ದರ್ಶನ, ಗ್ರಾಮ ವಾಸ್ತವ್ಯ ಜನಪ್ರಿಯ ಕಾರ್ಯಕ್ರಮಗಳು.
- ಲಾಟರಿ ನಿಷೇಧ.
ಹೆಚ್ ಡಿ ಕುಮಾರಸ್ವಾಮಿ ಅವರ ಆಸಕ್ತಿದಾಯಕ ಸಂಗತಿಗಳು
ಕುಮಾರಸ್ವಾಮಿ ನಿರ್ಮಾಣದ ಚಂದ್ರ ಚಕೋರಿ 365 ದಿನಗಳ ಕಾಲ ಪ್ರದರ್ಶನಗೊಂಡು ಸೂಪರ್ ಹಿಟ್ ಆಗಿತ್ತು. ಸೆಪ್ಟೆಂಬರ್ 2007 ರಲ್ಲಿ ಕುಮಾರಸ್ವಾಮಿ ತಮ್ಮದೇ ಆದ ‘ಕಸ್ತೂರಿ’ ಕನ್ನಡ ವಾಹಿನಿ ಆರಂಭಿಸಿದ್ದರು. ಕಾರುಗಳ ಬಗ್ಗೆ ಒಲವು ಹೊಂದಿರುವ ಕುಮಾರಸ್ವಾಮಿಯವರ ಬಳಿ ಲ್ಯಾಂಬೊರ್ಗಿನಿ, ಪೋರ್ಶ, ಹಮ್ಮರ್ & ರೇಂಜ್ ರೋವರ್ ಮುಂತಾದ ದುಬಾರಿ ಕಾರುಗಳಿವೆ.