Agricultural loan : ರೈತರಿಗೆ RBI ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರೈತರಿಗೆ ಅಡಮಾನ ರಹಿತ ಸಾಲದ ಮೊತ್ತವನ್ನು RBI 2 ಲಕ್ಷಕ್ಕೆ ರೂಪಾಯಿಗಳಿಗೆ ಹೆಚ್ಚಿಸಿದ್ದು, ಇದು ಹೊಸ ವರ್ಷದ ಜನವರಿ 1ರಿಂದಲೇ ಜಾರಿಗೆ ಬರಲಿದೆ.
ಹೌದು,ಈ ಮೊದಲು ಅಡಮಾನವಿಲ್ಲದೆ ₹1.6 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ಇದೀಗ RBIನ ಈ ಹೊಸ ನಿರ್ದೇಶನದ ಮೂಲಕ, ರೈತರು ಪಡೆಯುವ 2 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಅಡಮಾನ ಅಥವಾ ಇತರ ಅಗತ್ಯ ದಾಖಲೆಗಳ ಮಿತಿಯನ್ನು ತೆಗೆದುಹಾಕಲು ಬ್ಯಾಂಕ್ಗಳಿಗೆ ಸೂಚಿಸಿದೆ. ಇದರಿಂದಾಗಿ ಸಣ್ಣ ಹಾಗೂ ಅತಿ ಸಣ್ಣ ಸೇರಿ 86% ರೈತರಿಗೆ ನೆರವಾಗಲಿದೆ ಎಂದು ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.