PM: ಸಮಸ್ಯೆಗಳ ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಆದ್ಯತೆ ನೀಡಲು ಪ್ರಧಾನಿ ಕರೆ

ಬೆಂಗಳೂರು: ಪ್ರಸ್ತುತ ಭಾರತ ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಯುವ ಸಮುದಾಯ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ನಗರದ ನ್ಯೂ…

ಬೆಂಗಳೂರು: ಪ್ರಸ್ತುತ ಭಾರತ ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಯುವ ಸಮುದಾಯ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ನಗರದ ನ್ಯೂ ಹೊರೈಝನ್ ಕಾಲೇಜ್‌ ಆಫ್‌ ಇಂಜಿನೀಯರಿಂಗ್‌ ನಲ್ಲಿ ಬದಲಾವಣೆಗಾಗಿ ಕೋಡಿಂಗ್‌ ವಿಷಯದ 11ನೇ ಆವೃತ್ತಿಯ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ನ ಅಡಿಯಲ್ಲಿ ನಡೆದ 36 ಗಂಟೆಗಳ ಸಾಫ್ಟ್‌ವೇರ್‌ ಮ್ಯಾರಥಾನ್‌ ನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಹ್ಯಾಕಥಾನ್‌ನಲ್ಲಿ ವರ್ಚುಯಲ್‌ ಆಗಿ ಪ್ರಧಾನಿ ನರೇಂದ್ರ ಮೋದಿ ಯವರು ಬೆಂಗಳೂರು ನಗರದ ಹೊರೈಝನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಗಂಗಾ ನದಿ ಶುದ್ಧೀಕರಣಕ್ಕಾಗಿ ಪ್ರಾರಂಭಿಸಿರುವ ನಮಾಮಿ ಗಂಗೆ ಕುರಿತು ಸಂವಾದ ನಡೆಸಿದರು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಪ್ರಧಾನಿಯವರೊಂದಿಗೆ ಸಂವಾದಲ್ಲಿ ಭಾಗಿಯಾದರು.

Vijayaprabha Mobile App free

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಮುಂಬರುವ ಕುಂಭಮೇಳದಲ್ಲಿ ಕೋಟ್ಯಂತರ ಜನರನ್ನು ಸ್ವಾಗತಿಸಲು ವ್ಯಾಪಕ ಸಿದ್ಧತೆ ಕೈಗೊಳ್ಳಲಾಗುತ್ತಿದೆ.   ಸಾಮಾಜಿಕ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸರ್ಕಾರದ ಶೈಕ್ಷಣಿಕ ಮತ್ತು ವೃತ್ತಿ ಉಪಕ್ರಮಗಳಿಗೆ ಆದ್ಯತೆ ನೀಡುವ ಮೂಲಕ 2047 ರ ವೇಳೆಗೆ ವಿಕಸಿತ ಭಾರತ ನಿರ್ಮಾಣವನ್ನು ಸಾಕಾರಗೊಳಿಸುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ಬಳಿಕ ಜೈಪುರದ ಎಲ್ಎನ್ಎಂ ಮಾಹಿತಿ ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿ ದೇವ್ ಸೋನಿ ಮಾತನಾಡಿ, ಗಂಗಾನದಿ, ಜಲಾನಯದ ಪ್ರದೇಶ, ನಮಾಮಿ ಗಂಗೆ, ನೀರು ಪೂರೈಕೆ ಇನ್ನಿತರ ವಿಚಾರಗಳ ಕುರಿತು ಪ್ರಧಾನಿಯವರು ನೀಡಿದ ಮಾಹಿತಿ ಮಹತ್ವದ್ದಾಗಿತ್ತು. ಹ್ಯಾಕಥಾನ್ ನಲ್ಲಿ ಈ ವಿಚಾರದ ಕುರಿತು ಹೊಸ ನಾವಿನ್ಯತೆ ಮಂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಎಲ್ಎನ್ಎಂ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ತನ್ವಿ ಬನ್ಸಿರ್ ಮಾತನಾಡಿ, ನಮಾಮಿ ಗಂಗೆ ಯೋಜನೆಗೆ ಪೂರಕವಾಗಿ ಗಂಗಾನದಿ ಮಾಲಿನ್ಯ ತಡೆ ಮತ್ತು ನದಿ ಪುನರಜ್ಜೀವನಕ್ಕಾಗಿ ಪರಿಕಲ್ಪನೆ ಸಿದ್ದಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಡಿ ಸತತ ಎರಡನೇ ವರ್ಷ ನ್ಯೂ ಹೊರೈಝನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸಂಸ್ಥೆಯನ್ನು ನೋಡೆಲ್ ಏಜನ್ಸಿಯಾಗಿ ಆಯ್ಕೆ ಮಾಡಲಾಗಿತ್ತು. 11 ರಾಜ್ಯಗಳ 34 ಉನ್ನತ ಶಿಕ್ಷಣ ಸಂಸ್ಥೆಗಳ ತಂಡಗಳು ಹ್ಯಾಕಥಾನಲ್ಲಿ ಭಾಗವಹಿಸಿದ್ದು, ಮ್ಯಾಥ್ ವರ್ಕ್ಸ್, ಕೇಂದ್ರೀಯ ಜಲಮಂಡಳಿ, ಜಲಶಕ್ತಿ ಸಚಿವಾಲಯದ ಗಂಗಾನದಿ ಶುದ್ದೀಕರಣ ಕುರಿತ ರಾಷ್ಟ್ರೀಯ ಅಭಿಯಾನದ ವಿಷಯಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. 

ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ಎಐಸಿಟಿಇ ಉಪಾಧ್ಯಕ್ಷ ಡಾ. ಅಭಯ್ ಜೇರೆ ಅವರ ಸಮ್ಮುಖದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ 36 ಗಂಟೆಗಳ ಕೋಡಿಂಗ್ ಹ್ಯಾಕಥಾನ್ ಗೆ ಚಾಲನೆ ನೀಡಿದರು.

ನಗರದ ನ್ಯೂ ಹೊರೈಝನ್ ಕಾಲೇಜ್‌ ಆಫ್‌ ಇಂಜಿನೀಯರಿಂಗ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ cadence design systems ಸಾಫ್ಟ್‌ವೇರ್  ಪ್ರೋಗ್ರಾಮ್‌ ಡೈರೆಕ್ಟರ್ ಪ್ರಪೂಲ್ಲಾ ಗಾಲ್ಫಾಡೆ, ಕೇಂದ್ರ ಅಂತರ್ಜಲ ಇಲಾಖೆಯ ಶೈಲೇಂದ್ರ ನಾಥ್‌, ಎನ್‌ಹೆಚ್‌ಸಿಇ ಪ್ರಾಂಶುಪಾಲರಾದ ಡಾ. ಮಂಜುನಾಥ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply