ರಾಜ್ಯದಲ್ಲಿ ಮತ್ತೆ ಗಗನಕ್ಕೇರಿದ ಈರುಳ್ಳಿ ದರ; ಗ್ರಾಹಕರ ಕಣ್ಣಲ್ಲಿ ನೀರು!

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಅವಾಂತರ ಉಂಟಾಗಿದ್ದು, ನೆರೆಯಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದು, ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಮಳೆ, ರೋಗ ಕಾರಣ ರೈತರು ಬೆಳೆದಿದ್ದ ಅಪಾರ…

Onoin vijayaprabha news

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಅವಾಂತರ ಉಂಟಾಗಿದ್ದು, ನೆರೆಯಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದು, ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಮಳೆ, ರೋಗ ಕಾರಣ ರೈತರು ಬೆಳೆದಿದ್ದ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದೆ.

ಇನ್ನು ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ವಿಜಯಪುರ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿಯಾಗಿದ್ದು,ಮಾರುಕಟ್ಟೆಗೆ ದಾಸ್ತಾನು ಆಗುತ್ತಿದ್ದ ಈರುಳ್ಳಿ ದಿಡೀರ್ ನಿಂತಿದೆ. ಈ ಕಾರಣದಿಂದ ರಾಜ್ಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಒಂದು ಕೆ.ಜಿ ಈರುಳ್ಳಿ ₹80 ರಿಂದ ₹100ರ ಗಡಿ ದಾಟಿದೆ. ಈಗಾಗಲೇ ಕರೋನ ಆಘಾತದಿಂದ ಸುಧಾರಿಸಿಕೊಳ್ಳುತ್ತಿರುವ ಜನರಿಗೆ ಈರುಳ್ಳಿ ಬೆಲೆ ಕಣ್ಣಲ್ಲಿ ನೀರು ತರಿಸುತ್ತಿರುವುದು ಸುಳ್ಳಲ್ಲ.

ಇನ್ನು ಮಹಾರಾಷ್ಟ್ರದಲ್ಲೂ ಸಹ ಮಳೆಯಿಂದ ಈರುಳ್ಳಿ ದಾಸ್ತಾನಿಗೆ ಬ್ರೇಕ್ ಬಿದ್ದಿದ್ದು, ಮುಂಬೈ , ಚೆನ್ನೈ, ಪೂನದಲ್ಲೂ ಸಹ ಈರುಳ್ಳಿ ನೂರರ ಗಡಿ ದಾಟಿದೆ

Vijayaprabha Mobile App free

ದಾವಣಗೆರೆ: ಜಿಲ್ಲೆಯಲ್ಲಿ 100ರ ಗಡಿ ದಾಟಿದ ಈರುಳ್ಳಿ ದರ..!

ದಾವಣಗೆರೆ ಜಿಲ್ಲೆಯಲ್ಲಿ ಸಹ ಮಳೆ, ರೋಗ ಕಾರಣ ಈರುಳ್ಳಿ ನಾಶವಾಗಿದ್ದು, ರೈತ, ಗ್ರಾಹಕರ ಕಣ್ಣಲ್ಲಿ ನೀರುಬರಿಸುತ್ತಿದೆ. ಆದರೆ ಮಧ್ಯವರ್ತಿಗಳ ಮುಖದಲ್ಲಿ ಮಾತ್ರ ಈರುಳ್ಳಿ ಮಂದಹಾಸ ಮೂಡಿಸಿದೆ. ಒಂದು ಕೆ.ಜಿ ಈರುಳ್ಳಿ ಬೆಲೆ ₹80 ರಿಂದ ₹100 ರೂಪಾಯಿಗಳ ಗಡಿ ದಾಟಿದೆ. ಜಿಲ್ಲೆಯ ಜಗಳೂರು, ನ್ಯಾಮತಿ ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ, ಇಳುವರಿ ಕುಸಿತ ರೈತರಿಗೆ ಹೊಡೆತ ನೀಡಿದೆ.

ಇದನ್ನು ಓದಿ: ‘ಭಾಗ್ಯಲಕ್ಷ್ಮಿ ಯೋಜನೆ’ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.