Cyclone Fengal : ಫೆಂಗಲ್ ಚಂಡಮಾರುತದ ಎಫೆಕ್ಟ್ ಬೆಂಗಳೂರಿಗೂ ತಟ್ಟಿದ್ದು, ನಿನ್ನೆ ರಾತ್ರಿಯಿಂದಲೇ ಮಳೆ ಬರುತ್ತಿದೆ.
ಹೌದು, ಒಂದೆಡೆ ಮೈಕೊರೆಯುವ ಚಳಿ. ಜೊತೆಗೆ ತಣ್ಣನೆಯ ಗಾಳಿ. ಅಲ್ಲದೆ ತುಂತುರು ಮಳೆ ಬೇರೆ. ಹೀಗಾಗಿ ಮನೆಯಿಂದ ಹೊರ ಬರಲು ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ. ಇಂದು ಭಾನುವಾರವಾಗಿದ್ದರಿಂದ ಜನರು ಬೆಚ್ಚಗೆ ಮನೆಯಲ್ಲೇ ಇದ್ದಾರೆ.
ಇನ್ನು, ಕಾರ್ಪೊರೇಷನ್ ಸರ್ಕಲ್, ಲಾಲ್‌ಬಾಗ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ನಾಗರಬಾವಿ, ವಿಜಯನಗರ, ಜಯನಗರ ಸೇರಿ ಹಲವೆಡೆ ನಿನ್ನೆಯಿಂದಲೇ ಮಳೆಯಾಗಿದೆ.
Cyclone Fengal : ಇಂದು ಭಾರೀ ಮಳೆ?.. ಅಧಿಕಾರಿಗಳ ರಜೆ ರದ್ದು!
ತಮಿಳುನಾಡಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸಿದ್ದರಿಂದ, ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಇಂದು ಭಾರೀ ಮಳೆಯ ಮುನ್ಸೂಚನೆ ಸಿಕ್ಕಿರುವುದರಿಂದ ಬಿಬಿಎಂಪಿ ಫುಲ್ ಅಲರ್ಟ್ ಆಗಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಯ ಇಂದಿನ ರಜೆ ರದ್ದು ಮಾಡಲಾಗಿದೆ. ಎಂದಿನಂತೆ ಕೆಲಸ ಮಾಡಿ. ಕೇಂದ್ರ ಸ್ಥಾನದಲ್ಲೇ ಇರಿ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ. ನಿನ್ನೆಯೇ ಅವರು ಸಂಬಧಪಟ್ಟ ಅಧಿಕಾರಿಗಳ ಜೊತೆ ಉನ್ನತ ಸಭೆ ನಡೆಸಿದ್ದಾರೆ.
Cyclone Fengal : ಫೆಂಗಲ್ ಚಂಡಮಾರುತದ ಆರ್ಭಟಕ್ಕೆ 4 ರಾಜ್ಯಗಳು ತತ್ತರ
ಶ್ರೀಲಂಕಾದಲ್ಲಿ ಅವಾಂತರ ಸೃಷ್ಟಿಸಿದ ಫೆಂಗಲ್ ಚಂಡಮಾರುತ ಭಾರತಕ್ಕೆ ಅಪ್ಪಳಿಸಿದ್ದು, ಸೈಕ್ಲೋಲ್ ಆರ್ಭಟಕ್ಕೆ ಪುದುಚೇರಿ ಮತ್ತು ಚೆನ್ನೈ ತತ್ತರಿಸಿ ಹೋಗಿದ್ದು, ತಮಿಳುನಾಡಿನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ತಮಿಳುನಾಡು, ಪುದುಚೇರಿ, ಕೇರಳ ಮತ್ತು ಆಂಧ್ರದ ದಕ್ಷಿಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಡಲು ರೌದ್ರಾವತಾರ ತಾಳಿದ್ದು, ದೈತ್ಯ ಅಲೆಗಳು ಅಪ್ಪಳಿಸುತ್ತಿವೆ. ಬೀಚ್‌ಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ವಿಮಾನ ನಿಲ್ದಾಣವನ್ನು ಬೆಳಗ್ಗಿನ ಜಾವದವರೆಗೂ ಮುಚ್ಚಲಾಗಿತ್ತು.