Ramya birthday : ದಕ್ಷಿಣ ಭಾರತ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ನಟಿ ರಮ್ಯಾ ಇಂದು 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
2003ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ‘ಅಭಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಮೊದಲ ಚಿತ್ರದಲ್ಲಿಯೇ ಖ್ಯಾತಿ ಪಡೆದರು. ನಂತರ ಎಕ್ಸ್ಕ್ಯೂಸ್ಮಿ ಚಿತ್ರದಲ್ಲೂ ಗೆದ್ದ ರಮ್ಯಾ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲೂ ನಟಿಸಿದರು.
ಇದನ್ನೂ ಓದಿ : Actor Dhanush Aishwarya divorce | 20 ವರ್ಷದ ದಾಂಪತ್ಯಕ್ಕೆ ಅಂತ್ಯ ಬರೆದ ಧನುಶ್-ಐಶ್ವರ್ಯಾ
Ramya birthday : ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕುರಿತು ಇಂಟರೆಸ್ಟಿಂಗ್ ಸಂಗತಿಗಳು
ನಟಿ ರಮ್ಯಾ ಅವರು ಆರ್.ಟಿ ನಾರಾಯಣ್ & ರಂಜಿತ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ಮೊದಲ ಹೆಸರು ದಿವ್ಯ ಸ್ಪಂದನ. ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರು ದಿವ್ಯ ಸ್ಪಂದನ ಅವರಿಗೆ ಅಭಿ ಚಿತ್ರದಲ್ಲಿ ಅವಕಾಶ ನೀಡಿ, ಅವರ ಹೆಸರನ್ನು ರಮ್ಯಾ ಎಂದು ಬದಲಾಯಿಸಿದರು.
Ramya birthday : ಅಭಿ ಸಿನಿಮಾ ಮೂಲಕ ರಮ್ಯಾ ಚಿತ್ರರಂಗ ಪ್ರವೇಶ
2003 ರಲ್ಲಿ ತೆರೆಕಂಡ ಅಭಿ ಸಿನಿಮಾ ಮೂಲಕ ರಮ್ಯಾ ಚಿತ್ರರಂಗ ಪ್ರವೇಶಿಸಿದರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್- ರಮ್ಯಾ ನಟನೆಯ ಈ ಚಿತ್ರ 150 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ಅವರು ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಮೂಲಕ ಪುನೀತ್- ರಮ್ಯಾ ಜೋಡಿ ಹಿಟ್ ಆಗಿತ್ತು..
ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ರಮ್ಯಾ
ನಟಿ ರಮ್ಯಾ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆಗೆದ್ದರು. ರಮ್ಯಾ ಕೇವಲ ಗ್ಲಾಮರಸ್ ಗೊಂಬೆಯಾಗಿರಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು. ಆಕಾಶ್, ಎಕ್ಸ್ ಕ್ಯೂಸ್ ಮಿ, ಅಮೃತಧಾರೆ ಗೌರಮ್ಮ, ಜೊತೆ ಜೊತೆಯಲಿ, ಸಂಜು ವೆಡ್ಸ್ ಗೀತಾ, ಮುಸ್ಸಂಜೆ ಮಾತು, ಸೇವಂತಿ ಸೇವಂತಿ, ಅರಸು ರಮ್ಯಾ ನಟನೆಯ ಹಿಟ್ ಸಿನಿಮಾಗಳು.
ಇದನ್ನೂ ಓದಿ: ಶೀಘ್ರವೇ ಒಟಿಟಿಗೆ Bhairathi Ranagal; ಯಾವಾಗ ಗೊತ್ತಾ?
ಬೇರೆ ಭಾಷೆಯಲ್ಲಿ ನಟಸಿರುವ ರಮ್ಯಾ
ನಟಿ ರಮ್ಯಾ ತಮಿಳಿನಲ್ಲಿ ಕುತ್ತು ಮತ್ತು ಗಿರಿ ಎಂಬ ಎರಡು ಹಿಟ್ ಸಿನಿಮಾಗಳನ್ನು ಮಾಡಿದ್ದು, ನಂತರದ ದಿನಗಳಲ್ಲಿ ಧನುಷ್ ಜೊತೆ ಪೊಲ್ಲಾದವನ್ ಹಾಗೂ ಸೂರ್ಯ ಜೊತೆ ವಾರಣಂ ಆಯಿರಂ ಎ೦ಬ ಹಿಟ್ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಅಭಿಮನ್ಯು ಎ೦ಬ ಸಿನಿಮಾ ಮಾಡಿದ್ದಾರೆ.
Ramya birthday : ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ರಮ್ಯಾ
2012 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ರಮ್ಯಾ, 2013 ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2014 ರಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಅವರಿಗೆ ಒಲಿಯಲಿಲ್ಲ. 2017 ರಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಷ್ಟ್ರೀಯ ಮುಖ್ಯಸ್ಥರಾದರು. 2018ರಲ್ಲಿ ಅವರು ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದರು.
ಶ್ವಾನ ಪ್ರಿಯೆ ಆಗಿರುವ ರಮ್ಯಾ
ಮೋಹಕತಾರೆ ರಮ್ಯಾ ಶ್ವಾನ ಪ್ರಿಯೆ ಅನ್ನೋದು ಗೊತ್ತಿರುವ ವಿಷಯವೇ. ಆಗಾಗ ಇನ್ಸ್ಟಾಗ್ರಾಂ ತಮ್ಮ ಪ್ರೀತಿಯ ನಾಯಿಯೊ೦ದಿಗೆ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಬೀದಿ ನಾಯಿಯನ್ನು ಕಾರಣವಿಲ್ಲದೇ ಹತ್ಯೆ ಮಾಡಲಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಮ್ಯಾ ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು.
ಇದನ್ನೂ ಓದಿ: ದೀಪಾವಳಿಗೆ ಬಿಡುಗಡೆಯಾದ ಚಿತ್ರಗಳು ಈ ವಾರಾಂತ್ಯ OTTನಲ್ಲಿ!