ತುಮಕೂರು: ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಾತನಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ಇತಿಹಾದಲ್ಲಿ ಯಾವುದು ಸುಲಭವಾಗಿ ಸಿಕ್ಕಿಲ್ಲ ದೇಶದಲ್ಲಿ ಬಿಜೆಪಿ ೩೦೩ ಸಂಸದರನ್ನು ಹೊಂದಿದೆ ಮನೆಯಲ್ಲಿ ಸುಮ್ಮನೆ ಮಲಗಿದ್ರಿಂದ ಬಂದಿರುವುದಲ್ಲ, ಪ್ರತಿಯೊಂದನ್ನು ಸಂಘರ್ಷದ ಮೂಲಕವೇ ಗೆದ್ದಿದ್ದೇವೆ ಶಿರಾ ಕ್ಷೇತ್ರದಲ್ಲಿ ಕೂಡ ಸಂಘರ್ಷದ ಯೋಜನೆ ಜಾರಿಯಲ್ಲಿದೆ ಎಂದು ತುಮಕೂರು ಜಿಲ್ಲೆ ಶಿರಾದಲ್ಲಿ ಹೇಳಿಕೆ ನೀಡಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದ ಬಳಿಕ ಉದ್ಯೋಗ ಸೃಷ್ಟಿಯಾಗಿದ್ದು, 60 ವರ್ಷದಲ್ಲಿ ಆಗಿರದಷ್ಟು ಉದ್ಯೋಗ ಸೃಷ್ಟಿಯಾಗಿದೆ. ಅಪ್ಪ ತಾತನ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದರು. ಹೀಗೆ ರಾಜಕೀಯ ಮಾಡುತ್ತಿದ್ದವರು ನಿರುದ್ಯೋಗಿಗಳಾಗಿದ್ದಾರೆ ಎಂದು ಶಿರಾದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಇಂದು ಕೇಂದ್ರ ಗೃಹಮಂತ್ರಿ, ಬಿಜೆಪಿಯ ಚಾಣಕ್ಯ ಅಮಿತ್ ಷಾ ಜನ್ಮದಿನ; ಗಣ್ಯರ ಶುಭಾಶಯ