Menstrual leave : ಮಹಿಳಾ ಕಾರ್ಮಿಕರಿಗೆ ಅವರ ಋತುಚಕ್ರದ ಸಮಯದಲ್ಲಿ ಬಳಸಿಕೊಳ್ಳಲು ವಾರ್ಷಿಕ 6 ದಿನಗಳ ವೇತನ ಸಹಿತ ಋತುಸ್ರಾವ ರಜೆ ಮಂಜೂರು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆ, ಕೈಗಾರಿಕೆ, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪೆನಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರ ಕಾರ್ಯದಕ್ಷತೆ & ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೈರ್ಯ ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಶೀಘ್ರವೇ ಒಟಿಟಿಗೆ Bhairathi Ranagal; ಯಾವಾಗ ಗೊತ್ತಾ?
Menstrual leave : ಆಕ್ಷೇಪಣೆ ಸಲ್ಲಿಸಲು ಅವಕಾಶ
ರಾಜ್ಯದ ಮಹಿಳಾ ಕಾರ್ಮಿಕರಿಗೆ ಅವರ ಋತುಚಕ್ರದ ಸಮಯದಲ್ಲಿ ಬಳಸಿಕೊಳ್ಳಲು ವಾರ್ಷಿಕ 6 ದಿನಗಳ ವೇತನ ಸಹಿತ ಋತುಸ್ರಾವ ರಜೆ ಮಂಜೂರು ಮಾಡುವ ನೀತಿ ಕುರಿತು ಸಲಹೆ/ಸೂಚನೆ/ಆಕ್ಷೇಪಣೆ/ಅಭಿಪ್ರಾಯ ಸಲ್ಲಿಸಲು ಇಲಾಖೆ ಅವಕಾಶ ನೀಡಿದೆ.
ಲಗತ್ತಿಸಿರುವ ನಮೂನೆಯನ್ನು ಭರ್ತಿಮಾಡಿ ವೆಬ್‍ಸೈಟ್‍ನಲ್ಲಿ ಅಳವಡಿಸಲಾದ ನಮೂನೆಯನ್ನು dicbangalore@gmail.com ಗೆ 30 ದಿನಗಳೊಳಗೆ ಕಳುಹಿಸಬೇಕೆಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ https://labour.karnataka.gov.in/englishಗೆ ಭೇಟಿ ನೀಡಬಹುದು.
ಇದೇ ವೇಳೆ ಸಮಿತಿಯು ವಿವಿಧ ಹಂತಗಳಲ್ಲಿ ಚರ್ಚಿಸಿ ದುಡಿಯುವ ಮಹಿಳೆಯರಿಗೆ ಅವರ ಋತುಚಕ್ರದ ಕಾಲಕ್ಕೆ ಬಳಸಿಕೊಳ್ಳಲು ವಾರ್ಷಿಕ 6 ರಜೆಗಳನ್ನು ಶಿಫಾರಸ್ಸು ಮಾಡಿದ್ದು, ಈ ನಿಮಿತ್ತ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿರುತ್ತದೆ. ಹಾಗಿದ್ರೆ ಮಹಿಳೆಯರಿಗೆ ಋತುಚಕ್ರದ ರಜೆಗಳು ಸಿಗುತ್ತಾ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: Health insurance | ಆರೋಗ್ಯ ವಿಮೆ ಮಾಡಿಸುವ ಮುನ್ನ ನಿಮಗೆ ಗೊತ್ತಿರಲೇಬೇಕಾದ ವಿಷಯಗಳು