IPL 2025 karnataka players : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ IPL 2025 ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಇದರಲ್ಲಿ ಕರ್ನಾಟಕದ 13 ಆಟಗಾರರು ಸ್ಥಾನ ಪಡೆದಿದ್ದಾರೆ.
ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿನ ಮೂಲಕ 10 ತಂಡಗಳಿಗೆ ಒಟ್ಟು 182 ಆಟಗಾರರು ಆಯ್ಕೆಯಾಗಿದ್ದಾರೆ. 182 ಆಟಗಾರರಲ್ಲಿ ಕರ್ನಾಟಕದ 13 ಪ್ಲೇಯರ್ಸ್ ಇದ್ದಾರೆ. ಮೂವರು ದಿಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರಿದ್ದಾರೆ. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಲಿದ್ದಾರೆ.
ಇದನ್ನೂ ಓದಿ: IPL mega auction 2025 | ಮೆಗಾ ಹರಾಜು ಮುಕ್ತಾಯ; ಎಲ್ಲಾ 10 ಫ್ರಾಂಚೈಸಿಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
IPL 2025 karnataka players : ಅದರಂತೆ ಐಪಿಎಲ್ ಸೀಸನ್-18 ರಲ್ಲಿ ಕಾಣಿಸಿಕೊಳ್ಳಲಿರುವ ಕನ್ನಡಿಗರ ಪಟ್ಟಿ
- ಕೆಎಲ್ ರಾಹುಲ್
- ಪ್ರಸಿದ್ಧ್ ಕೃಷ್ಣ
- ವೈಶಾಕ್ ವಿಜಯಕುಮಾರ್
- ಕರುಣ್ ನಾಯರ್
- ಶ್ರೀಜಿತ್ ಕೃಷ್ಣನ್
- ಶ್ರೇಯಸ್ ಗೋಪಾಲ್
- ಮನೀಶ್ ಪಾಂಡೆ
- ಅಭಿನವ್ ಮನೋಹರ್
- ಮನ್ವಂತ್ ಕುಮಾರ್
- ಮನೋಜ್ ಭಾಂಡಗೆ
- ಲವ್ನೀತ್ ಸಿಸೋಡಿಯಾ
- ಪ್ರವೀಣ್ ದುಬೆ
- ದೇವದತ್ ಪಡಿಕ್ಕಲ್
ಇದನ್ನೂ ಓದಿ: RCB buy Bhuvneshwar Kumar : ಭುವನೇಶ್ವರ್ ಕುಮಾರ್ ಗೆ ಗಾಳ ಹಾಕಿದ RCB…!