IPL mega action 2025 | IPL ಮೆಗಾ ಹರಾಜಿಗೆ ಕ್ಷಣಗಣನೆ; IPL ಹರಾಜಿನಲ್ಲಿ ಆರ್‌ಟಿಎಂ ಅಸ್ತ್ರ

IPL mega action 2025 : ಇಂದಿನಿಂದ 2 ದಿನಗಳ ಕಾಲ ಐಪಿಎಲ್ 2025ರ ಆಟಗಾರರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದ್ದು, IPL ಹರಾಜಿನಲ್ಲಿ ಆರ್‌ಟಿಎಂ ಅಸ್ತ್ರ ಬಳಸಲಾಗುತ್ತದೆ. ಹೌದು, ಇನ್ನೇನು…

IPL Mega Auction

IPL mega action 2025 : ಇಂದಿನಿಂದ 2 ದಿನಗಳ ಕಾಲ ಐಪಿಎಲ್ 2025ರ ಆಟಗಾರರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದ್ದು, IPL ಹರಾಜಿನಲ್ಲಿ ಆರ್‌ಟಿಎಂ ಅಸ್ತ್ರ ಬಳಸಲಾಗುತ್ತದೆ.

ಹೌದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಹರಾಜು ನಡೆಯಲಿದ್ದು, ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟರ್‌ ಜೋಸ್ ಬಟ್ಲರ್ ಅವರ ಸಾಮರ್ಥ್ಯದ ಬಗ್ಗೆ ಎಲ್ಲಾ ತಂಡಗಳಿಗೆ ತಿಳಿದಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಅವರು ಅತ್ಯಂತ ದುಬಾರಿ ವಿದೇಶಿ ಆಟಗಾರರಾಗಬಹುದು. ಅವರ ಮೂಲ ಬೆಲೆ 2 ಕೋಟಿ ರೂ. ವಿದೇಶಿ ಕ್ರಿಕೆಟಿಗರ ಪೈಕಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ಬಿಡ್ಡಿಂಗ್‌ನಲ್ಲಿ ಸೇರ್ಪಡೆಯಾಗಲಿದ್ದಾರೆ.

ಇದನ್ನೂ ಓದಿ: Today IPL mega action 2025 | ಪ್ರತಿ ಫ್ರಾಂಚೈಸಿಗಳ ಬಳಿ ಇರುವ ಹರಾಜು ಮೊತ್ತ ಎಷ್ಟು? ಎಷ್ಟು ಆಟಗಾರರನ್ನು ಖರೀದಿಸಬಹುದು?

Vijayaprabha Mobile App free

IPL mega action 2025 : IPL ಹರಾಜಿನಲ್ಲಿ ಆರ್‌ಟಿಎಂ ಅಸ್ತ್ರ

RTM (ರೈಟ್‌ ಟು ಮ್ಯಾಚ್‌ ಕಾರ್ಡ್‌) ಕಾರ್ಡ್‌ನ್ನು IPL ಹರಾಜಿನಲ್ಲಿ ಬಳಸಲಾಗುತ್ತದೆ. ಇದರಲ್ಲಿ ಆಟಗಾರನ ಹರಾಜು ನಡೆಯುತ್ತದೆ. ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸುತ್ತಾರೆ.

ಕೊನೆಗೆ ಒಂದು ಮೊತ್ತಕ್ಕೆ ಈ ಪ್ಲೇಯರ್‌ ಒಂದು ತಂಡಕ್ಕೆ ಹೋಗುತ್ತಾನೆ ಎಂದು ತಿಳಿದ ಬಳಿಕ, ಆ ಆಟಗಾರ ಈ ಹಿಂದೆ ಪ್ರತಿನಿಧಿಸಿದ ತಂಡವನ್ನು ಹರಾಜು ದಾರ ನೀವು ಬಿಡ್ ಆದಷ್ಟು ಹಣ ನೀಡಿ ಇವರನ್ನು ಖರೀದಿಸುತ್ತೀರಾ ಎಂದು. ಆಗ ಮಾಲೀಕರು ಹೌದು ಎಂದಾದರೆ ಆ ಆಟಗಾರ ಆ ತಂಡ ಪ್ರತಿನಿಧಿಸುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.