D K Shivakumar: ಪ್ರಾಕೃತಿಕ ಸೌಂದರ್ಯ ಹೆಚ್ಚು ಪರಿಚಯವಾಗಬೇಕು: ಡಿ.ಕೆ.ಶಿವಕುಮಾರ್

ಭಟ್ಕಳ: ರಾಜ್ಯದಲ್ಲಿರುವ 360 ಕಿ.ಮೀ ಕರಾವಳಿ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿನ ರೀತಿಯಲ್ಲಿ ಜಗತ್ತಿಗೆ ಪರಿಚಯಿಸುವ ಅಗತ್ಯವಿದ್ದು, ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್…

ಭಟ್ಕಳ: ರಾಜ್ಯದಲ್ಲಿರುವ 360 ಕಿ.ಮೀ ಕರಾವಳಿ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿನ ರೀತಿಯಲ್ಲಿ ಜಗತ್ತಿಗೆ ಪರಿಚಯಿಸುವ ಅಗತ್ಯವಿದ್ದು, ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಅವರು ಶುಕ್ರವಾರ ಮುರುಡೇಶ್ವರದಲ್ಲಿ ಮಾತನಾಡಿ,ಕರಾವಳಿ ಭಾಗದ ಪ್ರದೇಶದಲ್ಲಿರುವ ಮುರುಡೇಶ್ವರ, ಗೋಕರ್ಣ ಬೀಚ್ಗಳು ಗೋವಾ ಬೀಚ್ಗಳಿಂದ ಉತ್ತಮವಾಗಿದೆ ಅವುಗಳನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸಬೇಕಾಗಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ಸಿದ್ಧಪಡಿಸಲು ಸಲಹೆ ಪಡೆಯಲಾಗಿದೆ. ಇಲ್ಲಿ ಬಂಡವಾಳ ಹೂಡಿಕೆದಾರರು ಬರಬೇಕು, ಇಲ್ಲಿನ ಯುವಕರಿಗೆ ಹೆಚ್ಚು ಉದ್ಯೋಗ ಸೃಷ್ಠಿಯಾಗಬೇಕು ಎಂದರು.

ಕರಾವಳಿಯಲ್ಲಿ ದೊಡ್ಡ ಮಟ್ಟದ ಉದ್ಯಮ ಬೆಳೆಸಲು ಯೋಜಿಸಲಾಗಿದೆ. ಇಲ್ಲಿಗೆ ಉತ್ತಮವಾದ ಹೂಡಿಕೆದಾರರ ಅವಶ್ಯಕತೆ ಇದೆ. ಇದರಿಂದ ಇಲ್ಲಿನ ಯುವಕರು ಉತ್ತಮ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುವುದರಿಂದ ಉದ್ಯೋಗ ಅವಕಾಶ ಸೃಷ್ಠಿಗೆ ಪೂರಕವಾಗಲಿದೆ ಎಂದರು.

Vijayaprabha Mobile App free

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಎಂ.ಸಿ.ಎ. ಅಧ್ಯಕ್ಷ ಸತೀಶ್ ಸೈಲ್ ಇದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.