ಬೆಂಗಳೂರು: ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದ 3.73 ಲಕ್ಷ ಫಲಾನುಭವಿಗಳಿಗೆ ವಿಮಾ ಕಂಪನಿಗಳು 427 ಕೋಟಿ ಬಾಕಿ ಉಳಿಸಿಕೊಂಡಿರುವ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡುರಾವ್ ಅವರು ಟ್ವೀಟ್ ಮಾಡಿದ್ದೂ, ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದ 3.73 ಲಕ್ಷ ಫಲಾನುಭವಿಗಳಿಗೆ ವಿಮಾ ಕಂಪನಿಗಳು 427 ಕೋಟಿ ಬಾಕಿ ಉಳಿಸಿಕೊಂಡಿರುವುದು ದುರದೃಷ್ಟಕರ.ರೈತರಿಗೆ ಕೃಷಿಯೇ ಬದುಕಿನ ಆಧಾರ. ಬದುಕಿನ ಹಳಿ ತಪ್ಪದಿರಲು ಬೆಳೆಗಳಿಗೆ ರೈತರು ವಿಮೆ ಮಾಡಿಸುತ್ತಾರೆ. ಹೀಗಾಗಿ ವಿಮಾ ಕಂಪನಿಗಳು ಇಲ್ಲದ ನೆಪ ಹೇಳಿ ವಿಮೆ ನೀಡದಿರುವುದು ಸರಿಯಲ್ಲ.
ಕಳೆದ 3 ವರ್ಷಗಳಿಂದಲೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ರೈತರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರ ವಿಮೆ ಪಾವತಿಸಿ ಕರ್ತವ್ಯ ಮೆರೆಯಬೇಕು. ರೈತರಿಂದ ಪ್ರೀಮಿಯಂ ಪಾವತಿಸಿಕೊಂಡು ವಿಮೆ ನೀಡದಿದ್ದರೆ ಹೇಗೆ? ಕೃಷಿ ಸಚಿವರು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಪ್ರವಾಹ: ಆಗಸ್ಟ್ ತಿಂಗಳಲ್ಲಿ ಹೊರಡಿಸಿದ್ದ ಆದೇಶ ಮುಂದುವರೆಸಲು ರಾಜ್ಯ ಸರ್ಕಾರ ಅನುಮತಿ!
2
ಕಳೆದ 3 ವರ್ಷಗಳಿಂದಲೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ರೈತರ ಬದುಕು ಅಕ್ಷರಶಃ ಬೀದಿಗೆ ಬಂದಿದೆ.
ಈ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರ ವಿಮೆ ಪಾವತಿಸಿ ಕರ್ತವ್ಯ ಮೆರೆಯಬೇಕು. ರೈತರಿಂದ ಪ್ರೀಮಿಯಂ ಪಾವತಿಸಿಕೊಂಡು ವಿಮೆ ನೀಡದಿದ್ದರೆ ಹೇಗೆ?
ಕೃಷಿ ಸಚಿವರು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ತೆಗೆದುಕೊಳ್ಳಲಿ. https://t.co/MaJDDngT9J— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 21, 2020