ಸೈಬರ್ ಅಪರಾಧಗಳ ಜಾಗೃತಿಗಾಗಿ ‘ಪೊಸ್ಟರ್ ಅಭಿಯಾನ’

ಶಿರಸಿ: ನಗರದಲ್ಲಿ ಸೈಬರ್ ಅಪರಾಧಗಳ ಜಾಗೃತಿಗಾಗಿ ಶಿರಸಿ ನಗರ ಠಾಣೆಯ ಪೊಲೀಸರು ‘ಪೊಸ್ಟರ ಅಭಿಯಾನ’ವನ್ನು ಹಮ್ಮಿಕೊಂಡಿದ್ದಾರೆ. ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು…

ಶಿರಸಿ: ನಗರದಲ್ಲಿ ಸೈಬರ್ ಅಪರಾಧಗಳ ಜಾಗೃತಿಗಾಗಿ ಶಿರಸಿ ನಗರ ಠಾಣೆಯ ಪೊಲೀಸರು ‘ಪೊಸ್ಟರ ಅಭಿಯಾನ’ವನ್ನು ಹಮ್ಮಿಕೊಂಡಿದ್ದಾರೆ.

ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆ  ಹಾಗೂ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು ‘ಪೊಸ್ಟರ್ ಅಭಿಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಶಿರಸಿ ಉಪವಿಭಾಗದ ಡಿವೈಎಸ್ಪಿ  ಗಣೇಶ ಕೆ‌.ಎಲ್ ರವರು ಪೊಸ್ಟರ್ ಬಿಡುಗಡೆ ಮಾಡಿದರು.

ಶಿರಸಿ ನಗರ ಠಾಣೆಯ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕ್,‌ ಬಸ್ಟ್ಯಾಂಡ್, ಆಟೋ ಸ್ಟ್ಯಾಂಡ್, ಮಾಲ್ ಗಳು, ಮಾರುಕಟ್ಟೆಯಂತಹ ಜನಸಂದಣಿ ಪ್ರದೇಶಗಳಲ್ಲಿ ಪೊಸ್ಟರ್ ಅಭಿಯಾನ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹ  ಸೈಬರ್ ಸುರಕ್ಷತೆ, ಭದ್ರತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.

Vijayaprabha Mobile App free

ಕಾರ್ಯಕ್ರಮದಲ್ಲಿ ಶಿರಸಿ ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ, ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಜಂಜೇಶ್ವರ ಭಾವಾ, ಸಹಾಯಕ ವ್ಯವಸ್ಥಾಪಕ ಯೋಗೇಶ ಪಾಟೀಲ್ ಹಾಗೂ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.