ಮೂಲವ್ಯಾಧಿ, ಆಮಶಂಕೆಗೆ ಮನೆ ಔಷಧಿ
1. ಆಗತಾನೆ ಹಿಂಡಿದ ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ವಾರದವರೆಗೆ ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.
2. ಅರಿಶಿನ ಕೊನೆಯನ್ನು ನುಣ್ಣಗೆ ಅರೆದು ಮಜ್ಜಿಗೆಯಲ್ಲಿ ಹತ್ತು ದಿನಗಳ ಕಾಲ ಸೇವಿಸಿದರೆ ಮೂಲವ್ಯಾಧಿ, ರಕ್ತಬೇದಿ ನಿವಾರಣೆಯಾಗುತ್ತದೆ.
3. ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಮೂಲವ್ಯಾಧಿ ರೋಗಿಗೆ ಕೊಟ್ಟರೆ ಗುಣವಾಗುತ್ತದೆ
4. ಬಾಳೆ ಮರದ ಕಾಂಡದ ರಸ ಹಿಂಡಿ ಎಳೆ ನೀರಿನೊಂದಿಗೆ ಕುಡಿದರೆ ಆಮಶಂಕೆ, ಮೂಲವ್ಯಾಧಿ ರೋಗಿಗಳಿಗೆ ಶೀಘ್ರ ಗುಣ ಕಂಡು ಬರುತ್ತದೆ.
5. ನುಗ್ಗೆ ಎಲೆಗಳನ್ನು ಅರೆದು ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚಿದರೆ ಮೊಳಕೆಗಳು ನಶಿಸಿ ಹೋಗುತ್ತದೆ.
6. ಮೂಲವ್ಯಾಧಿಯಿಂದ ಬಳಲುತ್ತಿರುವವರು ಹಸಿ ಮೂಲಂಗಿಯನ್ನು ಸಾಕಷ್ಟು ತಿನ್ನುವುದರಿಂದ ಮೂಲವ್ಯಾದಿ ಕಡಿಮೆಯಾಗುತ್ತದೆ.
7. ಎಕ್ಕ ಮತ್ತು ನುಗ್ಗೆ ಎಲೆಗಳನ್ನು ನುಣ್ಣಗೆ ಅರೆದು ಆಸನಾಗ್ರದಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚುತ್ತಿದ್ದರೆ ಮೊಳಕೆಗಳು ನಾಶವಾಗುವುದು.
8. ಆಗತಾನೇ ಹಿಂಡಿದ ಹಸುವಿನ ಒಂದು ಬಟ್ಟಲು ಹಾಲಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ, ಕಾಲ ವಿಳಂಬ ಮಾಡದೆ ಸೇವಿಸಿ ಈ ಚಿಕಿತ್ಸೆಯಿಂದ ಒಂದು ವಾರದೊಳಗೆ ಮೂಲವ್ಯಾಧಿಯಲ್ಲಿ ಗುಣ ಕಂಡು ಬರುವುದು.
9. ಹಸಿರು ಕಾಳನ್ನು ನೀರಿನಲ್ಲಿ ನೆನೆಹಾಕಿ ಒಂದೆರಡು ಗಂಟೆಗಳ ನಂತರ ನೀರನ್ನು ಬಸಿಯಿರಿ. ಮಲ್ಬಣವಾಗುವುದಿಲ್ಲ. ಈ ನೀರನ್ನು ರೋಗಿಗೆ ಕುಡಿಸುತ್ತಿದ್ದರೆ ರೋಗ ಉಲ್ಬಣವಾಗುವುದಿಲ್ಲ.
ಇದನ್ನು ಓದಿ: ಮೊಡವೆಗಳಿಗೆ, ಮುಖದ ಮೇಲಿನ ಕಲೆಗಳಿಗೆ ಮನೆ ಔಷಧಿ