ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ವಾಷಿಂಗ್ಟನ್‌: ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರ ಕಟ್ಟಾ ಬೆಂಬಲಿಗ ಉದ್ಯಮಿ ಎಲಾನ್‌ ಮಸ್ಕ್‌ ಅವರ ಆಸ್ತಿ ಮೌಲ್ಯ 300…

ವಾಷಿಂಗ್ಟನ್‌: ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರ ಕಟ್ಟಾ ಬೆಂಬಲಿಗ ಉದ್ಯಮಿ ಎಲಾನ್‌ ಮಸ್ಕ್‌ ಅವರ ಆಸ್ತಿ ಮೌಲ್ಯ 300 ಬಿಲಿಯನ್‌ ಡಾಲರ್‌ (ಸುಮಾರು ₹25 ಲಕ್ಷ ಕೋಟಿ) ದಾಟಿದೆ.

ಜಗತ್ತಿನ ನಂ.1 ಶ್ರೀಮಂತನಾಗಿರುವ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಕಂಪನಿಯ ಷೇರುಗಳ ಮೌಲ್ಯ ಕಳೆದ ಐದು ದಿನಗಳಲ್ಲಿ ಶೇ.30ರಷ್ಟು ಹೆಚ್ಚಾಗಿದೆ. ಹೀಗಾಗಿ ಮಸ್ಕ್‌ ಆಸ್ತಿ 304 ಬಿಲಿಯನ್‌ ಡಾಲರ್‌ಗೆ ತಲುಪಿದೆ. ಅದರೊಂದಿಗೆ, ಜಗತ್ತಿನಲ್ಲಿ 300 ಬಿಲಿಯನ್‌ ಡಾಲರ್‌ಗಿಂತ ಹೆಚ್ಚು ಆಸ್ತಿ ಹೊಂದಿರುವ ಏಕೈಕ ಉದ್ಯಮಿಯಾಗಿ ಮಸ್ಕ್‌ ಹೊರಹೊಮ್ಮಿದ್ದಾರೆ ಎಂದು ಫೋರ್ಬ್ಸ್‌ ರಿಯಲ್‌-ಟೈಮ್‌ ಬಿಲಿಯನೇರ್‌ ಪಟ್ಟಿ ತಿಳಿಸಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗಿಂತ ಮೊದಲು ಮಸ್ಕ್‌ ಆಸ್ತಿ ಸುಮಾರು 250 ಬಿಲಿಯನ್‌ ಡಾಲರ್‌ ಇತ್ತು. ಶುಕ್ರವಾರ ಒಂದೇ ದಿನ ಟೆಸ್ಲಾ ಷೇರುಗಳ ಬೆಲೆ ಶೇ.8.19ರಷ್ಟು ಏರಿತ್ತು. ಹೀಗಾಗಿ ಮಸ್ಕ್‌ ಆಸ್ತಿ ಒಂದೇ ದಿನ ಶೇ.4.71ರಷ್ಟು ಏರಿಕೆ ಕಂಡಿತ್ತು.

Vijayaprabha Mobile App free

ಅಧ್ಯಕ್ಷೀಯ ಚುನಾವಣೆಯಲ್ಲಿ ಎಲಾನ್‌ ಮಸ್ಕ್‌ ಬಹಿರಂಗವಾಗಿ ಟ್ರಂಪ್‌ಗೆ ಬೆಂಬಲ ಘೋಷಿಸಿದ್ದರು. ಮಸ್ಕ್‌ ಒಡೆತನದ ‘ಎಕ್ಸ್‌’ ಕೂಡ ಟ್ರಂಪ್‌ ಪರ ಸಾಕಷ್ಟು ಕೆಲಸ ಮಾಡಿತ್ತು. ತಮ್ಮ ವಿಜಯ ಭಾಷಣದಲ್ಲಿ ಟ್ರಂಪ್‌ ಮಸ್ಕ್‌ಗೆ ಧನ್ಯವಾದ ಹೇಳಿದ್ದರು.ಅಯೋಧ್ಯೆ ರಾಮಮಂದಿರ ಕಾರ್ಯ ವಿಳಂಬ: ಜೂನ್ ಬದಲು ಸೆಪ್ಟೆಂಬರ್‌ನಲ್ಲಿ ದೇಗುಲ ಸಂಪೂರ್ಣ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.